Skip to content

————ಹಸಿವು————-

ಸೆಪ್ಟೆಂಬರ್ 17, 2014

ಆಕೆಯ ಉದರದ ಆಳದಲಿ ಹಸಿವು
ಜಾಡಿಸಿ ಒದ್ದು ಗದ್ದಲವೆಬ್ಬಿಸಿತ್ತು,

ಚಿಂದಿಯಾದ ಚೀಲದ ಅರೆಯೊಳಗೆ
ಬಿಡಿ ಕಾಸೂ ಉಳಿದಿಲ್ಲ ;
ಹರಿದ ಕುಪ್ಪಸದ ಒಳಗೆ ಅಡಗಿದ್ದ
ಕೆಂಪು ಪರ್ಸಿನ ತಳ ಹರಿದಿದೆ;

ಅಲ್ಲೆಲ್ಲೋ ಭಾಷಣದ ಸದ್ದು
“ಬಡತನ ನಿರ್ಮೂಲನೇ ನಮ್ಮ ಗುರಿ”
ದೇಶ ಉದ್ದಾರವಾಗಬೇಕು

ಇನ್ನೆಲ್ಲೋ ಬರಹಗಳ ಮಹಾಪೂರ
“ದೇಶಕ್ಕೆ (ಬಂಡ)ವಾಳ ಶಾಹಿಗಳು ಬೇಕು”
ದೇಶ ಬೆಳೆಯಬೇಕು

ಹಸಿವು ತಣಿದೀತೆ ?

ಬಿಕ್ಷೆಗೆ ಕೈ ಮುಂದೆ ಸರಿಯಿತು,
“ಮೈ ಕೈ ಗಟ್ಟಿ ಇಟ್ಟುಕೊಂಡಿರುವಾಗ
ಭಿಕ್ಷೆ ಬೇಡುವೆಯ” —ಬುದ್ದಿವಂತ ಜನರ ಚೀ ತೂ

ಕೂಲಿ ಕೆಲಸಕ್ಕೆ ಅಲೆದು ಅಲೆದು,
ಪಾದವೇ ಹರಿದುಹೊಯ್ತು,
“ದಿಕ್ಕು ದೆಸೆ ಇಲ್ಲದಾಕೆಗೆ ಕೆಲಸವಾರು ಕೊಡುವರು
ಬೇವರ್ಸಿ ನೀನು”

ಹಸಿವು ತಣಿದೀತೆ ?

ಕಳ್ಳತನಕ್ಕೆ ಕೈ ಹಾಕಿ,
ತಿರಸ್ಕ್ರುತಗೊಂಡು, ಗುದ್ದು ಪಡೆದು
ಮೈ ಕೈ ನೋವು ಜಾಸ್ತಿ ಆಯಿತು

ಆದರೂ ಹಸಿವು ತಣಿದೀತೆ ?

ಕಲೆ ಇರದ ಕಪ್ಪು ಮುಖ
ಎದೆ ಮೇಲಿನ ಉಬ್ಬು ತಗ್ಗುಗಳು
ದಾರಿ ಬದಿಯವನ ಕಣ್ಣಲ್ಲಿ ಪ್ರತಿಫಲಿಸಿತು,
ಹೃದಯ, ಮೈ ಮನ ಬೇಡವೆಂದರೂ
ಹೊಟ್ಟೆ ಕೇಳಿತೇ ?

ಬೆತ್ತಲೆಯಾಯ್ತು !!!!! ಮನ ;

ಅಂದಿಗೆ ಹೊಟ್ಟೆ ತುಂಬಿತ್ತು,

ಎರಡು ಹಸಿವುಗಳ ಸಮ್ಮಿಲನ,,,,,

ಟಿ. ವಿ. ಅಂಗಡಿಯ ಬದಿಯ ಗಾಜಿನಲಿ,
ತನ್ನದೇ ಮುಖ,
“ವೇ******ಕೆಯ ಸ್ಟಿಂಗ್ ಆಪರೇಶನ್,,,
ಬೃಹತ್ ಜಾಲ ಪತ್ತೆ “

ಟಿ. ವಿ ಯವರು ಮಾಡಿದ್ದು ಅವರ ಹೊಟ್ಟೆಗಾಗಿ,
ಪತ್ರಿಕೆಯವರು ಬರೆದದ್ದು ಅವರ ಹೊಟ್ಟೆಗಾಗಿ,

ಆದರೆ!! ಅವರು ಕಿತ್ತು ತಿಂದದ್ದು ವೇ*ಯಾ ಅನ್ನವನ್ನು,,,,,

“ಕೊನೆಗಾಣದ ಭಾವಗಳಿವು”

(ಆಕೆಯ ನೈಜ ಜೀವನದ ಸಾಲುಗಳು)

Advertisements
One Comment
  1. Badarinath Palavalli permalink

    ಬಡತನ ಮತ್ತು ಆಕೆಯ ದೌರ್ಭಾಗ್ಯವು ಅಕ್ಷರಗಳ ಆಳದಲ್ಲಿ ಕರಾಳತೆಯ ಅಡಿಪಾಯಗಳಾಗಿವೆ ಇಲ್ಲಿ!

    Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: