Skip to content

ತಾಯಿಯ ಮಡಿಲಲ್ಲಿ,,,

ಜೂನ್ 27, 2014

(ಕರ್ಮವೀರ ವಾರಪತ್ರಿಕೆಯಲ್ಲಿ ಪ್ರಕಟವಾದ ಕವಿತೆ )

Karmaveera, 9 March 20141 _DigitalEdition copy

 

(ಮೂಲ ಬರಹ,,,, )

ಕತ್ತಲೆಯಲಿ ಕಣ್ಮುಚ್ಚಿ
ಆತ್ಮ ಕಂಡ ದೇಶಕ್ಕೆ
ಯಾಕೆ ಬೇಕು ಬೆಳಕು
ಪಾಶ್ಚಾತ್ಯರ ತಳುಕು,

ಮೈ ಮುಚ್ಚಿ ಮನ ಬಿಚ್ಚಿ
ನನ್ನ ಸಾಕಿದವಳು
ಕತ್ತಲೆಯ ತಂಪಿನಲಿ
ಎದೆಹಾಲ ಕುಡಿಸಿದಳು
ಈಗ ಮೈ ಬಿಚ್ಚಿರುವಳು
ಮನವ ರೊಚ್ಚೆ ಎಬ್ಬಿಸಿ
ಬೆಳಕಿನಲೇ ಬೆತ್ತಲಾಗಿಹಳು

ದೊಚುತ್ತಿರುವರು ಆಕೆಯ ಮಾನವ,
ನಮ್ಮೆದೆಯ ಸ್ವಾಭಿಮಾನವ
ನಾವೆಲ್ಲ ನಗರದಲೇ ತಿಣುಕಾಡೊ
ನೆರಳಿಲ್ಲದ ನರ ಮಾನವರು

ಅನ್ನ ಬೆಳೆವವನು ತಿರುಕ
ಅನ್ಯರ ಚಾಕರಿ ಮಾಡುವವನು
ಧನಿಕ ಅತೀ ಧನಿಕ
ಸತ್ತಿದೆ ನನ್ನಂತವರ ಗಮಕ
ಬೆಳಕು ಕಾಣೊ ಆಸೆಯಲಿ
ಮಾರಿದೆವು ನಮ್ಮೆದೇ ಸ್ವಮುಖ
ಮುಖವಾಡ ಇನ್ನೀಗ
ಹಗಲು ಬೆಳಕಿನಲೇ ನಾಟಕ
ಇನ್ನೊಬ್ಬನ ಮನೆಯ
ನಾಯಾಗಿ ನಮ್ಮ ಕಾಯಕ

ಸೆಳೆದಿಹರು ನಮ್ಮನು
ಯಂತ್ರ-ಕುತಂತ್ರ ರಾಶಿಯೊಳಗೆ
ಮರೆತಿಹವು ನಾವು ನಮ್ಮನೊಡೆದ
ಪರ-ಮಂತ್ರವ,
ಇನ್ನಾವ ಹುನ್ನಾರ ಕಾದಿದೆಯೊ
ನನ್ನ ಜಗದ ಮಕ್ಕಳಿಗೆ
ಕರುಣಾಳು ಬೆಳಕೇ ಬಿಟ್ಟು ತೊಲಗು
ರಕ್ತ ಸುರಿಸಿ ಕಟ್ಟಿದ ನನ್ನ ದೇಶವ,
ಬದುಕಲು ಬಿಡು ಕತ್ತಲೆಯ
ತಂಪಿನೊಳಗೆ
ನನ್ನ ಭಾರತಾಂಬೆಯ
ಮಡಿಲಿನೊಳಗೆ.

–ನವೀನ್ ಜೀ ಕೇ

Advertisements
4 ಟಿಪ್ಪಣಿಗಳು
 1. ಇಂದು ವ್ಯವಸಾಯವೆಂದರೆ – ನೀನು ಸಾಯ ನಾನು ಸಾಯ ಎನ್ನುವಂತಾಗಿದೆ ಎನ್ನುವುದು ಚಲನಚಿತ್ರ ಒಂದರ ಮಾತು.
  ತಮ್ಮ ಈ ಕವನದ ಹೂರಣದಲ್ಲಿ ವ್ಯಕ್ತವಾಗಿರುವ ಅತೀವ ವಿಷಾದ ನಮಗೂ ಅರ್ಥವಾದೀತೇ?

  Like

 2. makara permalink

  ನಮ್ಮಲ್ಲಿ ಸ್ತೀಯರನ್ನು ನಾವು ವಯೋಭೇದವಿಲ್ಲದೆ ಅಮ್ಮ ಅಥವಾ ತಾಯಿಯಂದೇ ಸಂಬೋಧಿಸುತ್ತೇವೆ ಇದನ್ನೇ ಮನಸ್ಸಿನಲ್ಲಿಟ್ಟುಕೊಂಡು ಸ್ವಾಮಿ ವಿವೇಕಾನಂದರು ಪಾಶ್ಚಿಮಾತ್ಯ ಮಹಿಳೆಯರನ್ನು ತಾಯಿ ಎಂದು ಸಂಬೋಧಿಸಿದಾಗ, ಏನು ನನಗಾಗಲೇ ಅಷ್ಟು ವಯಸ್ಸಾಯಿತಾ ಎಂದು ಮುಖ ಕಿವಿಚಿಕೊಳ್ಳುತ್ತಿದ್ದರಂತೆ. ನಮ್ಮ ಭಾರತೀಯ ಕಲ್ಪನೆಯಲ್ಲಿ ತಾಯ್ತನವೇ ಸ್ತ್ರೀಯರಿಗೆ ಆದರ್ಶ, ಅದೇ ಪಾಶ್ಚಿಮಾತ್ಯರಲ್ಲಿ ವೈಯ್ಯಾರದಿಂದಿರುವ ಹೆಂಗಸು ಅವರಿಗೆ ಆದರ್ಶ. ಈ ಭಿನ್ನತೆಯನ್ನು ಬಹು ಹಿಂದೆ ಸ್ವಾಮೀಜಿಯವರು ಗುರುತಿಸಿದ್ದರು, ಅವರು ಅಮೇರಿಕದಲ್ಲಿನ ಭಾರತೀಯ ನಾರಿ ಎನ್ನುವ ತಮ್ಮ ಉಪನ್ಯಾಸದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ತಾಯ್ತನದ ಉನ್ನತ ಆದರ್ಶದ ಕಲ್ಪನೆಯನ್ನು ನಿಮ್ಮ ಕವನ ಪುನಃ ನೆನಪಿಸಿತು ನವೀನ್.

  Like

  • ಆಳವಾದ ಪ್ರತಿಕ್ರಿಯೆ ಸರ್, ಸ್ವಾಮಿಗಳ ಧೀ ಶಕ್ತಿ ಹಾಗು ಅವರ ಪ್ರಖರ ನುಡಿಗಳು ನೆನಪಾದವೂ, ಅವರ ಚರಣಗಳಿಗೆ ಒಂದಿಸಿಕೊಂಡು, ತುಂಬಾ ತುಂಬಾ ಧನ್ಯವಾದಗಳು,,,

   Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: