Skip to content

ಬೆಟ್ಟದ ಚಿಟ್ಟೆಯ ಕನಸು

ಜೂನ್ 25, 2014

ಬೆಟ್ಟದ ಮೇಲಿನ ಚಿಟ್ಟೆಯ ಕನಸು
ಬಟ್ಟೆ ಹೊಲಿಯುವವಳ ಮಗಳಿಗೆ
ದಿನವೂ ತಾನು ಬೆಟ್ಟ ನೋಡುತಾ
ಹೊಲಿಯುವಳು, ದಾರವ ಪೋಣಿಸಿ

ಮುಂದೊಂದು ದಿನ ಬೆಟ್ಟದ ಎತ್ತರದಲ್ಲಿ
ಚಿಟ್ಟೆಯ ಹಿಡಿದು ಕುಳಿತರೆ, ಸಾರ್ಥಕ,,
ಬಣ್ಣ ಬಣ್ಣದ ಬಟ್ಟೆಯ ಮೇಲ್ಮೈ ಮೇಲೆ,
ಚಿಟ್ಟೆಯದೇ ಚಿತ್ತಾರ, ಕನಸಿನಲಿ,

ಆಕೆ ಬೆಳೆದಳು,ಜೊತೆಗೆ ಬೆಟ್ಟದ ಕನಸೂ
ಅದೊಂದು ಮುಂಜಾನೆ ಬಣ್ಣದ ಬಟ್ಟೆಯ
ಉದ್ದ ಕೂದಲಿನವನ ಜೊತೆ ಹಾರಿದಳು
ಬೆಟ್ಟಕ್ಕೆ, ಮನಸಲ್ಲೇ ಚಿಟ್ಟೆ ಕಾಣುತಾ.

ಸಂಜೆ
ಬೆಟ್ಟವೇರಿದ ಆಕೆಗೆ ಚಟ್ಟ ಏರಿದ ಅನುಭವ
ಬೆಟ್ಟದಲಿ ಬರಿಯ ಮನೆಗಳ ರಾಶಿ,
ಚಿಟ್ಟೆಗಿರಲಿ, ಹಾಕಿದ ಬಟ್ಟೆಗೂ ಜಾಗವಿಲ್ಲ.
ಕದಡಿತು ಮನ, ಮರುಗಿ ಮುದುಡಿತು

ಬರಿಯ ಜನ ಜಾತ್ರೆ, ಸುತ್ತಲೂ ಹಲವು
ಬಣ್ಣ ಬಣ್ಣದ ಮಾತಿನಲಿ, ಬಣ್ಣ ಕಟ್ಟಿ ರೋಡಿನಲ್ಲೂ
ನರ್ತಿಸುತಾ, ಬದುಕಿನ ಛಾಯೆಯನ್ನೇ
ಬದುಕೆಂದುಕೊಂಡ ಜನ, ಬದುಕುತ್ತಿದ್ದಾರೆ,

ತಾನು ಜೊತೆಗೆ ಬಂದ, ಬಣ್ಣದ ಬಟ್ಟೆಯವನೂ
ದಿನವೂ ಒಂದೊಂದು ಬಣ್ಣ ಕಟ್ಟುವವ, ಅಬ್ಬಾ
ಬಟ್ಟೆ ಹೊಲಿಯುವವಳ ಮಗಳು ಬೆಚ್ಚಿದಳು
ಬೆಟ್ಟವೆಂದರೆ ದೂರದಿಂದಾ ನುಣ್ಣಗೆ,

ಆಕೆಯ ಕೌತುಕದ ಕಣ್ಣು, ಸತ್ತಾಗಿತ್ತು ಹಳಸಿ
ಬೆಂದು ಹಿಂತಿರುಗಿ ಬಂದಳು, ಹೆತ್ತವಳೇ ಎನ್ನುತಾ!!
ಇನ್ನೆಲ್ಲಿ ಹೆತ್ತವಳು?? ಬಣ್ಣವಿರದ ಬಿಳಿ ಬೆಟ್ಟೆಯಲಿ
ಸುತ್ತಿಟ್ಟ ಹೆತ್ತವಳ ಶವ ಆಕೆಯನು ಸ್ವಾಗತಿಸಿತು,,,

 

Advertisements
2 ಟಿಪ್ಪಣಿಗಳು
  1. ‘ಬೆಟ್ಟವೆಂದರೆ ದೂರದಿಂದಾ ನುಣ್ಣಗೆ’ ಅಲ್ಲವೇ ಮತ್ತೆ?

    ‘ಬೆಟ್ಟವೇರಿದ ಆಕೆಗೆ ಚಟ್ಟ ಏರಿದ ಅನುಭವ’ ಹಲವು ಪ್ರೇಮ ಪ್ರಕರಣಗಳ ಪರ್ಯಾವಸಾನದಂತಿದೆ!

    Like

    • ಪ್ರೇಮ ಎಂಬ ಪದಕ್ಕಂಟಿದ ಕಳಂಕ ಬಿಡಿಸಿದರೆ ಸರಿ ಹೋಗಬಹುದೇನೋ ಸರ್, ಅರ್ತೈಸಿಕೊಳ್ಳುವುದರಲ್ಲಿ ಎಡವುತ್ತಿದ್ದೇವೆ ಎನಿಸುತ್ತಿದೆ, ಪ್ರತಿಕ್ರಿಯೆಗೆ ಧನ್ಯವಾದಗಳು ಸರ್

      Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: