ವಿಷಯದ ವಿವರಗಳಿಗೆ ದಾಟಿರಿ

ಅನ್ನದಾತನೇ

ಅಕ್ಟೋಬರ್ 16, 2014

ಕೈಗಂಟಿದ ಒರಟು ಚರ್ಮ,
ಮೈಮೇಲಿನ ಬೆವರ ಕಮುಟು,
ಹರಿದ ಅಂಗಿ, ತರಿದ ಪಂಚೆ,
ಇವೇ ಅಡಿಪಾಯ,
ನಾ ಗಡದ್ದಾಗಿ ತಿಂದು ತೇಗುವ ಅನ್ನಕ್ಕೆ

,

ಕಪಾಳಕ್ಕೆ ಬಾರಿಸುವವರಿಲ್ಲ ನನಗೆ,
ಅನ್ನ ಕೊಡುವವನ ಕನಸು ಕಸಿದ್ದಿದ್ದಕ್ಕೆ.
ತಿಳಿ ಸಾರು, ಗಟ್ಟಿ ಮೊಸರು
ಕಲಸಿ ತಿಂದು,
ಕೊಟ್ಟವನನೇ ಮರೆತು,
ಓಡಿಸಿದ, ದೇಶದ ಚಾಕರಿ ಮಾಡುವ
ನನಗೆಂತ ಮರ್ಯಾದೆ?

,

ಕೆಂಪು ಸೂರ್ಯನ ಉರಿಯಲ್ಲೇ
ಉತ್ತಿ ಬಿತ್ತಿ, ಬೆಳೆದು
ಎದೆಗೆ ಅವುಚಿ ತಂದ ಬತ್ತ,,,,
ದಾರಿಯಲ್ಲೇ ಮಂಗಮಾಯ,
ಬಡತನದ ಹೊಟ್ಟೆ ಹೊರೆಯಲು,,,

,

ಒಂದು ಕಾಳೂ ಅನ್ನವನೂ
ನೀಡಲಾಗದ ನನ್ನಂತವನಿಗೆ
ಎಲ್ಲಿದೆ ತಿನ್ನುವ ಹಕ್ಕು ??

,

— ಜೀ ಕೇ ನ

 

2 ಟಿಪ್ಪಣಿಗಳು
  1. Badarinath Palavalli permalink

    ಇದೇ ಆತ್ಮ ವಿಮರ್ಷೆ ಮಾಡಿಕೊಂಡ ದಿನ, ನಮ್ಮ ರಾಜಕಾರಣಿಗಳೂ ಕನಿಷ್ಠ ಮನುಷ್ಯರಾಗುತ್ತಾರೆ!

    Liked by 1 person

Leave a reply to Badarinath Palavalli ಪ್ರತ್ಯುತ್ತರವನ್ನು ರದ್ದುಮಾಡಿ