ವಿಷಯದ ವಿವರಗಳಿಗೆ ದಾಟಿರಿ

“ಆಕೆಯ ಪ್ರೇಮ, ನನ್ನ ಕಥೆ”

ಜೂನ್ 9, 2014

ಆಕೃತಿ ಇರದ ಪ್ರತಿಕೃತಿಗೆ
ದಿನವೂ ಕನಸು ಕಾಣುವ
ಪಕ್ಕದ ಮನೆ ಹುಡುಗಿ

ಕಿಟಕಿ ಸಂದಿನಲ್ಲಿ ಚಂದಿರನ ಇಣುಕಿ,
ತನ್ನಷ್ಟಕ್ಕೆ ಗುನುಗುವ ಹಾಡಿಗೆ
ನಾನು ಮುಗುಳ್ನಕ್ಕರೆ,
ಆಕೆಯ ಮುಂಗುರುಳು ನಾಚುವುದು,

ಮನದಲ್ಲೇ ಕಟ್ಟಿದ ಆಕೆಯ
ಹಕ್ಕಿ ಗೂಡು, ಯಾವುದೊ ಊರಿನ
ಹುಡುಗನ ಒಡಲಿಗೆ
ಯಾವ ಹೂವು ಯಾರ ಮುಡಿಗೋ,,,

ಆಕೆ ನೋಡುವುದ ಬಿಟ್ಟಿಲ್ಲ
ಕಿಟಕಿ ಸಂದಿನಲ್ಲಿ,,
ನನ್ನನ್ನೋ? ಚಂದ್ರನನ್ನೋ ?

ಮೂಡನಂತೆ ಬರಿ ಮುಗುಳ್ನಗು ನನ್ನದು ,,,,
ಆಕೆಯ ಮದುವೆಗೆ ನನ್ನದೇ
ಚಪ್ಪರದ ಮುಂದಾಳತ್ವ,

ಕದ್ದು ಕರೆದಳು, ಬೆಚ್ಚಿ ನೋಡಿದೆ,
ಚಂದ್ರನೆಡೆಗೆ ತೋರಿದಳು ಕೈ,,,
ಅಗೋ ನೀ ಅಲ್ಲಿ, ಮತ್ತೆ ಮೂಡ ನಾನು,
ನಕ್ಕೆ ಸುಮ್ಮನೆ,
ಎಂದೂ ನನ್ನ ಮುಟ್ಟದವಳು
ಮುಷ್ಠಿ ಕಟ್ಟಿ ಗುದ್ದಿದಳು “ಎದೆಗೆ”

ಮುನಿಸಿಕೊಂಡು,,, ಹೋಗೆಂದಳು
ನಾನು ಹೊರಟೇ ಮುಗುಳ್ನಕ್ಕು,,,,
ಮತ್ತೆ ಕೈ ಹಿಡಿದು ಎಳೆದು
ಕಣ್ಣಲ್ಲಿ ಕಣ್ಣಿತ್ತು ನೋಡೆಂದಳು

ಕ್ಷಣ ಕಾಲ ಅಧುರಿದೆ ನಾನು,,,,
ಆಕೆಯ ಕಣ್ಣಲ್ಲಿ ಕಂಡಿದ್ದು ನಾನೇ,,,,
ಹೌದು ಅದು ನಾನೇ,,,,

ನಾನೇ ಕಟ್ಟಿಸಿದ ಚಪ್ಪರಕ್ಕೆ
ಕರೆದೊಯ್ದೆ ಆಕೆಯ ಕೈ ಹಿಡಿದು,,,
ಕಿರುಚಿದೆ ಜೋರಾಗಿ, ನನ್ನವಳು ಈಕೆ,,,
ಯಾರು ತಡೆಯಲೇ ಇಲ್ಲ ನನ್ನ ಯಾಕೆ ?
ಅವ್ವ ಅಪ್ಪನ ಮುಸಿ ಮುಸಿ ನಗು,,,,

ನನ್ನದೇ ಮುಂದಾಳತ್ವದ ಚಪ್ಪರದಲ್ಲಿ
ನನ್ನದೇ ಮದುವೆ !!

ಈಗಲು ಕಿಟಕಿಯ ಬಳಿ ನಿಂತು,
ನೋಡುತ್ತಾಳೆ ಆಕೆ,
ನನ್ನ ತಲೆಗೆ ಮೊಟಕುತ್ತಾ,,,
ತುಟಿ ಅಂಚಲ್ಲೆ ನಗುತ್ತಾ,,,,,

ನಿಮ್ಮ ಟಿಪ್ಪಣಿ ಬರೆಯಿರಿ

ನಿಮ್ಮ ಟಿಪ್ಪಣಿ ಬರೆಯಿರಿ