Skip to content

– ಕನ್ನಡಿಯ ನೈತಿಕತೆ –

ಸೆಪ್ಟೆಂಬರ್ 10, 2014

ಕನ್ನಡಿ ಎದುರಿಸಿದ ಸಾಲುಗಳು,,,

“ಒಮ್ಮೆ ಸುಳ್ಳು ಹೇಳಿಬಿಡು ಕನ್ನಡಿಯೇ
ನೆರಿಗೆ-ಗಟ್ಟಿಲ್ಲ ನನ್ನ ಮುಖ ಎಂದು”

(ಯವ್ವನದಿಂದಾ ವೃದ್ದಾಪ್ಯಕ್ಕೆ ಕಾಲಿಡುವಾಗ
ಕನ್ನಡಿಗೆ ಹೇಳಿದ್ದು — ಯಯಾತಿಯಲ್ಲ)

************************************

“ಒಮ್ಮೆ ಸುಳ್ಳು ಹೇಳಿಬಿಡು ಕನ್ನಡಿಯೇ
ಕಪ್ಪು-ಗಟ್ಟಿಲ್ಲ ನನ್ನ ಮುಖ ಎಂದು ”

(ಭಾವಗಳಲ್ಲೆ ಬಣ್ಣ ಬಣ್ಣದ ಕನಸು ಹೊತ್ತ
ಕಪ್ಪು ಚರ್ಮದ ಹುಡುಗಿ ಕನ್ನಡಿಗೆ ಹೇಳಿದ್ದು)

***********************************

ತುಂಬು ಯವ್ವನದ ತರುಣಿಯ
ಕನಸುಗಳ ಹೊರುವುದು
ಅವಳ ಗೋಡೆಯ ಕನ್ನಡಿ,

ಮುಂದೆ ಆಕೆಯ ಬದುಕಲ್ಲಿ
ಬರುವ ತರುಣನ ಬಗೆಗಿನ
ತರ-ತರ ದ ಕನಸುಗಳು
ದಿನವೂ ಅರಳಿ, ಲೀನವಾಗುವುದು
ಕನ್ನಡಿಯ ಅಂಚಿನಲಿ,,,,,,,

ಕಪ್ಪು ಕಾಡಿಗೆಯ ಅಂದ ;
ತುಟಿಗೆ ಹಚ್ಚಿದ ಕೆಂಪು ;
ಸೀರೆಯ ಉದ್ದ ನೆರಿಗೆ ;
ಎಲ್ಲವೂ ಕನ್ನಡಿಯ ಎದುರು ನಗ್ನ,,,

ಕಳೆದು ಹೋಗಬಾರದೆಂಬ
ಹಣೆ ಬೊಟ್ಟು,
ಅಂಟಿ ನಿಲ್ಲುವುದು ಕನ್ನಡಿಯ
ಬದಿಯಲ್ಲಿ,,,

ತಟಸ್ಥ ಸ್ಥಿತಿಯಲ್ಲೇ
ತರುಣಿಯ ಅಂದವನು
ಅರಳಿಸುವ ಹೊಣೆ,
ಕನ್ನಡಿಯ ಮೇಲೆ,,,
ಆ ಅಂದವನು ಕಂಡಮೇಲು
ಕನ್ನಡಿಯ ನೈತಿಕತೆ !
ಅಬ್ಬಾ,,,,,, ಸರಿಸಾಟಿ ಇಲ್ಲ,,,,

–ಜೀ ಕೇ ನ

Advertisements
3 ಟಿಪ್ಪಣಿಗಳು
  1. kusuma ravi permalink

    Athyantha Sundara Kavana

    Regards
    Kusuma

    Liked by 1 person

  2. ಹೆಣ್ಣಿನ ಒಳತೋಟಿಗಳಿಗೆ ಕನ್ನಡಿ ಹಿಡಿದಿದ್ದೀರಿ..!

    Liked by 1 person

  3. Badarinath Palavalli permalink

    ಸತ್ಯವನೇ ಸಾಧಿಸುವ ಕನ್ನಡಿಯು ಹೇಳುತ್ತೆ ಇದ್ದದ್ದನ್ನು ಇದ್ದಂತೆ.

    Liked by 1 person

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: