Skip to content

** ಪ್ರೇಮ **

ಸೆಪ್ಟೆಂಬರ್ 9, 2014

ಹದವರಿಯದ ನೆಲಕ್ಕೂ

ಮೋಡಕಟ್ಟದ ಬಾನಿಗೂ
ಪ್ರೇಮ ಸಂಭವಿಸಬೇಕು,,,,
ಇಬ್ಬರ
ಪ್ರೇಮ ಸಲ್ಲಾಪದಲಿ
ಬಾನಿಂದ
ಮಳೆ ಹನಿದಾಗ ;
ನೆಲ, ನಾಚಿಕೆಯನು ಬದಿಗಿಟ್ಟು
ತುಟಿಬಿರಿದು,
ಮಳೆಯ, ಹನಿ-ಹನಿಯನೂ
ಆಸ್ವಾದಿಸಬೇಕು,,,,
ಬಾನು-ಭುವಿಯ
ಮಿಲನ ಸಂಭ್ರಮದಲಿ,
ನಮ್ಮ ಬೆನ್ನೆಲುಬುಗಳು
ದಿಟ್ಟವಾಗುತ್ತವೆ ;
ಅದೇ ಪ್ರೆಮದಿಂದಲೇ
ಬೀಜ ಬಿತ್ತಿ
ಪೈರು ತೆಗೆದು
ಹೊಟ್ಟೆಯ ಹಸಿವು ತಣಿಸಿಕೊಳ್ಳಬೇಕು ;
**************************************
ಇಲ್ಲೇನಾಗಿದೆ ?
ಬಾನು, ಪ್ರೇಮದ
ಉತ್ತುಂಗದಲಿ ಮಳೆ ಹರಿಸಿದರೂ.
ಒಂದು ಹನಿಯೂ
ಭುವಿಯ ಗರ್ಭ ಸೇರುತ್ತಿಲ್ಲ,,,
ಕಾಂಕ್ರೀಟಿನ ಹೊದಿಕೆಯೊಳಗೆ,
ಭುವಿಯ ತುಟಿಯನು
ಬಾನು ಚುಂಬಿಸದಂತೆ ಹೊಲಿದು
ಬಿಟ್ಟಿದ್ದೇವೆ,,,
ನಾಚಿಕೆ ಇಲ್ಲದ ನಾವುಗಳು,,,
— ಜೀ ಕೇ ನ
Advertisements
4 ಟಿಪ್ಪಣಿಗಳು
  1. kusuma ravi permalink

    Dear Mughdasinchana,

    Nanage illi Kannadadalli type madoke agila, hagagi English le type
    madiddene. Nijakku tumbane sogasada, teera pakvathe iruva barahagalu,
    odidamele vasthavatheya bagge omme yochane idu maduthave.

    Regards
    Kusuma

    Liked by 1 person

    • ಕುಸುಮ-ರವಿ ಅವರಿಗೆ ನಮಸ್ತೆ,,,,,

      ಭಾವದಲಿ ಮಿಂದೆದ್ದ ನಿಮ್ಮ ಪ್ರತಿಕ್ರಿಯೆ ಮುದ ನೀಡಿತು,,,,,,,,

      ನೀವು ಹೇಳಿದಂತೆ, ನಾಗರೀಕತೆಯ ಇನ್ನೊಂದು ರೂಪ ಪ್ರಕೃತಿಯ ನಾಶ,,,, ಹಾಗಾಗಿಯೇ ವಾಸ್ತವದ ಕನ್ನಡಿ ಒಮ್ಮೆ ಒಡೆಯಬಾರದೆ ಎಂದು ಪ್ರಕೃತಿ ಅಳುತ್ತಿದೆ,,,,,,,,

      — ಧನ್ಯವಾದಗಳು
      ಜೀ ಕೇ ನ

      Like

  2. Badarinath Palavalli permalink

    ದುರಂತವೆಂದರೆ ಇದು!
    ಹನಿಯೂ ಒಳಗೆ ಬಿಟ್ಟುಕೊಳ್ಳದಂತೆ ಕಾಂಕ್ರಿಟ್ ಮತ್ತು ಟಾರ್ ಹಾಸಿಟ್ಟು ಬಿಟ್ಟಿದ್ದೇವೆ. ಇನ್ನು ಇಂಗುವುದಾದರೂ ಕನಸಿನ ಮಾತೇ.

    ಕವಿತೆಯ ಕಟ್ಟುವಿಕೆಯಲ್ಲಿ ನಿಮ್ಮ ಹೆಚ್ಚುಗಾರಿಕೆ, ಇಲ್ಲಿಯ ಪದಲಾಸ್ಯದಿಂದ ಮತ್ತೊಮ್ಮೆ ಸಾಭೀತಾಯಿತು.

    ಇಡೀ ಕವನವನ್ನು ಬದುಕಿಗೂ ಅನ್ವಯಿಸಬಹುದಾದಷ್ಟು ಪ್ರತಿಮಾವಂತಿಕೆ ಇದೆ.

    Liked by 1 person

    • ಕವಿತೆಯ ಸಾಲುಗಳನ್ನು ಬದುಕಿಗೆ ಹೋಲಿಸಿದ ಪರಿ ವಿಭಿನ್ನವಾಗಿದೆ ಪಲವಳ್ಳಿ ಸರ್, ಭಾವಪೂರ್ಣ ಪ್ರತಿಕ್ರಿಯೆ,,,,, ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ಕವನ ಪ್ರೀತಿಯನ್ನು ನಾವೆಲ್ಲಾ ಮನಪೂರ್ವ ಶ್ಲಾಗಿಸುತ್ತೇವೆ,,,,, ಧನ್ಯವಾದಗಳು ಸರ್,,,

      Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: