Skip to content

ಗೃಹಭಂಗ

ಆಗಷ್ಟ್ 6, 2014

 

ಗೃಹಭಂಗ
ಬೈರಪ್ಪನವರ ಗೃಹಭಂಗ ದ ಓದುವಿಕೆಯ ಅನುಭೂತಿ ಪಡೆದುಕೊಂಡೆ,

 

ಸರಳ ಆಡು ಭಾಷೆಯಲ್ಲಿ, ನಮ್ಮ ಸುತ್ತಲೇ ನಡೆದ ಘಟನೆಗಳು ಎನಿಸುತ್ತದೆ, ಬ್ರೀಟಿಷರ ಕಾಲದ ಹಳ್ಳಿಗಳು, ಹಾಗು ಹಳ್ಳಿಯ ಸೊಗಡು ಕಾದಂಬರಿಯಲ್ಲಿ ನೈಜವಾಗಿ ಮೂಡಿ ಬಂದಿದೆ, ಅನೇಕ ಪಾತ್ರಗಳಲ್ಲಿ ಕಥೆಗೆ ಆಧಾರ ಪಾತ್ರ ಎಂದು ಹೇಳಬಹುದಾದ “ನಂಜಮ್ಮ” ಬದುಕನ್ನು ಸ್ವೀಕರಿಸುವ ರೀತಿ, ಆಕೆ ಅನುಸರಿಸಿದ ನೈತಿಕ ಪದ್ದತಿಗಳು, ಅನ್ಯಾಯದ ವಿರುದ್ದ ಸಿಡಿದು ಬೀಳುವ ಪರಿ ಎಲ್ಲವೂ ಸುಂದರವಾಗಿ ಮೂಡಿದೆ,

 

ಬೈರಪ್ಪ ಏನೇ ಬರೆದರೂ ಅದು ಅವರ ಅನುಭವದ ಮೂಸೆಯಿಂದಾ ಬಂದದ್ದು ಎಂದು ಅವರೇ ಅನೇಕ ಕಡೆ ಹೇಳಿದ್ದಾರೆ, ಆದ್ದರಿಂದ ಬೈರಪ್ಪನವರು ನೇರ ನುಡಿಗಳ ಮೂಲಕ ಬಹಳ ಹತ್ತಿರವಾಗುತ್ತಾರೆ,

 

ಅತ್ತೆ, ಸೊಸೆ ಹಾಗು ಮಗಳಿನ ಮೂಲಕ ಮೂರು ತಲೆಮಾರುಗಳ ಹೆಣ್ಣಿನ ಸಂವೇದನೆಯನ್ನು, ಕಾದಂಬರಿಯಲ್ಲಿ ಹಿಡಿದಿಡಲು ಪ್ರಯತ್ನಿಸಿದ್ದಾರೆ, ಜೊತೆಗೆ ಮಾದೇವಯ್ಯ ನವರ ಪಾತ್ರ, ಅಲೆಮಾರಿ ಬದುಕಿನಲ್ಲೂ ಸಂಸ್ಕೃತಿ ಹೇಗೆ ಕಾಪಾಡಿಕೊಂಡರು ಎಂದು ಬಿಂಬಿತವಾಗುತ್ತದೆ, ಅದಲ್ಲದೆ ಒಬ್ಬ ತಾಯಿ (ಗಂಗಮ್ಮ) ತನ್ನ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸದೆ, ಸರ್ವಾಧಿಕಾರಿ ದೋರಣೆಯಿಂದಾ ಬದುಕಿದರೆ, ಮಕ್ಕಳು ಹೇಗೆ ಹದಗೆಡುತ್ತಾರೆ ಎನ್ನುವುದೂ ಕೂಡ ಸಾರ ಸಗಾಟಾಗಿ ಸಾಬೀತಾಗುತ್ತದೆ, ಆದರೆ ಪೇಟೆಯಲ್ಲಿ ಬೆಳೆದು, ಹಳ್ಳಿಗೆ ಮದುವೆ ಆಗಿ, ಹಳ್ಳಿಯ ಸಂಸ್ಕೃತಿಗೆ ಒಗ್ಗದೆ, ಪೇಟೆಯ ಧ್ಯಾನದಲ್ಲೇ ದಿನಕಳೆಯುವ ಹೆಣ್ಣಿನ ಇನ್ನೊಂದು ಮುಖ ಚಿತ್ರಿತವಾಗಿದೆ, ಇದರಿಂದಾ ಕುಟುಂಬದ ಮೇಲಾಗುವ ಪರಿಣಾಮವೂ ಚಿತ್ರಿತವಾಗಿದೆ,,,

 

ಸಾವಿನ ದವಡೆಯಲ್ಲಿ, ಸಿಕ್ಕಿದ ಮಕ್ಕಳನ್ನು ಕಂಡು ನಂಜಮ್ಮ ಕೊರಗುವ ಸ್ಥಿತಿ, ಹಾಗು ಸಾವು ಸಾರ್ವಕಾಲಿಕ ಸತ್ಯ ಎಂದು ನಂಬಿ ಮತ್ತೆ ಬದುಕಿಗೆ ಮುಖ ಮಾಡುವ ರೀತಿ, ಮಾನವತೆಯ ಗುಣವನ್ನು ಬಿಂಬಿಸುತ್ತದೆ,

 

ನಂಜಮ್ಮನ ಕುಟುಂಬ ನಾಶವಾಗಿ, ನಂಜಮ್ಮನ ಕೊನೆ ಮಗ “ವಿಶ್ವ” ನನ್ನು ಮಾದೆವಯ್ಯನವರು ಕರೆದುಕೊಂಡು ಊರು ಬಿಟ್ಟು ಹೋಗುವಾಗ, ವಿಶ್ವನ ಅಪ್ಪನ ನಿರ್ಲಿಪ್ತತೆ, ಅವನ ಉದಾಸೀನತೆಯನ್ನು ತೋರಿಸುತ್ತದೆ,,,,

 

ಒಮ್ಮೆ ಓದಿ, ಅದರ ಅನುಭೂತಿಯಲ್ಲಿ ತೇಲಲೇ ಬೇಕಾದ ಕಾದಂಬರಿ,,

 

ಚಿತ್ರ ಕೃಪೆ : ಅಂತರ್ಜಾಲ31hNdZ-FvLL._SL500_AA300_

 

Advertisements
3 ಟಿಪ್ಪಣಿಗಳು
  1. ಕೆಲವು ವರ್ಷಗಳ ಹಿಂದೆ ಓದಿದ್ದೆ… ಮತ್ತೆ ಓದಲು ನೆನಪು ಮಾಡಿದ್ದೀರಿ. ಭೈರಪ್ಪನವರ ಕಾದಂಬರಿಗಳ ಓದು ಅಂದಮೇಲೆ ಆ ಪಾತ್ರಗಳೊಟ್ಟಿಗೆ ನಾವುಕೂಡ ಹೆಜ್ಜೆಹಾಕುವ ಒಂದು ವಿಲಕ್ಷಣ ಗುಂಗು.

    Liked by 1 person

  2. Badarinath Palavalli permalink

    ಈ ಹಿಂದೆ ಓದಿಕೊಂಡಿದ್ದೆ. ಈಗ ಮರು ಓದಿಗೆ ತಾವು ಪ್ರೇರೇಪಿಸಿದಂತಾಯಿತು. ಧನ್ಯವಾದಗಳು.

    Liked by 1 person

  3. ಪ್ರತಿಕ್ರಿಯೆಗೆ ಧನ್ಯವಾದಗಳು ಪಲವಳ್ಳಿ ಸರ್,,,, ಮತ್ತು ಅನಂತ ರಮೇಶ್ ಸರ್,,,,,,,,

    Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: