Skip to content

ಖಾಲಿ ಬಾಟಲಿಯ ಶಬ್ಧಗಳು

ಸೆಪ್ಟೆಂಬರ್ 10, 2014

ಕೆಂಪು ಸೂರ್ಯ
ಬೆಳಕು ನೀಡುವ ಬರದಲಿ,
ಸುರ್ಯೋದಯವನೇ ನೋಡಲಿಲ್ಲ,
ಮದುರ ಕ್ಷಣಗಳ ನೆನೆಯಲಿಲ್ಲ,,,
ಪ್ರೇಯಸಿ ಭೂಮಿಯನು,
ಕಳೆದುಕೊಂಡು ಕೊಟ್ಯಾಂತರ
ವರ್ಷಗಳಾದರೂ
ಅವನೊಳಗಿನ ಪ್ರೇಮದ ಕಿಚ್ಚಿಗೆ
ಬೆಂಕಿ ಹಚ್ಚಿ,,,,
ಪ್ರೇಯಸಿಯ ಕಾದಿಹನು,,,,
ಹಗಲಿರುಳು ಎಡೆ ಬಿಡದೆ…
ನಾನು, ಕಾಣದ ಹುಡುಗಿಗೆ
ಹಂಬಲಿಸಿದ್ದೂ ಹೀಗೆ !!

************************************

ನಿಟ್ಟುಸಿರು ನಿಂತ ಕೊನೆ ಗಳಿಗೆ,
ಬದುಕು ಚಟಾರನೆ ಕೆನ್ನೆಗೆ ಹೊಡೆದು ;
ನನ್ನ ಬದುಕುವುದೆಂದರೆ
ಮರ(ರು)ಳ ಕ(ಕ್ಷ)ಣಗಳ ಮನೆಯನು
ಸಾಗರದ ತೀರದಲಿ ಕಟ್ಟಿ
ಕಾಮನೆಯ ಮಳೆ ಬಂದಾಗ
ಓಡಿ ಹೋಗುವ,
ಜಾತ್ರೆಯ ಗಿಟಾರೆಂದುಕೊಂಡೆಯ ?
ಎಂದಡಿಗಡಿಗೆ ಕೇಳುತ್ತಿದೆ,

************************************

ಕಿತ್ತ ಟಾರು ರಸ್ತೆಯ ಮಧ್ಯ
ಅಲಗಿ ಕುಲುಕಿ,,
ಬದುಕು ಸವೆಸಿದ ದಿನಗಳನು
ಖಾಲಿ ಸಪಾಟು ರೋಡಿನಲೂ
ನೆನಪಿಸಿಕೊಂಡು,
ಮಳೆ ಬರದೆಯೂ ಕೊಡೆ ಹಿಡಿಯುವ
ಹುಡುಗಿಯ ಕಣ್ಣೋಟಕೆ ಬೈದರೆ !!
ಹುಡುಗಿಯೊಳಗಿನ ಹೆಣ್ಣು
ಸತ್ತಿರುವಳೇ ?

***********************************

ಬೇಡವಾದ ಕೆಸರಿನಲೇ
ಕಮಲ ಅರಳಿ ನಿಲ್ಲುವುದು
ಕೋಮಲತೆಯ ಮೆರೆವುದು,
ಬೇಡವಾದ ಹೃದಯದಲಿ
ನಿನ್ನ ನೆನಪು ನಿಂತಹಾಗೆ,,,
ಏಕಾಂಗಿಯಾಗಿ ಸಾಯಲು ಬಿಡದೆ
ನನ್ನನೇ ಕೊಂದ ಹಾಗೆ,

***********************************

ಖಾಲಿ ಬಾಟಲಿಯನು ಅಲ್ಲಾಡಿಸಿ
ಎವೆಇಕ್ಕದೇ ನೋಡಿ,
ಸತ್ತ ಹಲವು ಕನಸುಗಳು,
ಅಲ್ಲೇ ಬಿದ್ದಿರುತ್ತವೆ, ಶಬ್ದವಿಲ್ಲದೇ
ಮೌನವಾಗಿ ….
ಬಾಟಲಿಯೊಳಗಿನ ಮಧ್ಯ ಖಾಲಿಯಾಗಿ
ಅದರಲಿ ತುಂಬಿದ ಭಾವಗಳನು
ಎರವಿಗೆ ಪಡೆದರೆ,
ಮಲ್ಯನೂ ಕಾಲು ಕಸ,
ಹುಡುಗನ ಪ್ರೀತಿ ಶ್ರೀಮಂತಿಕೆಗೆ,

— ಜೀ ಕೇ ನ

Advertisements
2 ಟಿಪ್ಪಣಿಗಳು
  1. ಖಾಲಿತನ ದೂಡಿಸುವ ಬಾಟಲಿಯಲ್ಲಿ ಸಂಗ್ರಹಿಸಬೇಕಾದ ಹನಿ..ಗಳು…!

    Liked by 1 person

  2. Badarinath Palavalli permalink

    ಇವೇ ಇವೇ ಕಣಪ್ಪ ಅಸಲೀ ಖಾಲಿ ಬಾಟಲಿ ಕವಿತೆಗಳು ಎಂದರೆ. ಬುರುಡೆ ಬಿಚ್ಚಿ ಖಾಲಿಯಾದ ಮೇಲೆ ಬಾಟಲಿ ಸಾವಿರ ಭಾವಗಳನ್ನು ಹುಟ್ಟಿಸಿತ್ತೆ!
    (ನನಗೂ ಸಹ…)

    Liked by 1 person

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: