ವಿಷಯದ ವಿವರಗಳಿಗೆ ದಾಟಿರಿ

ನೀಲಾಂಬಿಕೆಯಾ ತೀರದಲ್ಲಿ

ಡಿಸೆಂಬರ್ 17, 2012

[ಸುಮ್ಮನೆ ಸಾಗರ ತೀರದಲ್ಲಿ ಕುಳಿತು ಯೋಚಿಸಿದ ಅರ್ಥವಿಲ್ಲದ ಬರಹಗಳು]

ನಿನ್ನೆ ಸಂಜೆ ನಾನು ಸಾಗರ ತೀರದಲ್ಲಿ ಕುಳಿತು ಬರುವ ಅಲೆಗಳನ್ನೇ ದಿಟ್ಟಿಸುತ್ತಿದ್ದೆ, ಅದೆಸ್ಟು ವಿಶಾಲ ಸಾಗರ, ಬರುವ ಒಂದೊಂದು ಅಲೆಯು ಒಂದೊಂದು ವೈವಿದ್ಯತಯಿಂದ ಕೂಡಿತ್ತು,ಮರಳು ರಾಶಿಯ ಮದ್ಯದಲ್ಲಿ ಕುಳಿತು ನಾನು ದಿತ್ತಿಸುತ್ತಲೇ ಇದ್ದೆ, ಮುಳುಗುತ್ತಿದ್ದ ಸೂರ್ಯ ಕೆಂಪಾಗಿ ಕಂಗೊಳಿಸುತ್ತಿದ್ದ, ದೃಶ್ಯ ಅದ್ಭುತವಾಗಿತ್ತು, ನಾನು ನೋಡುತ್ತಲೇ ಇದ್ದೆ,

ನನ್ನ ಮನದಲ್ಲಿ ಅದೆಸ್ಟೋ ಪ್ರಶ್ನೆಗಳ ರಾಶಿ ಇತ್ತು, ಯಾರು ಈ ಸೂರ್ಯ, ಯಾರದು ಈ ಭೂಮಿ, ಯಾರು ಈ ನೀಲ ಜಲರಾಶಿ, ಎಲ್ಲಿಂದ ಬಂದಿರುವುದು ಈ ಸೌಂದರ್ಯ, ಎಲ್ಲಿಗೆ ಹೋಗುವುದು ಈ ಸೌಂದರ್ಯ, ಅದೆಸ್ಟೋ  ದೂರದ ಸೂರ್ಯ,ನಮ್ಮನ್ನೇಕೆ ಅವನ ಸುತ್ತ ಸುತ್ತುವಂತೆ ಮಾಡುತ್ತಾನೆ, ಬೆಳಕೆಂಬ ಮಾಯಜಿನ್ಕೆಯನ್ನು ತೋರಿಸಿ, ಕತ್ತಲೆಗೆ ದೂಡುತ್ತಾನೆ, ಕತ್ತಲೆ ಕವಿಯುವ ಮುನ್ನ ತಂಪಾದ ಸಂಜೆಯನು ಕರುಣಿಸಿ ಮಾಯವಾಗುತ್ತಾನೆ, ಆ ಸಂಜೆಯ ಬೆಳಕಿನಲಿ ನಮ್ಮ ಮನದ ಭಾವನೆಗಳನು ಬಿಗಿ ಹಿಡಿದು ಅಪ್ಪುವಂತೆ ಮಾಡಿ ಮರೆಯಾಗುತ್ತಾನೆ,ಪ್ರತಿ ದಿನವು ವಿಶಿಷ್ಟ ರೀತಿಯಲ್ಲಿ ನಮ್ಮನು ಸೆರೆಹಿಡಿದು ಬದುಕುವ ಆಸೆ ತೋರಿಸುತ್ತಾನೆ, ಅದೇ ಅವನ ಶಕ್ತಿ, ನನ್ನ ಮನದ ಪಯಣ ಸಾಗುತ್ತಲೇ ಇತ್ತು, ಎಲ್ಲಿಗೋ ಸಾಗಿತ್ತೋ ನನಗು ತಿಳಿಯಲಿಲ್ಲ ,,,,,,
ಸುತ್ತಲು ಕಣ್ಣಾಡಿಸಿದೆ, ಸೌಂದರ್ಯವನ್ನು ಮನಸಾರೆ ಸೆಳೆಯುತ್ತಿದ್ದ ಜನ, ಪ್ರೇಮದ ಇಂಪು ಎಲ್ಲೆಲ್ಲು ಬೀರಿ ಕ್ಷಣ ಮಾತ್ರದಲ್ಲಿ ಮಾಯವಾಗುತ್ತಿದ್ದ ಅಲೆಗಳು,ಅದರೊಳಗೆ ಹಾರಿ ಹೋಗುವ ಮಕ್ಕಳು, ಹೆದರಿ ಓಡಿಬರುವ ಹೆಂಗೆಳೆಯರು, ಮುನ್ನುಗ್ಗಿ ಹೋಗುವ ಗಟ್ಟಿ ಗಂಡಸರು, ಎಲ್ಲವನು ದೂರದಲ್ಲಿ ನಿಂತು ನೋಡಿ ತನ್ನ ಯವ್ವನವನು ನೆನಪು ಮಾಡಿಕೊಳ್ಳುತ್ತಿದ್ದ ಅಜ್ಜಿ ತಾತಂದಿರು,,,,,ಎಸ್ಟೊಂದು ಶಕ್ತಿ ಇದೆ ನೋಡಿ ಈ ಸಾಗರಕ್ಕೆ, ತನ್ನ ವಯ್ಯರವಾದ ಅಲೆಗಳನು ದಡಕ್ಕೆ ಚೆಲ್ಲಿ ಎಲ್ಲರನು ಸೆಳೆದು, ಏನನ್ನು ತನ್ನೊಳಗೆ ಇಟ್ಟುಕೊಳ್ಳದೆ ಎಲ್ಲವನು ತಂದು ದಡಕ್ಕೆ ಎಸೆದು ನಾನು ಸಂಪೂರ್ಣ ಬೆತ್ತಲೆ ಎಂದು ಹೇಳುವ ಜಗದೇಕ ಸುಂದರಿ ಈ ಸಾಗರ, ಈ ಸಾಗರವನ್ನು ಗಂಡೆಂದು ಕರೆಯೋಣವೇ? ಅಥವಾ ಹೆಣ್ಣು ಎಂದೋ? ಗಂಡಿನ ಭಂಡ ದೈರ್ಯವು ಇದರಲ್ಲುಂಟು, ಹೆಣ್ಣಿನ ವಯ್ಯಾರದ ಸೌಂದರ್ಯವು ಇದರಲ್ಲುಂಟು, ಕೆತನಟ್ಟದ ಸುಳಿವು ಇದರಲ್ಲಿ ಇಲ್ಲ, ಸಂಜೆಯ ಸೂರ್ಯನ ಕೆಂಪು ಕಿರಣಗಳಿಗೆ ತಕ್ಕಂತೆ ತನ್ನ ವನಪು ವಯ್ಯಾರಗಳನು ಮಾಡುವ ಈ ಜಲರಾಶಿಯನ್ನು ನೀಲ ಶಾಕುಂತಲೆ ಎಂದು ಕರದರು ತಪ್ಪಿಲ್ಲ, ಮತ್ತು ನಾವು ಹಾಗೆ ಕರೆಯೋಣ,,,
ಈ ಅರ್ಥವಿಲ್ಲದ ಬರಹಗಳಲಿ ಅರ್ಥ ತುಂಬಿಸಲು ನನ್ನಿಂದ ಸಾದ್ಯವೇ ಇಲ್ಲವೇನೋ, ಆದರು ಆ ಜಲ ರಾಶಿಯನ್ನು ವರ್ಣಿಸಲು ಭಾವನಾತ್ಮಕತೆಗಿಂತ ಬೇರೆ ಯಾವ ಪದಗಳು ಸರಿಹೊಂದಲಾರವು, ಅದೆಸ್ಟೋ ವರ್ಷಗಳಿಂದ ಕೂಡಿಟ್ಟ ನನ್ನ ಮನದ ಕೊಳೆಯನೆಲ್ಲ ತೊಳೆದ ಪ್ರೇಮದ ತೀರ ಈ ಸಾಗರತೀರ, ಮತ್ತೊಮ್ಮೆ ಮಗುವಾಗಬೇಕೆನಿಸಿತು ನನಗೆ, ತಲೆ ಬುಡ ಅರ್ತವಾಗದ ಚಿತ್ರಗಳೆಲ್ಲ ಮನದ ಮೂಲೆ ಇಂದಾ ಹೊರಬಂದು ಸಾಗರದಲ್ಲಿ ಲೀನವಾದವು,ಅದೆಸ್ತೋ ಜನರ ನೋವನೆಲ್ಲ ತನ್ನೊಳಗೆ ಬಚ್ಚಿಟ್ಟುಕೊಂಡು, ತನ್ನ ನೋವನ್ನು ಯಾರೊಂದಿಗೆ ಹೇಳಿಕೊಳ್ಳುವಳು ಈ ನೀಲಾಂಬಿಕೆ, ಯಾರೊಂದಿಗೆ ಹಂಚಿಕೊಳ್ಳುವಳು, ಯಾರಿದ್ದಾರೆ ??? ಆಕೆಯೊಂದಿಗೆ ಹೋಗಿ ಕೇಳಬೇಕೆನಿಸಿತು, ಹೋಗಿ ಕೇಳಲು ನನಗೆ ಬಿಗ್ಹುಮಾನವಿತ್ತು, ಆದರು ಹೋಗಿ ಆಕೆಯ ಮೈ ಸವರಿ ಕೇಳಿದೆ, ನನ್ನ ಸ್ಪರ್ಶದಿಂದ ನಾಚಿ ನೀರಾದಳು ಆಕೆ, ಕೇಳಿದೆ ನಾನು ಮೃದುವಾಗಿ, ಹೇಳು ನೀಲಾಂಬಿಕೆ ನಿನ್ನ ನೋವು ಕೇಳುವವರು ಯಾರು?? ನಿನ್ನೊಂದಿಗೆ ಅದೆಸ್ಟು ರಹಸ್ಯಗಳನು ಬಚ್ಚಿತ್ತುಕೊಂದಿರುವೆ, ಹೇಳು ಚೆಲುವೆ ನಿನ್ನ ಮನಸ್ಸಲ್ಲಿ ಏನಿದೆ ಎಂದು,,,,,,,,,,
ಆಕೆ ಕೊಟ್ಟ ಉತ್ತರ ನನ್ನನ್ನು ಮೂಕನನ್ನಾಗಿಸು,,,,,
“” ಓ  ಪ್ರೀತಿಯ ಹುಡುಗ, ಹೆಣ್ಣಿನ ಮನಸನು ಅರಿಯುವ ಸಾಹಸಕ್ಕೆ ಕೈ ಹಾಕಬೇಡ, ಪ್ರತಿಯೊಂದು ಹೆಣ್ಣು ಒಂದೊಂದು ಸಾಗರವಿದ್ದಂತೆ, ಅವಳನ್ನು  ಸಂಪೂರ್ಣ ಅರಿತ ದಿನವೇ  ಜಗತ್ತಿನ ಕೊನೆಯಾಗುತ್ತದೆ,,,,,,””
— ನೀವೇ ಹೇಳಿ ಇನ್ನೇನು ಕೇಳಲಿ ನಾನು ಈ ನೀಲಾಂಬಿಕೆಯಲ್ಲಿ,,,,,,,,,,,,,,,,,
ಮನೆಯ ಕಡೆಗೆ ನಡೆದೇ ನಾನು, ಸುಮ್ಮನೆ ದಾರಿ ನೋಡುತ್ತಾ,,,,,,
Advertisements

From → ಪಯಣ

One Comment
  1. Happy Devdaas permalink

    good one, keep moving

    Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: