Skip to content

ನಮ್ಮ ನಾಡಿನ, ಸಾಗರಮಾತಳ ಮಗ

ಜುಲೈ 17, 2014

ಪ್ರಪಂಚದ ಅತೀ ಎತ್ತರದ ಶಿಖರ ಸಾಗರಮಾತ (ಚೋಮೋಲುಂಗ್ಮ), ಇದನ್ನು  ಮೌಂಟ್ ಎವರೆಸ್ಟ್ ಎಂಬ ಹೆಸರಿನಿಂದಲೂ ಕರೆಯುತ್ತಾರೆ, ಸಮುದ್ರ ಮಟ್ಟದಿಂದ ಸುಮಾರು 8848 ಮೀಟರ್ (29029 ಅಡಿ) ಎತ್ತರದ ಬೃಹತ್ ಸೌಂದರ್ಯ ರಾಶಿ, ಧವಳ ಹಿಮಗಿರಿ, ಇದರ ಸೌಂದರ್ಯ ನೋಡಲು ಎರಡು ಕಣ್ಣುಗಳು ಸಾಲವು, ಇದರ ಚೆಲುವನ್ನೂ ವರ್ಣಿಸಲು ಯಾವ ಪದಗಳಿಂದಲೂ ಆಗದು, ಇದೊಂದು ಹಿಮ ಗಣಿ, ಕವಿ ಕಾಳಿದಾಸನಿಗೆ ಅದ್ಭುತದಂತೆ ಕಂಡ ಈ ಬೃಹತ್ ಶಿಖರ, ಕಾವ್ಯವಾಗಿ ಹೊರಹೊಮ್ಮಿದ್ದು ಹೀಗೆ

II ಅಸ್ತ್ಯುತ್ತರಸ್ಯಾಂ ದಿಶಿ ದೇವತಾತ್ಮಾ ಹಿಮಾಲಯೋ ನಾಮ ನಗಾಧಿರಾಜಃ
   ಪೂರ್ವಾಪರೌ ತೋಯನಿಧೀ ವಿಗಾಹ್ಯ ಸ್ಥಿತಃ ಪೃಥಿವ್ಯಾ ಇವ ಮಾನದಂಡಃ II
ಕನ್ನಡದಲ್ಲಿ ರಾಮಪ್ರಸಾದರು ಹೇಳುವಂತೆ
II ಉತ್ತರದ ದಿಕ್ಕಿನಲ್ಲಿ ದೈವ ರೂಪದಲ್ಲಿರುವ ಬೆಟ್ಟಗಳಿಗೊಡೆಯನ ಹೆಸರು ಹಿಮಾಲಯ
ಇಬ್ಬದಿಯಲೂ ಕಡಲು ಭೂಮಿಯನ್ನಳೆಯಲು ನೆಟ್ಟಗೆ ನಿಂತಿಹನು, ಅಳತೆಗೋಲಿನ ಹಾಗೆ II
everest-20-expedition

ಎವರೆಸ್ಟಿನ ಕಾಲು ಹಾದಿ

2005061715480201

ಎವರೆಸ್ಟ್ ಹತ್ತಿದ ಖುಷಿ ಹಂಚಿಕೊಂಡ ಕ್ಷಣ

gan-RSCN0394

ಎವರೆಸ್ಟಿನ ಮೇಲೆ ಗಣೇಶ್

2005070310530301

 

            ಹೀಗೆ ಕವಿಗಳ ಮನಸೂರೆಗೊಳಿಸಿದ ಮಹಾ ಚೆಲುವಿನ ಗಣಿ ಇದು, ಇನ್ನು ಪರ್ವತಾರೊಹಿಗಳಿಗಂತೂ ಸಾಗರಮಾತ (ಮೌಂಟ್ ಎವರೆಸ್ಟ್) ಯಾವಾಗಲು ಉನ್ನತ ಕನಸಾಗಿ ಕಾಡುತ್ತಿರುತ್ತದೆ, ಹೀಗೆ ಕನಸು ಕಾಣುತ್ತಲೇ ಅದನ್ನು ಹತ್ತಿ ಮುತ್ತಿಕ್ಕಿ ಬಂದ ಹಲವು ಶೂರರು ನಮ್ಮಲ್ಲಿ ಕಾಣಸಿಗುತ್ತಾರೆ, ಅದಕ್ಕಾಗಿ ಹಂಬಲಿಸಿ ಅಲ್ಲಿಯೇ ಸ್ವರ್ಗ ಸೇರಿದ ಅನೇಕರೂ ಇದ್ದಾರೆ, ಯಾವಾಗಲೂ ಪರ್ವತಾರೊಹಿಗಳಲ್ಲದವರ ಮನಸ್ಸಿನಲ್ಲಿ ಏಳುವ ಒಂದು ಪ್ರಶ್ನೆ,”ಚಾರಣ ಅಥವಾ ಪರ್ವತಾರೋಹಣದಿಂದಾ ಪ್ರಯೋಜನವೇನು?” ಎಂದು, ಈ ಪ್ರಶ್ನೆಗೆ ಪದಗಳಲ್ಲಿ ಉತ್ತರಿಸುವುದು ಕಷ್ಟವೇ, ಆದರೂ ಚಿಕ್ಕದಾಗಿ ಹೇಳಬೇಕೆಂದರೆ ಪರ್ವತಾರೋಹಣದ ಸಮಯದಲ್ಲಿ ಚಿತ್ತ ಏಕ ಗುರಿಯ ಕಡೆ ಕೇಂದ್ರಿಕೃತವಾಗಿರುತ್ತದೆ, ಮನಸ್ಸು ವೇಗದ ನಿರ್ಧಾರ ತೆಗೆದುಕೊಳ್ಳಲು ತಾಲೀಮು ನಡೆಸುತ್ತಿರುತ್ತದೆ, ಪ್ರಕೃತಿಗೆ ಸ್ವಾತಂತ್ರವಿತ್ತು, ನಾವು ಪ್ರಕೃತಿಗೆ ಶರಣಾಗಿ ಇರಬೇಕಾಗುತ್ತದೆ, ಈ ಎಲ್ಲ ಹಂತದಲ್ಲೂ ಮನಸ್ಸು ಪ್ರಪುಲ್ಲವಾಗಿರುತ್ತದೆ, ಇನ್ನೇನು ಬೇಕು,,,,,, ಮನಸ್ಸಿನ ಪ್ರಪುಲ್ಲತೆಗಲ್ಲವೇ ನಾವು ಹೆಚ್ಚಿನದನ್ನು ಸಂಪಾದಿಸುವುದು, ಮನಸ್ಸಿನ ಪ್ರಪುಲ್ಲತೆಗಲ್ಲವೇ ನಾವು ಬಾಹ್ಯ ಸಾಧನಗಳ ಮೊರೆ ಹೋಗುವುದು, ಅಷ್ಟೇ, ಸರಳ ಸಜ್ಜನಿಕೆಯ ಪ್ರಕೃತಿಯ ಆಳ ಅಗಲಗಳನ್ನು ಅರಿಯುವುದೇ ಒಂದು ಸ್ವಯಂ ಉನ್ಮಾದ, ಇನ್ನು ಎವರೆಸ್ಟಿನ ಚಾರಣದ ವಿಷಯಕ್ಕೆ ಬಂದರೆ ಅದೊಂದು ಅಪಾಯಕಾರಿಯಾದ ಹಾಗು ಅಷ್ಟೇ ವಿಸ್ಮಿತವಾದ ಅಪೂರ್ವ ಅನುಭೂತಿ, ತೇನ್ ಸಿಂಗ್ ನಿಂದಾ ಹಿಡಿದು ಇದುವರೆಗೂ ಬಹಳಷ್ಟು ಜನ ಸಾಹಸಿಗರು ಈ ವಿಸ್ಮಿತ ಅನುಭೂತಿಯನ್ನು ಪಡೆದುಕೊಂಡಿದ್ದಾರೆ,

       ಆ ರೀತಿಯ ಅನುಭೂತಿಗೆ ಒಳಗಾದ ಒಬ್ಬ ವಿಶೇಷ ವ್ಯಕ್ತಿ ನಮ್ಮ ನಡುವೆಯೇ ಇದ್ದಾರೆ, ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬದುಕುತ್ತಿದ್ದಾರೆ ಅವರೇ “ಪಿ.ಎನ್.ಗಣೇಶ್” (ಪಡುಬಿದಿರಿ ನಾಗೇಶರಾವ್ ಗಣೇಶ್), ಪ್ರಸ್ತುತ ಪೋಲಿಸ್ ಇಲಾಖೆಯಲ್ಲಿ ಕೆಚ್ಚಿನ ಕಾರ್ಯ ನಿರ್ವಹಿಸುತ್ತಿದ್ದಾರೆ, ಇವರನ್ನು ಪೋಲಿಸ್ ಇಲಾಖೆಯಲ್ಲಿ “ಪರ್ವತ” ಎಂದು ಪ್ರೀತಿ ಇಂದಾ ಕರೆಯುತ್ತಾರೆ, ಚಿಕ್ಕಂದಿನಿಂದಲೂ ಚಾರಣದಲ್ಲಿ ಆಸಕ್ತಿ ಇದ್ದ ಗಣೇಶ್ ಅವರಿಗೆ, ಸಾಗರಮಾತ(ಮೌಂಟ್ ಎವರೆಸ್ಟ್) ಉತ್ತುಂಗದ ಕನಸಾಗಿತ್ತು, ಅದಕ್ಕಾಗಿ ಅದೆಷ್ಟು ಆತಂಕ, ಅಡೆ-ತಡೆ, ತೊಂದರೆಗಳು ಒದಗಿ ಬಂದರೂ ಛಲ ಬಿಡದ ತ್ರಿವಿಕ್ರಮನಂತೆ ಹೋರಾಡಿ 1995 ರಲ್ಲಿ ಸಾಗರಮಾತ(ಮೌಂಟ್ ಎವರೆಸ್ಟ್) ನ ತುದಿಯ ಅತೀ ಹತ್ತಿರಕ್ಕೆ ಹೋಗಿ ಹವಾಮಾನ ವೈಪರಿತ್ಯದಿಂದಾಗಿ ತುದಿ(Summit) ಮುಟ್ಟಲಾಗದೆ ಹಿಂತಿರುಗಿ ಬಂದಿದ್ದರು, ಆದರೂ ಅನತಿ ದೂರದಲ್ಲೇ ಕೈ ತಪ್ಪಿದ ಎವರೆಸ್ಟಿನ ಬಗ್ಗೆ ಅವರಿಗೆ ಅಪೂರ್ವ ಒಲವಿತ್ತು, 2005 ರಲ್ಲಿ ಮತ್ತೊಮ್ಮೆ ಪ್ರಯತ್ನ ಮಾಡಿದರು, ಆದರೆ ಆಗ ಅತಿಯಾದ ಹಣದ ಅಭಾವ ಎದುರಿಸಬೇಕಾಗಿತ್ತು, ಹಾಗೆಂದು ಅವರು ಎವರೆಸ್ಟ್ ಕನಸನ್ನು ಬಿಡಲಿಲ್ಲ, ತಾನು ಇಷ್ಟು ದಿನ ದುಡಿದು ಕೊಂಡು-ಕೊಂಡ ಸೈಟ್ ಒಂದನ್ನು ಮಾರಿ, ಜೊತೆಗೆ ಸಂಘ ಸಂಸ್ಥೆಗಳ ನೆರವನ್ನು ಪಡೆದುಕೊಂಡು ಉತ್ತರದ ದಿಕ್ಕಿನಿಂದಾ ಅಂದರೆ ಟಿಬೆಟ್ ಕಡೆ ಇಂದಾ ಎವರೆಸ್ಟ್ ಚಾರಣಕ್ಕೆ ಹುಮ್ಮಸ್ಸಿನಿಂದಾ ಹೊರಟಿದ್ದರು,  (ಎವರೆಸ್ಟ್ ಗೆ ಹೋಗಲು ಇರುವ ಹಲವು ದಾರಿಗಳಲ್ಲಿ  ಒಂದು ನೇಪಾಳದ ಕಡೆಇಂದಾ (ದಕ್ಷಿಣದ  ಕಡೆಇಂದಾ) ಇನ್ನೊಂದು  ಟಿಬೆಟ್ ಕಡೆಇಂದಾ (ಉತ್ತರದ ಕಡೆ ಇಂದಾ) ಇದನ್ನು ಡೆಸರ್ಟ್ ಮೌಂಟೈನ್ ದಾರಿ ಎಂತಲೂ ಕರೆಯುತ್ತಾರೆ), ಉತ್ತರ ದಿಕ್ಕಿನ ಹಾದಿ ಅತೀ ಕಷ್ಟಕರವಾದ ಹಾದಿ, ಅಲ್ಲದೆ ಇಲ್ಲಿ ದೂಳಿನ ಕಣಗಳು ಹೆಚ್ಚಿದ್ದು ಉಸಿರಾಟದ ತೊಂದರೆ ಹಾಗು ಇನ್ನಿತರ ತೊಂದರೆಗಳು ಬಲುಬೇಗ ಮನುಷ್ಯನ ಶಕ್ತಿಯನ್ನು ಕಸಿದು ಬಿಡುತ್ತವೆ, ಹಸಿರೂ ಗಿಡಗಳ ಒಂದು ಕುರುಹೂ ಕೂಡ ಕಾಣ ಸಿಗುವುದಿಲ್ಲ ಇಲ್ಲಿ, ಆದರೂ ಗಣೇಶ್ ಅವರು ಇದೆ ದಾರಿಯನ್ನು ಆರಿಸಲು ಕಾರಣ ದಕ್ಷಿಣದ ದಾರಿಗೆ ಹೋಲಿಸಿದರೆ ಇದು ಸ್ವಲ್ಪ ಅಗ್ಗದ್ದು, ಹಾಗಾಗಿ ಪ್ರಾಣದ ಹಂಗು ತೊರೆದು ಅದೇ ದಾರಿಯಲ್ಲಿ ಸಾಗಿ ತುದಿ (Summit) ತಲುಪಿ ಜಯಶಾಲಿಯಾಗಿದ್ದರು.

 

       ಆ ಜಯ ಕರ್ನಾಟಕದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೆಕಾದ ಜಯ, ಜೊತೆಗೆ ಕರ್ನಾಟಕದ ಮೊತ್ತಮೊದಲ ಎವರೆಸ್ಟ್ ವೀರ ಎಂಬಾ ಹೆಗ್ಗಳಿಕೆಗೆ ಪಾತ್ರರಾಗಿದ್ದರು, ಆಗ ಯಾರು ಅಷ್ಟೊಂದು ಗಮನಿಸದ ಅಂಶ ಒಂದು ಎಂದರೆ, ಗಣೇಶ್ ಅವರು ೧೯೩ ರಾಷ್ಟ್ರಗಳ ದ್ವಜವನ್ನು ಎವರೆಸ್ಟಿನ ಮೇಲೆ ಹಾರಿಸಿದ್ದರು, ಇಡೀ ವಿಶ್ವವೇ ಒಂದು ಕುಟುಂಬ ಎಂಬ ಕುವೆಂಪು ಅವರ “ವಸುದೈವ ಕುಟುಂಬಕಂ” ಅನ್ನು ಶಾಂತಿಯ ನೆರವಿನಿಂದಾ ಸಾರುವುದು ಇವರ ಉದ್ದೇಶ ಆಗಿತ್ತು. ಅಂದು ಕನ್ನಡದ ದ್ವಜವೂ ಪ್ರಪಂಚದ ಅತೀ ಎತ್ತರಕ್ಕೆ ಮುಟ್ಟಿತ್ತು,

        ಎವರೆಸ್ಟ್ ಅದೊಂದು ನಿರಂತರ ಪಯಣ, ಒಮ್ಮೆ ಹೋಗಿ ಬಂದರೆ ಮತ್ತೊಮ್ಮೆ ಹೋಗಲೇ ಬೇಕು ಎನ್ನುವಂತೆ ಕೈ ಬೀಸಿ ಕರೆಯುವ ಸೌಂದರ್ಯ ಅದರದ್ದು, ಅದಕ್ಕಾಗಿಯೆ ಅವರೀಗ ಇನ್ನೊಂದು ಹೊಸ ಕನಸಿನೊಂದಿಗೆ ಮತ್ತೊಮ್ಮೆ ಹಿಮಾಲಯದತ್ತ ಸಾಗಲು ತಯಾರಿ ನಡೆಸಿದ್ದಾರೆ,ಅದು ಸುಮ್ಮನೆ ಅಲ್ಲ, ಮೈ ನಡುಗಿಸುವ ಆಶಯ ಒಂದನ್ನು ಹೊತ್ತು. ಹೌದು, ಸಾಮಾನ್ಯವಾಗಿ 24000 ಅಡಿಗಳಿಗಿಂತಾ ಎತ್ತರದ ಹಿಮಪರ್ವತಕ್ಕೆ ಹೋಗಿ ಹಿಂತಿರುಗಿ ಬಂದ ಮೇಲೆ, ಸುಮಾರು ಎಂಟು ತಿಂಗಳುಗಳ ಕಾಲ ಚೇತರಿಕೆಗಾಗಿ ಬಿಡುವು ಮಾಡಿಕೊಳ್ಳಬೇಕಾಗುತ್ತದೆ, ಇದು ಚಾರಣದ ಒಂದು ನಿಯಮವೂ ಹೌದು, ಆದರೆ ಗಣೇಶ್ ಅವರು ಚೋ-ಯೂ (cho-oyu) ಎಂಬ ಪರ್ವತ (ಮೌಂಟ್ ಎವರೆಸ್ಟ್ ಗಿಂತಾ ಬರಿ 622 ಅಡಿ ಕಮ್ಮಿ) ಹತ್ತಿ ನಂತರ ಯಾವುದೇ ಬಿಡುವಿಲ್ಲದೆ ಅಲ್ಲಿಂದ ನೇರವಾಗಿ ಮೌಂಟ್ ಎವರೆಸ್ಟ್ ಹತ್ತಲು ಹೊರಟಿದ್ದಾರೆ, ಇದೇನು ಸಾಮಾನ್ಯ ಕೆಲಸವಲ್ಲ, ಇದನ್ನು ಇದುವರೆಗೂ ಯಾರು ಮಾಡಿರಲಿಕ್ಕೂ ಇಲ್ಲಾ, ಇದು ಒಂದು ವಿಶ್ವದಾಖಲೆಯ ಪ್ರಯತ್ನ ಕೂಡ ಹೌದು, ಆದರೆ ಇಲ್ಲಿ ವಿಶ್ವದಾಖಲೆ ಇವರ ಗುರಿ ಅಲ್ಲ, ಚಾರಣದ ಶಕ್ತಿಯ ಗಮ್ಮತ್ತಿಗೆ ಕೊನೆ ಇಲ್ಲ ಎಂದು ತೋರಿಸುವುದೇ ಇವರ ಗುರಿ, ಅಂದರೆ ಒಂದೇ ಏಟಿಗೆ ೫೮೦೦೦ ಅಡಿ ಏರಿದ ಕೀರ್ತಿ ಇವರದಾಗುತ್ತದೆ, ಈ ಬಾರಿ ಏರುವಾಗಲೂ ಅವರ ಉದ್ದೇಶ “ಸರ್ವ ಧರ್ಮಗಳ ಸಮನ್ವಯ, ಜೊತೆಗೆ ಎಲ್ಲ ರಾಷ್ಟ್ರಗಳ ಶಾಂತಿಯ ಸ್ಥಿರತೆಯನ್ನು ಸಾರುವುದೇ ಆಗಿದೆ. ಅದಕ್ಕಾಗಿ ಏಳು ಧರ್ಮಗಳ ಧರ್ಮಗ್ರಂಥಗಳನ್ನು ಜೊತೆಗೆ ೨೨೬ ದೇಶಗಳ ದ್ವಜವನ್ನು ಎವೆರೆಸ್ಟಿನ ಮೇಲೆ ಹಾರಿಸುವ ಉದ್ದೇಶದಿಂದಾ ಕೊಂಡೊಯ್ಯುತ್ತಿದ್ದಾರೆ, ಆಗ ಜಗವೇ ಬೆಚ್ಚಿ  ಭಾರತದೆಡೆಗೆ, ಅದರಲ್ಲೂ ಕರ್ನಾಟಕದೆಡೆಗೆ ನೋಡುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.

        ಹಾಗೆಂದು ಇದೇನು ಸುಲಭದ ಮಾತಲ್ಲ, ಇದಕ್ಕೆ ಸತತ ಪರಿಶ್ರಮದ ಅಭ್ಯಾಸ ಬೇಕಾಗುತ್ತದೆ, ದೇಹ ಮತ್ತು ಮನಸ್ಸು ಎರಡನ್ನು ಸದೃಡವಾಗಿ ಹುರಿಗೊಳಿಸಬೆಕಾಗುತ್ತದೆ, ಒಂದು ದಿನವನ್ನೂ ಉಡಾಫೆ ಮಾಡದೆ ದೇಹದ ಆರೋಗ್ಯ ಕಾಪಡಿಕೊಳ್ಳಬೇಕಾಗುತ್ತದೆ, ಒಟ್ಟಾರೆ ದೇಹವನ್ನು ಪಣಕ್ಕಿಟ್ಟು ಮಾಡುವ ಕಸರತ್ತು ಎಂದರೆ ಉತ್ಪ್ರೇಕ್ಷೆ ಅಲ್ಲ, ಇಷ್ಟೆಲ್ಲಾ ತಯಾರಿ ನಡೆಸಲು ಸುಮಾರು ಎಂಟು ತಿಂಗಳಿಂದಾ ಒಂದು ವರ್ಷದ ಕಾಲವದಿ ಬೇಕಾಗುತ್ತದೆ, ಇದಲ್ಲದೆ ಚೀನಾವೂ ಟಿಬೆಟ್ ಪ್ರದೇಶವನ್ನು ಆಕ್ರಮಿಸಿರುವುದರಿಂದಾ, ಯಾವ ಭಾರತೀಯನೂ ಚೀನಾ ಆಕ್ರಮಿತ ಟಿಬೆಟ್ ಬಾಗಕ್ಕೆ ಪ್ರವೇಶ ಮಾಡುವಂತಿಲ್ಲ ಎನ್ನುವ ಕಟ್ಟೆಚ್ಚರ ಕೂಡ ಇದೆ, ವಿಸಾ ಸಿಗುವುದು ದುಸ್ತರ, ಇದು ಗಣೇಶ್ ಅವರ ಸಾಧನೆಯ ಹಾದಿಗೆ ಅಂಟಿದ ದೊಡ್ದ ಮುಳ್ಳು, ಆದರೆ ವಿಸಾ ಸಿಗಲಿ ಬಿಡಲಿ, ನಾನು ಪ್ರಾಣದ ಹಂಗು ತೊರೆದು ಆ ಪ್ರದೇಶಕ್ಕೆ ತೆರಳಿ ನನ್ನ ಉದ್ದೇಶವನ್ನು ಪೂರ್ತಿಗೊಳಿಸಿಯೆ ತೀರುತ್ತೇನೆ ಎನ್ನುವ ಅಪರಿಮಿತ ದಿಟ್ಟತನದಲ್ಲಿದ್ದಾರೆ ಗಣೇಶ್. ತಾನು ಏನನ್ನೋ ಮಹತ್ತರವಾದುದನ್ನು ಸಾಧಿಸುತ್ತೇನೆ ಹಂಬಲದಿಂದಾ ಅಥವಾ ಅಹಂಕಾರದಿಂದ ಹೇಳುವ ಮಾತಲ್ಲ, ಸಾಗರಮಾತ ಅವರಿಗೆ ತಾಯಿ ಇದ್ದಂತೆ, ತಾಯಿಯ ಮಡಿಲಿಗೆ ಚುಂಬಿಸಿ, ಜಗದ ಜಡವನ್ನು ಕಳೆ ತಾಯೆ ಎಂಬ ಭಾವೋದ್ವೇಗ ಅಷ್ಟೇ.
      ಇಂತಹ ಮಹಾನ್ ಸಾಧನೆಯನ್ನು ಒಳ್ಳೆಯ ಉದ್ದೇಶದಿಂದಾ ಮಾಡ ಹೊರಟ ನಮ್ಮ ಕನ್ನಡದ ಕುವರನಿಗೆ ನಮ್ಮೆಲ್ಲರ ಸಹಾಯ ಅಗತ್ಯವಾಗಿದೆ, ಭಾವನಾತ್ಮಕವಾಗಿ, ಮಾನಸಿಕವಾಗಿ, ಆರ್ಥಿಕವಾಗಿ, ಅವರ ಜೊತೆಸಾರಲು ಎಲ್ಲರ ಸಹಾಯವನ್ನು ನಾನು ಬೇಡುತ್ತೇನೆ,

ಅವರಿಗೆ ಆರ್ಥಿಕ ಸಹಾಯ ಮಾಡಲು ಇಚ್ಚಿಸುವವರಿಗಾಗಿ (ಗಣೇಶರಿಗೆ ಸಹಾಯ ಮಾಡಿದ ಪಿನಾಕಲ್ ಸಂಸ್ಥೆಯ ಅಕೌಂಟ್ ಸಂಖ್ಯೆ)

ಬ್ಯಾಂಕ್ ಹೆಸರು           : CITIBANK
ಅಕೌಂಟ್ ಸಂಖ್ಯೆ          : 5429025801   

ಬ್ಯಾಂಕ್ IFSC ಸಂಖ್ಯೆ   : CITI0000004 

ಗಣೇಶ್ ಅವರ ಬಳಿ ಮಾತನಾಡಲು ಇಚ್ಚಿಸುವ ಸಹೃದಯಿಗಳಿಗಾಗಿ ಅವರ                                                               ದೂರವಾಣಿ ಸಂಖ್ಯೆ : +91- 9845399705

[[[[[[[ಇತ್ತೀಚಿಗೆ ಕನ್ನಡ ವಾಹಿನಿ ಟಿವಿ-೯, ಗಣೇಶ್ ಅವರೊಂದಿಗೆ ನಡೆಸಿದ ಸಂದರ್ಶನದ ತುಣುಕುಗಳನ್ನೂ ಕೂಡ ನೋಡಬಹುದು,

ಪಾರ್ಟ್ ೩- https://www.youtube.com/watch?v=VFmB4TA7FGk  ]]]]]]]]

ನಮ್ಮೊಳಗಿನ ಶಕ್ತಿಯನ್ನು ವಿಶ್ವಕ್ಕೆ ಪರಿಚಯಿಸಲು ಹೊರಟಿರುವ ಸಾಗರಮಾತಳ ಮಗನಿಗೆ ತೆರೆದ ಮನಸ್ಸಿನಿಂದ ಹಾರೈಸೋಣ, ತಾಯಿಯ ಪ್ರೇಮವನು ಗೆದ್ದು ಬಾ ಮಗು ಎಂದು,,,, ಬನ್ನಿ ಮಧುರ ಮನಸ್ಸಿನ ಕನ್ನಡಿಗರೇ ಅವರೊಂದಿಗೆ ಕೈ ಜೋಡಿಸೋಣ.

(ಕರ್ನಾಟಕದಿಂದಾ ಎವರೆಸ್ಟ್ ಹತ್ತಿದ ಇನ್ನೊಬ್ಬ ವ್ಯಕ್ತಿ ಎಂದರೆ “ಚೈತನ್ಯ”, ಆದರೆ ದುರಾದೃಷ್ಟ, ಹತ್ತಿ ಇಳಿಯುವಾಗ ಎವರೆಸ್ಟಿನಲ್ಲಿಯೆ ಕಣ್ಮರೆ ಆದರು, ಇನ್ನೂ ಅವರ ದೇಹ ಎವರೆಸ್ಟಿನ ಮಂಜಿನಲ್ಲಿ ರಕ್ಷಿಸಲ್ಪಟ್ಟಿದೆ, ಅವರಿಗೊಂದು ಭಾವಪೂರ್ಣ ಶ್ರದ್ದಾಂಜಲಿ)

ಚಿತ್ರ ಕೃಪೆ : ಅಂತರ್ಜಾಲ

— ನವೀನ್ ಜೀ ಕೇ
Advertisements
2 ಟಿಪ್ಪಣಿಗಳು
 1. mallan permalink

  Sir nimdu yadadru books bardidira?

  Liked by 1 person

  • ಪುಸ್ತಕ ಬರೆದಿದ್ದೇನೆ ಮಲ್ಲನ್ ಅವರೇ,,,,,, ಈ ವರ್ಷದ (೨೦೧೪) ರ ನವೆಂಬರ್ ನಲ್ಲಿ ಬಿಡುಗಡೆ ಆಗಬಹುದು,,,,, ಅದರ ಬಗ್ಗೆ ಸಧ್ಯದಲ್ಲೇ ತಿಳಿಸುತ್ತೇನೆ.

   ನಿಮ್ಮ ಓದುವ ಕಾಳಜಿ ಹಾಗು ಅರ್ಥೈಸಿಕೊಳ್ಳುವ ಶಕ್ತಿ ನಿಜವಾಗಿಯೂ ಬಹಳ ಕುಶಿ ನೀಡಿದೆ.

   ಧನ್ಯವಾದಗಳೊಂದಿಗೆ
   – ಜೀ ಕೇ ನ

   Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: