ವಿಷಯದ ವಿವರಗಳಿಗೆ ದಾಟಿರಿ

ಅರಗಿಸುವ ಉದರ 

ಜುಲೈ 14, 2014
ದುಃಖದ ಎದೆಯ ಮೇಲಿನ
ಮೌನ ಸಂವಾದ,
ಬೇಕೆಂದು ಕೇಳಿದ್ದು
ಹೊಟ್ಟೆಯ ಸುಖವನ್ನೇ ?
,
ರಾಕ್ಷಸ ಹೊಟ್ಟೆ,
ರಟ್ಟೆಗೆಷ್ಟು ಕೆಲಸ ಕೊಡುತ್ತಿದೆ,
ಬಿಟ್ಟೆನೆಂದರೂ ಬಿಡದೀ ಹೊಟ್ಟೆ,
,
ಹೊತ್ತಿ ಉರಿಯುವ
ಉದರದೊಳಗಿನ ವಿಲಯಾಗ್ನಿ
ಭಗ್ನವಾಗುವುದೆಂದು ನಂಬಿದರದು
ಬರೀ ಪೊಳ್ಳು ಭರವಸೆ
,
ಒಬ್ಬ ಭಕಾಸುರನೆಂಬುವವನಿದ್ದ!!!
ಹೇಳಿದ್ಯಾರು ??
ಎಲ್ಲಾ ಭಕಾಸುರರೆ, ಹೊಟ್ಟೆಗಾಗಿ,
,
ಇಲ್ಲಿಯವರೆಗೂ ಬಟ್ಟೆಗೂ
ಹೊಡೆದಾತವಿತ್ತು,
ಇನ್ನು ಅದಿಲ್ಲ,
ಬಟ್ಟೆ ಹಾಕಿದಂತೆ ನಟಿಸುವುದೇ
ಜಾಗತೀಕರಣದ ಒಳಗುಟ್ಟು
ಹುಟ್ಟೋ ಸಂತತಿಯೆಲ್ಲ
ಮತ್ತೊಮ್ಮೆ ಆದಿಯೆಡೆಗೆ
ಹೊಟ್ಟೆಗಿಲ್ಲದ
ಬಟ್ಟೆ ಇರದ,
ದಿಟ್ಟ ದಿನಗಳೆಡೆಗೆ,
ಎಷ್ಟೆಂದು ಮುಚ್ಚಿತ್ತು ಕಾಯುವುದು,
ಬಾಯಿ, ಮೈ ಯಾ
ಚಪಲವನು ?
ದಿಕ್ಕರಿಸಿ, ಗುಡುಗಲೇ ಬೇಕು
ಜಗವ ಗೆದ್ದವನಿರಬಹುದು
ಹೊಟ್ಟೆಯನು ಗೆದ್ದವನಿಹನೇ?
ಅದರೊಳಗಿನ, ಮುಗಿಯದ
ಭಕಾಸುರನನ್ನು ಗೆದ್ದವನಿಹನೇ?
.
ವರ್ಷಗಳಿಂದಾ ಕೂಡಿತ್ತಿದ್ದು
ಇದೆಯೇ ಅಲ್ಲಿ,,,,,
ಹ್ಹ ಹ್ಹ , ಹೊಟ್ಟೆಯ ನಾಟಕವದು
ತಿಂದಂತೆ ನಟಿಸಿ,
ಮತ್ತಷ್ಟು ಬೇಕೆನ್ನುವುದು,
ಆದಿಯಿಂದಲೂ
ಅಂತ್ಯದ ವರೆಗೂ
ಹೊಟ್ಟೆ ಮಾತ್ರ ಸತ್ಯ,
ಸಾಯುವ ಕೊನೆಗಳಿಗೆಯಲಿ
ಹೊಟ್ಟೆ ಮಾತ್ರ ಬರುವುದು
ಇನ್ಯಾವುದಲ್ಲ,
— ಜೀ ಕೇ ನ
4 ಟಿಪ್ಪಣಿಗಳು
  1. ಮನುಷ್ಯನ ಬಕಾಸುರತೆ, ಚಪಲತೆಗಳ ಅನಾವರಣದೊಂದಿಗೆ ’ದಿಟ್ಟ ದಿನಗಳೆಡೆಗೆ’ ಕನಸುವ ಕವನ ಅನ್ನಿಸಿತು.

    Liked by 1 person

  2. ತಾರೀಖ ಜಿ ರೆಡ್ಡಿ permalink

    ಶರಣು ಸ್ವಾಮಿ ….
    ನಿಮ್ಮ ಯೋಚನೆ , ವಿಚಾರಗಳು ಹಾಗೂ ಅದಕ್ಕೆ ತೊಡಿಸಿದ ಶಬ್ದಗಳು ಅಧ್ಬುತ.

    Liked by 1 person

ನಿಮ್ಮ ಟಿಪ್ಪಣಿ ಬರೆಯಿರಿ