Skip to content

ಕಡಲ ಕದ್ದಳು ಹುಡುಗಿ.

ಸೆಪ್ಟೆಂಬರ್ 1, 2014

ದಿನ ದಿಗಂತದ
ಮಳೆಯ ಹಾಸಿಗೆ ಹೊದ್ದ
ಜಲ ತರಂಗಗಳಂತಿದ್ದ,
ಮನದ ಕಡಲ ಕದ್ದಳು ಹುಡುಗಿ.

ಆಳದೊಳಗೆ ಮೌನ ತಾಳಿ,
ಹೊರಗೆ ಅಲೆಗಳು
ಎದೆಯೊಳಗೆ ಅಪ್ಪಳಿಸುವಂತಿದ್ದ,
ಮನದ ಕಡಲ ಕದ್ದಳು ಹುಡುಗಿ.

ಚಿತ್ರ ವಿಚಿತ್ರ ಕನಸುಗಳ
ಅಡಗಿಸಿಟ್ಟ ಪುಟ್ಟ ಗಡಿಯಾರ
ಕೊನೆ ಇಲ್ಲದೆ ತೊನೆಯುತ್ತಿರೆ
ಮನದ ಕಡಲ ಕದ್ದಳು ಹುಡುಗಿ

ಮದ್ಯ ರಾತ್ರಿಯಲಿ,
ಮನದೊಳಗೆ ಕಪ್ಪು ತುಂಬಿ
ಪ್ರೇಮಕ್ಕೆ ಕ್ಷಾಮ ಬಂದಿರೆ,
ಮನದ ಕಡಲ ಕದ್ದಳು ಹುಡುಗಿ,

ಬೆಳಕ ಹಂದರದೊಳಗೆ
ಕ್ರೌರ್ಯ ಆಕ್ರಮಿಸಿ
ನನ್ನತನ ಮುರುಟುತ್ತಿರೆ
ಮನದ ಕಡಲ ಕದ್ದಳು ಹುಡುಗಿ,

ಆಕೆಯ ಕಣ್ಣೀರಿಗೆ,,,,,,,,,,,,,,,,
ನಾನೀಗ ಕಾವಲುಗಾರ,,,,,,,,

Advertisements
4 ಟಿಪ್ಪಣಿಗಳು
  1. ಕಡಲ ಕದ್ದು ಕಣ್ಣೀರಾಗುವ ಕನ್ಯೆ, ಅದೇ ಕಣ್ಣೀರಿಗೆ ಕಾವಲಾಗುವ ಕಲ್ಪನೆ.. ಒಂದು ವಿಸ್ಮಯ ಕವಿತೆ…!

    Liked by 1 person

  2. Badarinath Palavalli permalink

    ಕಡಲೇ ಕದ್ದ ಹುಡುಗಿಯ ಕಣ್ಣೀರಿಗೆ ತಾವು ಕಾವಲಾಗುವ ಭಾವವು ನಮ್ಮೊಳಗಿನ ಮರೆತ ಅಧ್ಯಾಯಗಳನ್ನು ಬಗೆಯುತ್ತಿವೆ.

    Liked by 1 person

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: