Skip to content

ಗುಡಿಸಿಲ ಸಂದಿಯ ಹೆಣ್ಣೊಬ್ಬಳ ಆರ್ತನಾದ

ಆಗಷ್ಟ್ 18, 2014

ಇದೇನು ಸ್ವಾತಂತ್ರ್ಯ ದಿನ??
ಮತ್ತೆ ಮತ್ತೆ ಬರುತ್ತಲಿದೆ ವರ್ಷಗಳಿಂದಾ
ನಾನು ಸ್ವತಂತ್ರಳು ಎಂದು ನೆನಪಿಸಿ
ಕಾಡಿ ಕೊಲ್ಲುತ್ತಿದೆ;

ನನ್ನ ಉಗುರಿಗೆ ಬಣ್ಣ ಹಚ್ಚಿ
ಕೈಗಳಿಗೆ ಕೋಳ ಹಾಕಿದೆ, ಈ ಸ್ವಾತಂತ್ರ್ಯ

ತಲೆಗೊಂದು ಹೂ ಇಟ್ಟು
ಕನಸುಗಳಿಗೆ ಕಲ್ಲು ಹೊಡೆದಿದೆ, ಈ ಸ್ವಾತಂತ್ರ್ಯ

ನಡು ಬೀದಿಯಲಿ, ಮದ್ಯ ರಾತ್ರಿಯಲಿ
ನಾನು ನಡೆದು ಹೋದರೆ (ಭಯವಿಲ್ಲದೆ)
ಅದೇ ಸ್ವಾತಂತ್ರ್ಯ ಎಂದರು ಬಾಪು!!
ಈಗ ಮಧ್ಯಾಹ್ನ ಸುಡು ಬೆಳಕಿನಲಿ ನಡೆದರೂ,,,
ಚಿ, ಚಿ ,,, ಮತ್ತದನ್ನು ನಾನು ಹೇಳಬೇಕೇ,,,
ಎಲ್ಲರೂ ನೋಡುತ್ತಿರುವವರಲ್ಲ,,,, ದಿನ ಟಿ ವಿ ಯಲಿ,,,

ಕಣ್ಣು ಕಟ್ಟಿನ ಆಟ,,,
ಹೊರುವವಳು ನಾನು, ಹೆರುವವಳು ನಾನು,
ನನ್ನನೇ, ಹಗ್ಗದಲಿ ಕಟ್ಟಿ, ಬಾಯಿಗೆ ಬಟ್ಟೆ ತುರುಕಿ,
ಉದ್ದ ಅಗಲ ದೇಶಕ್ಕೆ ನನ್ನನೇ ಹೋಲಿಸಿ,
ಸ್ವತಂತ್ರ್ಯ ಸಂಭ್ರಮ ಆಚರಿಸುವಿರೋ ?

ನಾನು ಸೊರಗುತ್ತಿದ್ದೇನೆ,
ನನಗೆ ಇಲ್ಲಿ ನೆರಳಿಲ್ಲ,,,,
ನನಗೆ ಇಲ್ಲಿ ಬದುಕಿಲ್ಲ,,,,
ನಾನು ನೊಂದು ಸಾಯುವ ಮುನ್ನ
ಕಣ್ಣೆತ್ತಿ ನೋಡಿ,,,
ನನಗೂ ಸ್ವಾತಂತ್ರ್ಯದ ಸಿಹಿಯ ಕೊಡಿ,

ಕೋಟೆ, ಕೊತ್ತಲ, ಬಂಗಾರ ಬೇಡ,,,
ನನಗೆ ನನ್ನಷ್ಟಕ್ಕೆ ಬದುಕುವ
ನಿಜವಾದ ಸ್ವಾತಂತ್ರ್ಯ ಕೊಡಿ,,,

ಅಯ್ಯೋ ಈ ಸ್ವಾತಂತ್ರ್ಯ ದಿನ
ಮತ್ತೆ ಬಂತೆ ??
ನನ್ನನೇ ಕೆಣಕುವಂತೆ ?

Advertisements
ನಿಮ್ಮ ಟಿಪ್ಪಣಿ ಬರೆಯಿರಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: