Skip to content

ಕಿರು ಕವಿತೆಗಳು

ಏಪ್ರಿಲ್ 30, 2014

ನಾನೀಗ ತಾಯಿ,,

ಭಾವನೆಗಳು ಬಸಿರಾಗಿ
ನವಮಾಸ ತುಂಬಿ
ಪ್ರಸವಿಸಿತು ಕಾವ್ಯ,

ನಾಮಕರಣಕ್ಕೆ ಬರುವಿರಾ?
ಹೊಸ ಹೆಸರು ಕೊಡುವಿರಾ ?

————————————–

*ಭಾವ ಕರಗಿ ಹನಿಯಾಗಿ,,, ಮಳೆ ಸುರಿದು,
ನೆನೆದವರೆಲ್ಲ ಒದ್ದೆ,,,,,,,ಕಣ್ಣೀರಲಿ,,,,,,,,,*

————————————–

* ಕಪ್ಪು ರಾತ್ರಿಯಲಿ ಕಂಡ ಕನಸು
ಮಾಯವಾಗಿದೆ ಬೆಳಕಿಗೆ ಹೆದರಿ,,,,,*

—————————————

* ಬೆಂದ ಅನ್ನದ ಅಗುಳು ಕೊಪಗುಳ್ಳುವುದೇ?
ಅಗಿದು ತಿನ್ನುವ ಹಲ್ಲಿನ ಮೇಲೆ,,,,*

————————————–

ಭಾವ ಬಸಿದು, ರಾಗ ಸುರಿದು,
ಬರೆದೆ ಪ್ರೇಮ ಪತ್ರ

ಓದಿದಾಕೆ ನಾಪತ್ತೆ,,,,,,

ನನಗೇನಾದರೂ ಆಪತ್ತೆ???

————————————-

ಕಣ್ಣಿರದ ನನ್ನ ಕಾವ್ಯಳಿಗೆ 
ಸಾವಿರ ಕಲ್ಪನೆಯ ಬಣ್ಣಗಳು
ಕಣ್ಣಿದ್ದು ನಾ ಕಾಣದಾದೆ,

–ಜೀ ಕೇ ನ

Advertisements
One Comment
  1. ಬಿಡಿ ಹನಿಗಳು ಇಷ್ಟವಾದವು.

    Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: