Skip to content

“ಹಾರುವ ಹಕ್ಕಿಯ ಇತಿಹಾಸ” ಪ್ರಪಾತದೊಳಗೆ

ಮಾರ್ಚ್ 8, 2014

shaastri-1 shaatri-2

        ಜಗದ ಸತ್ಯದೊಳಗೆ ವಿಜ್ಞಾನ ತೋರಿಸಿಕೊಟ್ಟಿದ್ದು ಕಡಲೆಕಾಳು ಗಾತ್ರದ್ದು ಎಂಬ ಸತ್ಯ ಎಲ್ಲರಿಗೂ ತಿಳಿದಿರುವುದು, ವಿಜ್ಞಾನವು ಸತ್ಯವನ್ನು ತರ್ಕಬದ್ದವಾಗಿ ದಾಖಲೆಗಳೊಂದಿಗೆ ವಿವರಣೆ ನೀಡುತ್ತಾ ಪ್ರತಿ ವಿಷಯವನ್ನು ಅಮೂಲಾಗ್ರವಾಗಿ ಹೇಳಿ ಸಾಧಿಸಿ ತೋರಿಸಬಲ್ಲದು, ಅದೇ ವಿಜ್ಞಾನದ ತಾಕತ್ತು ಕೂಡ, ಆದರೆ ವಿಜ್ಞಾನವೂ ವಿವರಿಸಲಾಗದ ಅನೇಕ ವಿಷಯಗಳು ಈ ಪ್ರಚಂಡ ವಿಶ್ವದಲ್ಲಿ ಇವೆ ಎಂದರೆ ತಪ್ಪಲ್ಲ, ವಿಜ್ಞಾನ ಎನ್ನುವ ಪದ ಬೆಳಕಿಗೆ ಬರುವ ಮುನ್ನವೂ ಜನಾಂಗ ಉನ್ನತ ಮಟ್ಟದಲ್ಲಿಯೇ ಬದುಕಿತ್ತು ಎನ್ನಲು ಅನೇಕ ಉದಾಹರಣೆಗಳು, ನಾಗರೀಕತೆಗಳು ನಮ್ಮ ಮುಂದೆ ಇವೆ, ಇಂತಹದೆ ಅತ್ಯಂತ ಶಕ್ತಿಯುತ ಇತಿಹಾಸ ಹೊಂದಿದ ರಾಷ್ಟ್ರ ನಮ್ಮ ಭಾರತ, ಇಂದು ಜಗತ್ತು ಏನನ್ನು ಬಯಸುತ್ತಿದೆಯೋ ಅದರ ಮೂಲ ಉತ್ತರ ಇರುವುದು ಭಾರತದಲ್ಲಿಯೇ ಎಂಬುದು ತಜ್ಞರ ಅಭಿಪ್ರಾಯ, ಆದರೆ ನಮ್ಮ ಇತಿಹಾಸ ಬೆಳಕಿಗೆ ಬರದೆ ಅನೇಕ ವಿಷಯಗಳು ನಶಿಸಿವೆ ಎನ್ನುವುದೂ ಸತ್ಯವೇ, “ನಲಂದಾ”ದಂತಹ ಅಪಾರ ಜ್ಞಾನಸಂಪತ್ತು ಮರೆಯಾದದ್ದು ನಮ್ಮ ದುರದೃಷ್ಟ, ಎಷ್ಟೋ ಬಾರಿ ಸ್ವಾರ್ಥಪರ ಸಾಧನೆಗೆ ಇತಿಹಾಸವನ್ನು ತಿರುಚುವ ಕೆಲಸಗಳೂ ಕೂಡ ನಡೆದಿವೆ ಎನ್ನಲು ಅನೇಕ ಸಾಕ್ಷಿಗಳಿವೆ, ಯಾರೋ ಮಾಡಿದ ಮಹತ್ಕಾರ್ಯದ ಫಲ ಇನ್ಯಾರಿಗೋ ಸಿಕ್ಕಿರುವುದು ಕೂಡ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ, ಇಂತಹದೆ ಇತಿಹಾಸದಲ್ಲಿ ಕಳೆದು ಹೋದ ನನ್ನದೇ ದೇಶದವರ,ನಾಡಿನವರ ಸಾಧನೆಗಳನ್ನು ಹುಡುಕುತ್ತಾ ಹೋಗುವಾಗ ಸಿಗುವ ರೋಮಾಂಚನಗೊಳಿಸುವ ಅನುಭವವೇ ಪ್ರಪಾತ,

ಏನಿದು ಪ? ಇದೊಂದು ಇತಿಹಾಸದಲ್ಲಿ ಕಳೆದು ಹೋಗಿ, ಕೆಲವು ಭಾರತೀಯರಿಗೆ ಇಂದಿಗೂ ಪ್ರಶ್ನೆಯಾಗಿ ಕಾಡುತ್ತಿರುವ “ಪ್ರಶ್ನೆಗೆ” ಉತ್ತರ ಹುಡುಕಲು ಹೊರಡುವ ಪರಿ, ಮೇಲ್ನೋಟಕ್ಕೆ ಹೆಸರಿಗೂ ವಿಷಯಕ್ಕೂ ಯಾವುದೇ ಸಂಬಂದ ಇಲ್ಲದಂತೆ ತೋರಿದರೂ, ಪ್ರಪಾತದ ಒಳಗೆ ಜಾರಿದಂತೆ ವಿಸ್ಮಿತರಾಗದೆ ಹೊರಬರಲು ಸಾದ್ಯವೇ ಇಲ್ಲ, ಅಲ್ಲಿಯೇ ಪ್ರಪಾತದ ಅನಾವರಣ,

ವಿಮಾನದಲ್ಲಿ ಪ್ರಯಾಣಿಸಿದ ಅನೇಕರಿಗೆ, ವಿಮಾನ ಕಂಡು ಹಿಡಿದದ್ದು ಯಾರು ಎನ್ನುವ ಪ್ರಶ್ನೆ ಕೇಳಿ ನೋಡಿ, ಅವರು ಕೊಡುವ ಉತ್ತರ “ಸರಿ-ಸಹೋದರರೆಂದು”(ರೈಟ್ ಬ್ರದರ್ಸ್ ನ್ನು ಸುಮ್ಮನೆ ಕನ್ನಡದಲ್ಲಿ ಬರೆದೆ) ಆದರೆ ಈ “ಸರಿ-ಸಹೋದರರು” ಸರಿಯೇ ಎಂದು ವಿಚಾರ ಮಾಡಿದರೆ, ಅವರಿಗಿಂತ ಮುಂಚೆ ಭಾರತೀಯ ನೆಲದಲ್ಲಿ ವಿಮಾನ ಹಾರಾಟದ ಪ್ರಯತ್ನ ನಡೆದಿತ್ತು ಎನ್ನಲು ಅನೇಕ ದಾಖಲೆಗಳು ನಮ್ಮಲ್ಲಿ ಸಿಗುತ್ತವೆ, ಆ ದಾಖಲೆಗಳನ್ನು ಕ್ರೂಡೀಕರಿಸಿ, ಇತಿಹಾಸವನ್ನು ಅನಾವರಣ ಗೊಳಿಸುವ ಸುಂದರ ಭಾರತೀಯತೆಯನ್ನು ಸಾರುವ ಸಿನಿಮಾವೇ “ಪ್ರಪಾತ”,

ಹಾರುವ ಹಕ್ಕಿಯ ಜಾಡು ಹಿಡಿದು ಹೊರಟ ವಿಶೇಷ ವ್ಯಕ್ತಿ ಬೇರಾರು ಅಲ್ಲ, ನಮ್ಮ ಅಪ್ಪಟ ಕನ್ನಡದ ನಟ, ನಿರ್ದೇಶಕ “ಸುಚೇಂದ್ರ ಪ್ರಸಾದ್”, ವಿಮಾನಯಾನ ನಮ್ಮದೇ? ಎನ್ನುವ ಪ್ರಶ್ನೆಯೊಂದಿಗೆ ಚಿತ್ರವನ್ನು ಪ್ರಾರಂಭಿಸುವ ಸುಚೆಂದ್ರರು ಕರಾರುವಕ್ಕಾದ ಅನೇಕ ವಿಷಯಗಳನ್ನು ಯಾವುದೇ ವೈಭವೀಕರಣ ಇಲ್ಲದೇ ತೆರೆಯ ಮೇಲೆ ಬಿಚ್ಚಿಡುತ್ತಾರೆ, ಬರಿಯ ಭಾಷೆಯ ಮುಷ್ಟಿಯೊಳಗೆ ಅಗಾಧವಾದ ಸತ್ಯಗಳನ್ನು ಅಡಗಿಸಿರುವ ವೇದಗಳು, ಶಾಸ್ತ್ರಗಳು ಪುರಾಣಗಳು, ಎಲ್ಲವನ್ನು ನೇರ ದೃಷ್ಟಿಇಂದಾ ನೋಡಲು ಯತ್ನಿಸುತ್ತಾರೆ,  ಪ್ರಪಾತ ಚಿತ್ರದಲ್ಲಿ  “ವೈಮಾನಿಕ ಶಾಸ್ತ್ರ” ಎಂಬ ಮಹಾನ್ ಗ್ರಂಥ ಬರೆದ ಭಾರದ್ವಜ ಮಹಾಮುನಿಗಳ ನೆನಪನ್ನು ಕಾಡಿಸಿ, ಅದಕ್ಕೆ ಭಾಷ್ಯ ಬರೆದ “ಆನೇಕಲ್ ಸುಬ್ಬರಾವ್ ಶಾಸ್ತ್ರಿಗಳು” ನಮ್ಮ ಮಧ್ಯದಲ್ಲೇ ಇದ್ದವರು, ಅದೂ ನಮ್ಮ ಕರ್ನಾಟಕದಲ್ಲೇ ಬದುಕಿದವರು ಎನ್ನುವ ಸತ್ಯವನ್ನು ಹೊರಗೆಡಹಿ, ಶಾಸ್ತ್ರಿಗಳ ಚಿತ್ರಣ ತುಂಬಾ ನೈಜವಾಗಿ ಮೂಡಿಬರುವಂತೆ ಮಾಡಿದ್ದಾರೆ, (ಆನೆಕಲ್ ಸುಬ್ಬಾರವ್ ಶಾಸ್ತ್ರಿಗಳು ಮುಂಬೈನ ಸಾಗರ ತೀರದಲ್ಲಿ ರೈಟ್ ಬ್ರದರ್ಸ್ ಗೆ ಮುನ್ನವೇ ವಿಮಾನ ಹಾರಿಸಿದ್ದರು ಎನ್ನುವ ಸತ್ಯವನ್ನು “ಕೇಸರಿ” ಪತ್ರಿಕೆ ವರದಿ ಮಾಡಿದ ವಿಶಯಗಳು ಅಂತರ್ಜಾಲದಲ್ಲಿ ಲಭ್ಯಇವೆ)

ಬಡತನದ ಬೇಗೆಯಿಂದಾ ಬಳಲಿ, ಸಂಸಾರದ ನೊಗವನ್ನು ಹೊತ್ತು, ಕೊನೆಗೆ ವಿಚಿತ್ರ ಕಾಯಿಲೆಗೆ ಗುರಿಯಾಗಿ ದಟ್ಟ ಅಡವಿಯಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸುವಾಗ ದಿವ್ಯ ತೇಜಸ್ಸಿನ ಋಷಿಗಳೊಬ್ಬರ ದರ್ಶನವಾಗಿ, ಅವರ ಕೃಪಾಕಟಾಕ್ಷದಿಂದ ರೋಗಮುಕ್ತನಾಗಿ, ಜೊತೆಗೆ ಸಂಸ್ಕೃತ ಕಲಿತು, ನಾಡಿಗೆ ಬಂದು ಸಾಮಾನ್ಯನಂತೆ ನೆಲೆ ನಿಂತು, ಕೊನೆಗೆ ಮಾಡಿದ ಸಾಧನೆ ವಿಶ್ವವೇ ಬೆರಗಾಗುವಂತದ್ದು, ಆದರೆ ವಿಶ್ವ ಅವರನ್ನು ಕಣ್ಣೆತ್ತಿಯೂ ನೋಡಲಿಲ್ಲ, ಕಾರಣ ನಮ್ಮನ್ನು ಆಗ ಆಳುತ್ತಿದ್ದವರ ಕ್ರೂರ ತನ ಎಂದರೂ ತಪ್ಪಲ್ಲ, ಹೀಗೆ ಪ್ರಾರಂಬಾವಾಗುವ ಚಿತ್ರ ನಮ್ಮನ್ನು ಚಿಂತನೆ ಎಡೆಗೆ ತಳ್ಳುತ್ತದೆ, ಸಂಶೋಧಕನೊಬ್ಬ ಸುಬ್ಬಾರಾವ್ ಶಾಸ್ತ್ರಿಗಳ ಜಾಡು ಹಿಡಿದು ಸಾಗುವಾಗ ಅವನಿಗೆ ಆಗುವ ಭಾರತೀಯ ಇತಿಹಾಸದ ಪರಿಚಯ ಅಪೂರ್ವವಾದುದು, ಆ ಪರಿಚಯವೇ ಪ್ರಪಾತ, ಇಲ್ಲಿ ಗಮನಿಸಬೇಕಾದ ಅಂಶಗಳೆಂದರೆ, ಇತಿಹಾಸವನ್ನು ಎಷ್ಟೇ ಕರಾರುವಕ್ಕಾದ ದೃಷ್ಟಾಂತಗಳೊಂದಿಗೆ ಹೇಳಿದರೂ, ನೋಡುಗನ ಮೇಲೆ “ನಿರ್ದೇಶಕ ಹೇಳಿದ್ದೆಲ್ಲವೂ ಸರಿ, ನೀನು ಒಪ್ಪಲೇ ಬೇಕು” ಎನ್ನುವ ಒತ್ತಡ ಇಲ್ಲ, ಆಲೋಚಿಸು ಆಲೋಚಿಸು ಎಂದು ನೋಡುಗನನ್ನು ಸದಾ ಚಿಂತನೆ ಎಡೆಗೆ ತಳ್ಳುತ್ತದೆ ಸಿನಿಮಾ, ನಮ್ಮ ಭಾರತದಲ್ಲಿ ಏನಿದೆ ಎಂದು ಪ್ರಶ್ನಿಸುವ ಜನರಿಗೆ, ಭಾರತದಲ್ಲಿ ಏನಿಲ್ಲ‌? ಎಂದು ಸಡ್ಡು ಹೊದೆಯುವ ಸೂಕ್ಷ್ಮ ವಿಚಾರಗಳು ಮನಮುಟ್ಟುತ್ತವೆ,

ಸಿನಿಮಾದ ಒಂದು ದೃಷ್ಟಾಂತವನ್ನು ಇಲ್ಲಿ ಪ್ರಸ್ತಾಪಿಸಲು ಇಷ್ಟ ಪಡುತ್ತೇನೆ,
ಸಹಸ್ರಾಕ್ಷಹ ಸಹಸ್ರಪಾತ್ ಶೀರ್ಷ ಭೂಮಿಂ
ವಿಶ್ವತಃ ವೃತ್ವ ಸಹ ಸಹಸ್ರಶೀರ್ಷ ದಶಾಂಗುಲಂ
ಅತ್ತಿತಿಶ್ತತ್ ಅತ್ ಪುರುಷಃ,,,,
ಇದರ ಅರ್ಥವನ್ನು ಸಾರವತ್ತಾಗಿ ವಿವರಿಸಿರುವುದನ್ನು ನೋಡಿದರೆ ವಿಜ್ಞಾನ ಇಂದು ಕಷ್ಟಪಟ್ಟು ಸಾಧಿಸಿ ತೋರಿಸಿದ್ದನ್ನು ನಮ್ಮ ಋಷಿ ಮುನಿಗಳು ಅಂದೇ ಕರಾರುವಕ್ಕಾಗಿ ಹೇಳಿದ್ದರು ಎಂದು ಪುಳಕಿತರಾಗುತ್ತೇವೆ,ಜೊತೆಗೆ ಅಯ್ಯೋ ನಾವು ಕಲಿತ ಇತಿಹಾಸದ ಪಠ್ಯ‌ದಲ್ಲಿ ಇವೆಲ್ಲ ಯಾಕಿಲ್ಲ ಎಂದು ದುಗುಡ ಹೊಂದುತ್ತೇವೆ, ಒಟ್ಟಾರೆಯಾಗಿ ಪ್ರತಿಯೊಬ್ಬ ದೇಶ ಪ್ರೇಮಿಯೂ ನೋಡಲೇಬೇಕಾದ ಸಿನಿಮಾ,

ಸಿನಿಮಾವನ್ನು “ಸುಚೇಂದ್ರ ಪ್ರಸಾದರೇ” ಖುದ್ದಾಗಿ ಪ್ರದರ್ಶನ ಏರ್ಪಡಿಸುತ್ತಾರೆ, ಅದರ ದಿನಾಂಕ, ಸಮಯ ಇತರ ವಿವರಗಳಿಗೆ ಅವರನ್ನು ಸಂಪರ್ಕಿಸಬಹುದು,

ಅವರ ದೂರವಾಣಿ ಸಂಖ್ಯೆ : 09448067308

ಪ್ರಪಾತದ ಬಗ್ಗೆ ಹಲವರ ಅಭಿಪ್ರಾಯಗಳನ್ನು ಹಾಗು ಚಿತ್ರದ ತುಣುಕುಗಳನ್ನು ನೋಡಲು ಈ ಲಿಂಕ್ : http://www.voicingsilence.com/prapaatha.html
ಆನೇಕಲ್ ಸುಬ್ಬರಾವ್ ಶಾಸ್ತ್ರಿಗಳ ಬಗ್ಗೆ ನೋಡಲು :  https://www.youtube.com/watch?v=dc7FceqnTBk&hd=1 (ಒಟ್ಟು ಐದು ವಿಭಾಗಗಳಿವೆ, ಎಲ್ಲವನ್ನು ವೀಕ್ಷಿಸಿ)

ಕೊನೆಯದಾಗಿ : ಈ ಚಿತ್ರವನ್ನು ನೋಡಿದ ನಂತರ, ಈ ಚಿತ್ರಕ್ಕೆ ಪ್ರಪಾತ ಎನ್ನುವ ಹೆಸರನ್ನೇ ಯಾಕೆ ಸೂಚಿಸಿರಬಹುದು ಎನ್ನುವ ಜಿಜ್ಞಾಸೆ ಮನದಲ್ಲಿ ಮೂಡುತ್ತದೆ, ಕಾರಣ ಇಷ್ಟೇ “ನಾವು ಪ್ರಪಾತದಲ್ಲಿದ್ದೇವೆ, ಪ್ರಪಾತದಷ್ಟು ಆಳಕ್ಕೆ ಇಳಿದು, ಆಕಾಶದಲ್ಲಿ ಹಾರಾಡುತ್ತಿರುವ ವಿಮಾನವನ್ನು ನೋಡುತ್ತಿದ್ದೇವೆ, ಅಷ್ಟು ಆಳದಿಂದ, ಅಷ್ಟು ಎತ್ತರ ನೋಡಲು ಹೇಗೆ ಸಾಧ್ಯ? ಎನ್ನುವ ಪ್ರಶ್ನೆ ಅಲ್ಲವೇ? ಅದಕ್ಕೆ ಉತ್ತರವೇ ಪ್ರಪಾತ”

(ಚಿತ್ರ ಕೃಪೆ- ಅಂತರ್ಜಾಲ)

ಧನ್ಯವಾದಗಳೊಂದಿಗೆ
-ನವೀನ್ ಜೀ ಕೇ

Advertisements
One Comment
  1. ದೂರವಾಣೀ ಸಂಖ್ಯೆ ಕೊಟ್ಟು ಉಪಕಾರ ಮಾಡಿದ್ದೀರಿ. ನಮ್ಮ ಅಪ್ಪಟ ಕನ್ನಡದ ನಟ, ನಿರ್ದೇಶಕ “ಸುಚೇಂದ್ರ ಪ್ರಸಾದ್” ಅವರ ದೂರವಾಣಿ ಸಂಖ್ಯೆ : 09448067308

    Liked by 1 person

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: