Skip to content

ಉದುರಿ ಬಿದ್ದ ಚಂದ್ರ

ಅಕ್ಟೋಬರ್ 16, 2014
ಉದುರಿ ಬಿದ್ದ ನನ್ನೆದೆಯ ಚಂದ್ರ
ನಿನ್ನ ಮೋಹಕನಗುವಿನೊಳಗೆ.
 ,
ನೆನ್ನೆ ವರೆಗೂ ಸರಿಯಾಗಿದ್ದ,
ನಿನ್ನ ಕಾಣೋ ತವಕದಲ್ಲಿ
ಬೆಣ್ಣೆಯಂತೆ ಕರಗಿ ಹೋದ.
 ,
ರೆಪ್ಪೆ ಅಂಚಿನ ಮಂಚದಲಿ
ಹುಬ್ಬು ನೋಡುತಾ ಮಲಗಿಬಿಟ್ಟ
ಕೆಳಗೆ ಜಾರಿದರೆ ಹೊನ್ನಿನ ಕೆನ್ನೆ,
ಮೇಲೇರಿದರೆ ದಟ್ಟ ಮುಂಗುರುಳು.
 ,
ಚಂದ್ರನೆದೆಯ ಪರದೆ ಮೇಲೆ
ನಿನ್ನ ನಗುವ ಚಲನಚಿತ್ರ.
ಬೇಡವೆಂದರೂ ನಿಲ್ಲುತ್ತಿಲ್ಲ
ತನನಂ ತನನಂ ಸಂಗೀತ
 ,
ಬಾನಿಗಂತೂ ಕೊನೆಮೊದಲಿಲ್ಲ
ಪ್ರೀತಿಗಂತೂ ತಲೆ ಸರಿ ಇಲ್ಲ,,,,
ಬಿದ್ದರೆ ಅದೇ ಆಳ ಎದೆ
ಏಳುವ ಮಾತೆಲ್ಲಿಯದು?
 ,
(ಹುಡುಗಿ ಮೌನ ಪಟಾಕಿಯೆಂದು ಚಂದ್ರನಿಗೇನು ಗೊತ್ತು?)
 ,
— ಜೀ ಕೇ ನ
Advertisements
2 ಟಿಪ್ಪಣಿಗಳು
  1. Badarinath Palavalli permalink

    ಆವರಣದಲಿರುವ ಸಂಗತಿಗೆ ನಮ್ಮ ಸಂಪೂರ್ಣ ಅನುಮೋದನೆ ಇದೆ.

    Liked by 1 person

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: