Skip to content

“ಹುಟ್ಟಿಸಿದವ ಹುಲ್ಲು ಮೇಯಿಸಿಯಾನು”

ಫೆಬ್ರವರಿ 22, 2014

ಅದೊಂದು ಸೂರ್ಯನ ಕೃಪೆಗೆ ಪಾತ್ರವಾದ ಭೂಮಿ, ಅಲ್ಲಿ ಪ್ರಸವದ ನೋವಿನಲ್ಲಿ ನರಳಿದ ತಾಯಿ, ಬೆಪ್ಪನಂತೆ ಕುಳಿತ ಅಪ್ಪ, ನೋವು ತಾಳಲಾರದೆ ತಾಯಿ ಮಗುವ ಹಡೆದಾಯ್ತು ಆದರೆ ತಾಯಿಯ ಎದೆ ಹಾಲು ಬತ್ತಿತ್ತು, ಆದರೂ ಆಕೆಯ ಕಣ್ಣಲ್ಲಿ ಅಪರಿಮಿತ ಮಿಂಚು, ತಂದೆಯ ಮನದಲ್ಲಿ ಮಗುವಿನ ಭವಿಷ್ಯದ ಸಂಚು, ಹುಟ್ಟಿದ ಮಗು ಅಳಲೇ ಇಲ್ಲ, ಅಳುವ ಮೊದಲೆ ತನಗೆ ನೀರು ಬೇಕೆಂದು ಬಾಯಿ ಚಪ್ಪರಿಸಿತು, ತಾಯಿ ನಿರ್ಭಾವುಕಳಾಗಿ ನೋಡಿ ಸುಮ್ಮನಾದಳು, ಅವಳ ನಿರ್ಭಾವುಕತೆಯನ್ನು ಕಂಡು ಮಗು ತನಗೆ ನೀರು ಬೇಕೆ ಬೇಕೆಂದು ಹಠ ಹಿಡಿಯಿತು, ಈಗ ತಾಯಿ ಸಂತೈಸಲು ಮುಂದಾದಳು, ನೋಡು ಮಗನೆ ನೀ ಹುಟ್ಟುವ ಮೊದಲೆ ನಾವು ನಿನಗೆ ಎಷ್ಟೊಂದು ಸಂಪತ್ತನು ಮಾಡಿರುವೆವು, ಕಾಂಚಾಣದ ದೊಡ್ಡ ದೊಡ್ಡ ಮೂಟೆಗಳನ್ನೆ ರಾಶಿ ರಾಶಿ ಜೋಡಿಸಿಹೆವು, ಅಗೋ ಅಲ್ಲಿ ದೂರದಲ್ಲಿ ಬೆಟ್ಟ ಕಾಣುವುದೆ ?? ಹ್ಹ ಹ್ಹ ಅದು ಹೇಗೆ ಕಾಣುವುದು ? ಅದನ್ನು ನೆಲಸಮ ಮಾಡಿ ನಿನಗೆ ಅರಮನೆ ಕಟ್ಟಿಸಿಹೆವು, ಜೊತೆಗೆ ತಂದೆಯ ವಾಕ್ಯಗಳು ಸೇರಿಕೊಂಡವು, ನಿನ್ನ ಕಲಿಯುವಿಕೆಗೆ ಆಗಲೇ ಶಾಲೆಯಲ್ಲಿ ಸ್ಥಳ ಕಾಯ್ದಿರಿಸಲಾಗಿದೆ, ನೀ ಪವಡಿಸಲು ಮರವನ್ನೆಲ್ಲ ಕಡಿದು ಮಂಚ, ತೋಟ್ಟಿಲು ಮಾಡಿಸಲಾಗಿದೆ, ಎಲ್ಲಾ ಕಾಡು ಪ್ರಾಣಿಗಳನು ಕೊಂದು ಅವುಗಳ ಚರ್ಮದಲ್ಲಿ ನಿನಗೆ ತರ ತರ ವಸ್ತ್ರ ವಿನ್ಯಾಸ ಮಾಡಿ ಇಡಲಾಗಿದೆ, ಎಲ್ಲವನು ನೋಡು ಮಗನೆ, ನಿನ್ನ ಮುಂದಿನ ಭವಿಷ್ಯಕ್ಕೆ ಏನೇನು ಬೇಕೊ ಎಲ್ಲವನು ಮಾಡಿ ಮುಗಿಸಿರುವೆ, ಅದರೊಂದಿಗೆ ಹಾಯಗಿರು ಮಗು ಜೀವ-ಜಲ ಒಂದನು ಕೇಳುವುದ ಬಿಟ್ಟು.

ಮಗುವಿನದು ಮತ್ತದೆ ಹಠ,

ತಂದೆ ಮುಂದುವರೆಸಿದ ಎಲ್ಲಿಂದ ತರಲಿ ಮಗನೆ ಜೀವ ಜಲವನ್ನು, ಬೆಟ್ಟ ಕಡಿದು ನೆಟ್ಟಗೆ ಮಾಡುವಾಗ ಜಲವೆಲ್ಲ ಹರಿದು ಸಾಗರದ ಪಾಲಾಯ್ತು, ಮತ್ತೆಂದು ಮಳಯೆನ್ನುವುದ ನಾವು ಕಾಣಲಿಲ್ಲ, ನಿನ್ನ ಹೆರುವ ವರೆಗು ಜೀವ ಉಳಿದದ್ದೆ ಹೆಚ್ಚು,

ಇದನು ಕೇಳುತ್ತಿದ್ದಂತೆ ಮಗು ಉಸುರಿತು “ಜಲಂ ರಕ್ಷತಿ ರಕ್ಷಿತಃ”
ಅದರ ಉಸಿರು ನಿಂತಿತು,

ಜೊತೆಗೆ ತಾಯಿ ತಂದೆಯ ಎದೆ ಬಡಿತ ನಿದಾನವಾಗಿ ಸ್ತಬ್ಧವಾಯಿತು, ಕಟ್ಟಿಸಿದ ಅರಮನೆ ಮಾತ್ರ ಯಾವುದಕ್ಕು ಜಗ್ಗದೆ ಹಾಗೆ ನಿಂತಿತ್ತು,

“ಹುಟ್ಟಿಸಿದವ ಹುಲ್ಲು ಮೇಯಿಸಿಯಾನು, ನೀರ ಕುಡಿಸ್ಯಾನೇ ??”

‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍  ನವೀನ್ ಜೀ ಕೇ.

Advertisements
One Comment
  1. “ಜಲಂ ರಕ್ಷತಿ ರಕ್ಷಿತಃ” ಮಾರ್ಮಿಕ ಚುಟುಕು ಬರಹ.

    Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: