Skip to content

ಉತ್ತರ ಬೇಕಿದೆ

ಮಾರ್ಚ್ 28, 2014

ಬಹಳ ದಿನಗಳಿಂದ ಪ್ರಶ್ನೆಗಳು ಕಾಡುತ್ತಿವೆ, ಇಂದು ನಿಮ್ಮೆಲ್ಲರಲ್ಲಿ ಕೇಳಬೇಕೆನಿಸಿದೆ,,,ಪ್ರಾಜ್ಞರು ದಯವಿಟ್ಟು ಉತ್ತರಿಸಿ,,,,

೧) ರಾಜಕೀಯ ಎಂದರೇನು? ಅದನ್ನು ಹೇಗೆ ವ್ಯಾಕ್ಯನಿಸಬಹುದು ?

೨) ರಾಜಾಕೀಯ ಒಂದು ವೃತ್ತಿಯೇ ?

೩) ರಾಜಕೀಯಕ್ಕೆ ಸೇರಿದ ಎಲ್ಲರನ್ನು ದ್ವೇಷಿಸುವ ಪಾಠವನ್ನು ಹಿರಿಯರು ಏಕೆ ಹೇಳಿಕೊಡುತ್ತಾರೆ ?

೪) ಎಲ್ಲಾ ರಾಜಕೀಯ ವ್ಯಕ್ತಿಗಳ ದ್ಯೇಯ ಜನಸೇವೆಯೇ  ಆದರೆ, ಅವರ್ಯಾಕೆ ಪಕ್ಷ ಎನ್ನುವ ಗುಂಪಿನ ಮೊರೆ
ಹೋಗಬೇಕು ?

೫) ರಾಜಕೀಯಕ್ಕೆ ಸೇರಲು ಯಾವುದೇ ಪರೀಕ್ಷೆ ಅಥವಾ ಇನ್ನ್ಯಾವುದೇ ಸಂದರ್ಶನದ ಅವಶ್ಯಕತೆ ಇಲ್ಲ! ಏಕೆ ಹೀಗೇ ?    ( ಬರಿಯ ಒಂದು ಚಿಕ್ಕ ಕಂಪನಿಯ ಹುದ್ದೆಗೆ ಪರೀಕ್ಷೆ ಎದುರಿಸಬೇಕು, ಅಭ್ಯರ್ಥಿಯ ಸಂದರ್ಶನ ಏರ್ಪಡಿಸಿ, ಅವರ ಗುಣಮಟ್ಟ ಅಳೆಯಬೇಕು, ಅದೇ ಇಡೀ ದೇಶವನ್ನು ಯಾಕೆ, ಯಾವ ಮಾನದಂಡದಿನ್ದಲೂ ಅಳೆಯದೇ ವ್ಯಕ್ತಿಯ ಕೈಗೆ ಒಪ್ಪಿಸುತ್ತೇವೆ  )

೬) ಪ್ರತಿಯೊಂದು ಕೆಲಸಕ್ಕೂ ಹಣ ನಮ್ಮದೇ, ಆದರು ರಾಜಕೀಯ ವ್ಯಕ್ಥಿಗಳೇಕೆ ನಮ್ಮನ್ನು ಆಳುವ ವ್ಯಕ್ತಿಗಳಾಗುತ್ತಾರೆ?

೭) ಶಾಲೆಯಲ್ಲಿ  ಪಾಠದ ವೇಳೆ ಮಗು ನಿದ್ರಿಸಿದರೆ ಅದಕ್ಕೆ ಶಿಕ್ಷೆ, ಅದೇ ಇಡೀ ದೇಶದ ಬಗ್ಗೆ, ಜನರ ಬಗ್ಗೆ ನಿರ್ಧರಿಸುವ ಸಭೆಯಲ್ಲಿ ಎಲ್ಲರೂ ಮಲಗಿರುತ್ತಾರೆ! ಅವರನ್ನು ಶಿಕ್ಷಿಸುವವರಿಲ್ಲ ಯಾಕೆ ?

೮) ಸಾಮಾನ್ಯವಾಗಿ ರಾಜಕರಣಿಗಳಿಗೇಕೆ ದೊಡ್ಡ ಹೊಟ್ಟೆ ಇರುತ್ತದೆ ?

೯) ನಾನು ರಾಜಕೀಯಕ್ಕೆ ಸೇರುತ್ತೇನೆ ಎಂದಿದ್ದಕ್ಕೆ, ನನ್ನ ಗೆಳೆಯರು ಹಾಗು ಬಂದುಗಳು ಒಂದೇ ಉಸಿರಿನಲ್ಲಿ ನನ್ನ ಬೈದು “ಅಧಿಕಪ್ರಸಂಗಿತನ” ಬೇಡ ಎಂದಿದ್ದು ಯಾಕೆ ?

೧೦) ರಾಜಕೀಯ ಒಳ್ಳೆಯದೋ? ಕೆಟ್ಟದೊ ?

೧೧) ರಾಜಕೀಯದ ಒಳ ಗುಟ್ಟುಗಳು ಎಂದರೇನು ?

೧೨) ಸಾಮಾನ್ಯವಾಗಿ ಜನ ಮಾತನಾಡುವಾಗ “ಅವನಿಗೆ ರಾಜಕೀಯ ನಂಟಿದೆ, ಒಳ್ಳೆ ಹೋಲ್ಡ್ ಇದೆ, ಏನು ಬೇಕಾದರೂ ಮಾಡಬಲ್ಲ ಎಂದು ಹೇಳುತ್ತಾರೆ, ಸರಕಾರೀ ಕಚೇರಿಗಳ ಕೆಲಸಕ್ಕೆ ಅವನನ್ನು ಹಿಡಿದರೆ ಆಗುತ್ತದೆ ಎನ್ನುತ್ತಾರೆ ” ,,,,,, ಹಾಗಾದರೆ ಸಾಮಾನ್ಯನಾದ ನಾನು ಸರಕಾರೀ ಕಚೇರಿಯಲ್ಲಿ “ಇನ್ ಕಂ  ಸರ್ಟಿಫಿಕೆಟ್ ನ್ನು  ಯಾರ ಸಹಾಯವೂ ಇಲ್ಲದೆ ಮಾಡಿಸಲು ಆಗುವುದೇ ಇಲ್ಲ, ಎಂದರೆ ನಾನ್ಯಾಕೆ ರಾಜಕೀಯ ವ್ಯಕ್ತಿಗಳು ಹಾಕುವ  ನಿಯಮಗಳಿಗೆ ಬದ್ದನಾಗಿರಬೇಕು ?”

೧೩) ರಾಜಕೀಯ ವ್ಯಕ್ತಿಗಳು ಬರುವ ಹಾದಿಯಲ್ಲಿ ನಮ್ಮನ್ನು ತಡೆದು ನಿಲ್ಲಿಸಿ ಕಾಯಿಸುವುದು ಯಾಕೆ ?

೧೪) ನಾನು ರಾಜಕರಣಿಯಾದರೆ “ಎಲ್ಲ ಪಕ್ಷಗಳು ಒಂದೇ ಎಂದು ಸಾರಿ, ಜನರ ಕಷ್ಟವನ್ನು ಪರಿಹರಿಸೊಣ ಎಂದು ಪಣ ತೊಡುತ್ತೇನೆ !” ಎಂದರೆ ನನ್ನ ಗೆಳೆಯರು ನಗುವುದು ಯಾಕೆ ?

೧೫) “ಖಜಾನೆಯಲ್ಲಿರುವ ಹಣ ಎಷ್ಟು? ಅದನ್ನು ಪ್ರತಿ ದಿನ ಹೇಗೆ ಬಳಸುತಿದ್ದೀರಿ ? ಎಂದು ದಾಖಲೆ ಸಮೇತ ದಿನವು ದಿನಪತ್ರಿಕೆಯಲ್ಲಿ ಹಾಕಿ” ಎಂದು ರಾಜಕಾರಣಿಗಳನ್ನು ಕೇಳಬಹುದೆ ?

೧೬) ಚುನಾವಣೆಗೆ ಹಣ ಬೇಕಾಗುತ್ತದೆ ಎನ್ನುತ್ತಾರೆ ? ಹೇಗೆ ಬೇಕು? ಯಾಕೆ ಬೇಕು ?

೧೭ ) ತಪ್ಪು ಮಾಡಿದ ರಾಜಕೀಯ ವ್ಯಕ್ತಿಗಳನ್ನು ನಾವೆಲ್ಲ್ಲ ಯಾಕೆ ಇನ್ನೊಮ್ಮೆ ಚುನಾವಣೆಗೆ ನಿಲ್ಲಲು ಅವಕಾಶ ಕೊಡುತ್ತೇವೆ?

೧೮) ರಾಜಕೀಯ “ರಂಗ” ಎಂದು ಕರೆಯುವುದು ಯಾಕೆ ?

ಪ್ರಶ್ನೆಗಳು ತಪ್ಪೆನಿಸಿದರೆ ತಿದ್ದಿ,,,,, ಉತ್ತರ ಗೊತ್ತಿದ್ದರೆ ದಯವಿಟ್ಟು ತಿಳಿಸಿ,,,,

Advertisements
ನಿಮ್ಮ ಟಿಪ್ಪಣಿ ಬರೆಯಿರಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: