Skip to content

ಬದುಕು ಬಾವಿಗೆ ಹಾರೈತೆ

ಆಗಷ್ಟ್ 7, 2014

ಕೋರ್ಟಿನ ಗೇಟಿನ ಒಳಕ್ಕೆ ಯಾರನ್ನೋ ಅವ ಮಾಡಿದ ತಪ್ಪಿಗೆ ಬಂದಿಸಿ ಕೊಂಡೊಯ್ಯುತ್ತಿದ್ದರು, ಇತ್ತ ಬದಿಯಲ್ಲಿ ದೂರು ಕೊಟ್ಟವನೂ ನಡೆದು ಬರುತ್ತಿದ್ದ, ಗೇಟಿನ ಪಕ್ಕ ಒಬ್ಬ ಹತ್ತು ವರ್ಷದ ಹುಡುಗ ಕುಳಿತಿದ್ದ, ಒಂದು ಕೈ ಇಲ್ಲ, ಇನ್ನೊಂದು ಕೈಲಿ ಎರಡು ಬೆರಳಿಲ್ಲ, ಆದರೆ ಆತ ಭಿಕ್ಷೆ ಬೇಡುತ್ತಿರಲಿಲ್ಲ, ಸುಮ್ಮನೆ ಕುಳಿತಿರಲೂ ಇಲ್ಲ,,,,, ಹತ್ತಿರದ ಟೀ ಅಂಗಡಿಯಲ್ಲಿ ಕೆಲಸ ಮಾಡುವವ,,,, ಟೀ ತಂದು ಕೋರ್ಟಿನ ಮುಂದೆ ಕುಳಿತ ಘನಂದಾರಿಗಳಿಗೆ ಕೊಟ್ಟು, ಅವರು ಕುಡಿದ ನಂತರ ಹಣ ಕೊಡಬಹುದೆಂದು ಕಾಯುತ್ತ ಕುಳಿತಿದ್ದ.

ಘನಂದಾರಿಗಳು ಕೈಲಿ ಸಿಗರೇಟು ಹಿಡಿದು ಇಂದಿನ ಕೇಸು ಏನಾಗಬಹುದೆಂದು ಚರ್ಚಿಸುತ್ತಿದ್ದರು,

“ಅವನು ಇವನ ಜಾತಿಯನ್ನ ಬೈದನಂತೆ, ಅದಕ್ಕೆ ಇವನು ಅವನ ಕುಲವನ್ನು ಬೈದನಂತೆ ? ಒಟ್ಟಾರೆ ಮಾಧ್ಯಮಗಳಿಗೆ ಒಳ್ಳೆ ಆಹಾರ”,,,

ಸಿಗರೇಟು ಹೋಗೆ ಸುರುಳಿಯಾಗಿ ಹೊರ ಹೋಯ್ತು,,,,

“ನೋಡೋಣ ಯಾರ ಕೇಸ್ ಗೆಲ್ಲತ್ತೆ ಅಂತಾ,,,,,, ಅದೂ ಅಲ್ದೆ,,,,, ಇಬ್ರು ಬೇರೆ ಬೇರೆ ಪಕ್ಷಕ್ಕೆ ಸೇರಿದವರಂತೆ, ಒಟ್ನಲ್ಲಿ ಕೊರ್ಟಿಗ್ ಒಂದು ಹೊಸ ಕೇಸ್,,,,,, ಆ ಕಡೆ ಈ ಕಡೆ ತಿನ್ನೋರಿಗೆ ಒಂದೆರಡು “ಸೂಟ್ ಕೇಸ್ ” ಹ್ಹ ಹ್ಹ,,,

ಅದು ಸರಿ ಅನ್ನು,,,, ಇನ್ನಾ ಕೇಸ್ ಇತ್ಯರ್ಥ ಆಗೊಕ್ ಎಷ್ಟ್ ಜಡ್ಜ್ ಗಳು ಬದಲಾಗಬೇಕೊ,,, ಎಷ್ಟು ಹೋರಾಟ ಆಗಬೇಕೋ, ಏನ್ ಏನ್ ಆಗತ್ತೋ ನೋಡಬೇಕು,,,,

–ಹುಡುಗಾ ಕಾಯುತ್ತಲೇ ಇದ್ದ ಅವರ ಮುಖ ನೋಡ್ತಾ, ಅವನ ಮನಸ್ಸಲ್ಲಿ ಲೆಕ್ಕಾಚಾರ ಆಗ್ತಾ ಇತ್ತು,,,, ಇವತ್ತು ಎರಡನೆ ತಾರೀಕು, ಕೆಲಸ ಮಾಡಿದ ದುಡ್ಡು ಬರತ್ತೆ “ಆ ದುಡ್ಡಲ್ಲಿ ಅವ್ವನಿಗೆ ಮಾತ್ರೆ,,,, ಮತ್ತೆ ಕುಡಿಯಾಕೆ ಸಿರಪ್ಪು,,,, ಆಮೇಲೆ ನನಿಗೊಂದು ಚಡ್ಡಿ,,,,, ಥೂ ನಮ್ಮಪ್ಪ ಎಲ್ ಕುಡ್ಕಂಡ್ ಬಿದ್ದವ್ನೋ,,,,, ಅಯ್ಯೋ ಚಡ್ಡಿ ತಕಳದ್ ಬ್ಯಾಡ, ಆಮ್ಯಾಕೆ ಗುಡುಸ್ಲು ಗೆ ತಾರ್ಪಾಲ್ ತರಕ್ ಕಾಸೆ ಉಳಿಯಂಗಿಲ್ಲ,,,,”

“ಇನ್ನು ಜಡ್ಜ್ ಬರೋಕೆ ಎರಡು ಗಂಟೆ ಆಗತ್ತೆ,,,, ಅಷ್ಟರಲ್ಲಿ ಕೋರ್ಟ್ ಎದ್ರಿಗೆ ತುಂಬಾ ಜನ ಸೇರ್ತಾರೆ ಅನ್ಸತ್ತೆ,,, ಟಿ. ವಿ. ಯವರು ಬರ್ತಾರೆ,,,, ನಾವು ಮುಂದೆ ನಿಲ್ಲೋಣ ಟಿ. ವಿ. ಲ್ಲಿ ಬರಬಹುದು,,,,

“ಟಿ. ವಿ ಯವರು ಬಿಡಪ್ಪ ಇಲಿ ಹೋಯ್ತು ಅಂದ್ರೆ,, ಎರಡು ಆನೆ ಹೋಯ್ತು ಅಂತಾ ತೋರುಸ್ತಾರೆ,,, ಆಮೇಲೆ ನಮ್ಮನ್ನು ಹಂಗೆ ತೋರ್ಸಿ,, ನಾವು ಈ ಕೇಸ್ ಲ್ಲಿ ಬಾಗಿ ಆಗಿದಿವಿ ಅಂತಾ ಮಾಡ್ಬಿಟ್ರೆ ಕಷ್ಟ, ಸುಮ್ನೆ ದೂರ ನಿಂತ್ಕೊಂಡ್ ನೋಡೋದ್ ಒಳ್ಳೆದು”,,

— ಹುಡುಗ ಅವರ ಮುಖ ನೋಡ್ತಾ ಹೇಳಿದ “ಸಾರ್ ಗಿಲಾಸ್ ನುವ , ಕಾಸುನ್ನುವ ಕೊಡಿ ಸಾರ್,,, ನಾನ್ ಹೋಯ್ತಿನಿ ”

(ಅವನನ್ನು ನೋಡಿ ಕುಚೋದ್ಯ ಮಾಡುವ ಹಂಬಲ ಆಯಿತು ಇಬ್ಬರಲ್ಲಿ ಒಬ್ಬನಿಗೆ)

“ಅಮ್ಮಿಕಂಡ್ ಇರಲಾ, ಗೊತ್ತು ನಮಗೆ ಕೊಡಾಕೆ,”

–ಹುಡುಗ ನಿದಾನವಾಗಿ “ಸಾರ್” ಎಂದ,,,

***************************************************************************************

ಕೋರ್ಟ್ ಕಟ-ಕಟೆಯಲ್ಲಿ ಭರ್ಜರಿ ಕೆಸರು ಎರಚಾಟ ನಡೆಯಿತು,,,

ಮಾತು ಗೊತ್ತಿದ್ದು, ಕಾಲಂ ಗಳನ್ನು ಓದಿಕೊಂಡವರು, ಏನಾದರೂ ಮಾಡಿ ಕಕ್ಷಿದಾರನನ್ನು ಉಳಿಸುವ ಪ್ರಯತ್ನ ಮಾಡಿದರು,

ಸತ್ಯಕ್ಕಿಂತಾ ಜಾಸ್ತಿ “ಮಾತು ಹಾಗು ಸೂಟಕೆಸಿನ ಒಳಗೆ ಅಡಗಿ ಕುಳಿತ ಗಾಂದಿಯ ಮುಖಪುಟಗಳು” ತೂಕವಾಗಿದ್ದವು

ವಿಚಾರಣೆ ಮುಂದಕ್ಕೆ ಹೋಯಿತು,,,,,, ದಿನ ಮುಗಿಯಿತು,,,

**************************************************************************************

ಹುಡುಗ ಅವ್ವನಿಗೆ “ಮಾತ್ರೆ ಚೀಟಿ ಕೊಡವ್ವ ಮಾತ್ರೆ ತಗಬತ್ತಿನಿ ಎಂದ”

“ದಿಂಬಿನ್ ಕೆಳಗ್ ಐಥೆ ನೋಡ್ ಮಗ”

(ಹುಡುಗ ಚೀಟಿಯೊಂದಿಗೆ ಓಡಿದ, ಮಾತ್ರೆ ಸಿರಪ್ಪು ಜೋಪಡಿಗೆ ಬಂದವು, ಹುಡುಗನ ಜೇಬಿನಲ್ಲಿದ್ದ ಏಳೆಂಟು ಗಾಂದಿ ಮುಖಪುಟಗಳು ಮೆಡಿಕಲ್ ಶಾಪಿಗೆ ಸೇರಿದ್ದವು)

ಇರುವ ಮೂರು ಬೆರಳುಗಳಿಂದಲೇ ಹೊರಗೆಲ್ಲ ಕರಿ ಮಸಿ ಹಿಡಿದ “ಒಳಗೆ ಸ್ವಲ್ಪ ಅಲ್ಯುಮಿನಿಯಂ ಬಣ್ಣದ ಪಾತ್ರೆಯಲ್ಲಿ ನೀರಿಟ್ಟು, ಇನ್ನೊಂದು ಪಾತ್ರೆಯಲ್ಲಿ ಅಕ್ಕಿ ಕುಲುಕಿ ಹಾಕಿದ, ಆಗಾಗ ನಂದುವ ಒಲೆಗೆ ಊಫ಼್ ಊಫ಼್ ಎಂದು ಬಾಯಲ್ಲಿ ಗಾಳಿ ಹಾಕುತ್ತಿದ್ದ,,,,,,,, ನೀರು ಕುದಿದು, ಅನ್ನ ಬೆಂದಿದ್ದು ಅವನಿಗೆ ಆವಿಯಲ್ಲಿಯೇ ಗೊತ್ತಾಯಿತು,

“ಪಕ್ಕದ ಜೋಪಡಿಗೆ ಓಡಿದ “ಕೆಂಪಮ್ಮತ್ತೆ ಏನ್ ಸಾಂಬಾರ್ ಮಾಡಿಯ ತತ್ತಾ”,,,,, ಚೆಂಬನ್ನು ಆಕೆಯ ಮುಂದೆ ಕುಕ್ಕಿದ, ಕೆಂಪು ಬಣ್ಣದ ದ್ರವ ಚೆಂಬು ಸೇರಿತು,,, ಜೋಲಿಯಲ್ಲಿ ಮಲಗಿದ್ದ ಕೆಂಪಮ್ಮತ್ತೆಯ ಚಿಕ್ಕ ಮಗುವಿಗೆ ಮುತ್ತಿಕ್ಕಿದ, ಸೀದ ಮನೆಗೆ ಓಡಿದ”

“ಅವ್ವ, ಅವ್ವ,,,,,,,,,,,, ಅವ್ವ, ಅವ್ವ,,,,,,,,

ಎದ್ದೆಳವ್ವ, ಉಣ್ಣಾಕ್ ಟೇಮ್ ಆತು”,,,,,,,, ಅವ್ವಾವ,,,,,,, ಕರೆಯದ್ ಕೇಳಾಕಿಲ್ವ,,,,,,,ಎದ್ದೆಳವ್ವ,,,,,

ಹತ್ತಿರ ಹೋದ,,,, “ಅವ್ವ, ಆಕೆಯ ಮುಖ ಹಿಡಿದು ಅಲುಗಿದ,,,,ಅವ್ವನ ಶಬ್ಧವೇ ಇಲ್ಲ,,,, ಮತ್ತೆ ಅಲುಗಿದ, ಅವ್ವಾ”,,,,,,

ಅವ್ವಾ ವಾ ವಾ ವಾ ವಾ ವಾ ವಾ ವಾ ವಾ ವಾ,,,,,,,,,,,,,,

ಪಕ್ಕದ ಜೊಪಡಿಗಳಿಗೆ ತಾಗಿ ಪ್ರತಿದ್ವನಿಸಿತು, ಕೆಂಪಮ್ಮತ್ತೆ ಓಡಿ ಬಂದಳು,,,,,,

“ಕೆಂಪಮ್ಮತ್ತೆ,,, ಅವ್ವ ಮಾತಾಡ್ತಾ ಇಲ್ಲ,,,, ನೋಡಿಲ್ಲಿ,,,,,,,,,,”

ಕೆಂಪಮ್ಮತ್ತೆ ಮುಟ್ಟಿ ನೋಡಿದಳು,,,,,,,,,,,,,,,,,,,,,,,,,,,,,,,, “ಅವ್ವ ಹೋದ್ಲು ಕಣ್ ಮಗ,,,,,,,,”

ಸ್ತಬ್ಧ ,,,,,,,, ಹುಡುಗ ಸ್ಥಬ್ದ,,,,,,,,,

*************************************************************************************

ಕಟಕಟೆಯ ವಿಚಾರಣೆ, ಮುಂದುವರೆಯಿತು,,,, ಯಾರೋ ಸೋತರು, ಯಾರೋ ಗೆದ್ದರು, ಅಲ್ಲಿ ಮಂಡಿಸುವ ವಿಚಾರಗಳಿಗೆ ಗೆಲುವಾಯ್ತು, ನೈಜ ವಾಸ್ತವ ಏನಾಯ್ತೋ ಗೊತ್ತಿಲ್ಲ?

ಟಿ ವಿ ಯವರು ನಾಲ್ಕು ದಿನ ಅದನ್ನೇ ಜೂಮ್ ಮಾಡಿ ತೋರಿಸಿ ಐದನೇ ದಿನಕ್ಕೆ, ಕೋರ್ಟಿನ ಪಕ್ಕದ, ಟಿ ಅಂಗಡಿಗೆ ಬಂದಿದ್ದವು,

“ಬಾಲ ಕಾರ್ಮಿಕರ ಸಾಮೂಹಿಕ ಬಿಡುಗಡೆ” ಎಂಬ ತಲೆ ಬರಹದೊಂದಿಗೆ ಟಿ ಅಂಗಡಿಯ ಹುಡುಗನನ್ನು ಸರ್ಕಾರಿ ಜವಾಬ್ದಾರಿಗೆ ಸೇರಿಸಿದೆವು ಎಂದು ಬೀಗಿದವೂ,

*************************************************************************************

ಹುಡುಗನಿಗೆ ಮಲೇರಿಯ ಬಂದಿತ್ತು ,,,,,, ಆ ಕೊಠಡಿಯೊಳಗೆ ಯಾರು ಬಂದಿರಲಿಲ್ಲ, ಎಲ್ಲವೂ ಅಲ್ಲೇ ಗಬ್ಬು ನಾಥ, ಇನ್ನೆರಡು ದಿನಗಳಲ್ಲಿ ಹುಡುಗ ಶವವಾದ,,,,,

ಕೊಠಡಿಯನ್ನು ಗುಡಿಸಿ “ಮುಂದೆ ಅಲ್ಲಿ ಬಂದು ಇರುವ ವ್ಯಕ್ತಿಗೆ ಸ್ಥಳಾಂತರಿಸಲಾಯಿತು”,,, ಅಲ್ಲ ಅಲ್ಲ ಕ್ಷಮಿಸಿ “ಮುಂದೆ ಅಲ್ಲಿಂದಾ ಹೋಗುವ ಶವಕ್ಕೆ ಕೊಠಡಿಯನ್ನು ಸಿದ್ದಪಡಿಸಲಾಯಿತು”

**************************************************************************************

ವಿಚಾರಗಳಿಗಿಂತಾ, ತತ್ವಗಳಿಗಿಂತಾ, ಜಾತಿ ಧರ್ಮಗಳಿಗಿಂತ,,,,,,,,,,,,,,,,,, “ಜೀವ ದೊಡ್ದದು,,, ಹಸಿವು ದೊಡ್ದದು,,, ಬಡತನ ದೊಡ್ದದು”
ಅವ್ವಾ ಎಂದು ಕಿರುಚಿದ ಹುಡುಗನ ಕಣ್ಣೀರು ದೊಡ್ಡದು,

(ನೈಜ ಘಟನೆ ಆಧಾರಿತ)

Advertisements
ನಿಮ್ಮ ಟಿಪ್ಪಣಿ ಬರೆಯಿರಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: