Tags
ಆಕೆ, ಒಂದು, ಕಾಮನೆ, ಜಾಗತೀಕರಣ, ಜೀವ ನೀಡಿದಾಕೆ, ತಾಯಿ, ದೀಪ, ಧರ್ಮ, ನವೀನ್, ನಾಚಿಕೆ, ನಾಸ್ತಿಕ, ನಿಮ್ಮ ಪ್ರೀತಿಸುವ ಜೀವಾ, ಪ್ರೇಮ, ಬದುಕ, ಬೆತ್ತಲೆ, ಭಾರತ, ಮುಕ್ತಿ, ಮುಗ್ಧ, ಮೂಕ, ಸಾಲುಗಳು, baraha, kannada, kannada kathe, kannada kavana, karnataka, karntaka, kathe, kavana, kavite, kavithe, mugdasinchana, mugdasinchana.wordpress.com, wordpress.com
ನಾಚಿಕೆ ಇಲ್ಲದ ಸಾಲುಗಳು-2
ಅಕ್ಟೋಬರ್ 27, 2014
ಅಕ್ಷರಕ್ಕೆ ನೇತುಬಿದ್ದ
ಎಲ್ಲಾ ಭಾವಗಳನು
ಯಾವ ಭಾಷೆಯಲಿ ಬಂದಿಸಿದರೂ
ಕಣ್ಣೀರು ಶಾಶ್ವತವಾದರೆ,
ನನಗ್ಯಾಕೆ ಬೇಕು ಭಾಷೆ ?
ನಾನು ಮೂಕನಾಗಬಲ್ಲೆ.
********************************
ಧರ್ಮದ ಹಗ್ಗದ ಕೊನೆಯಲ್ಲಿ
ನನ್ನ ಕೊರಳನ್ನು
ಅಮುಕಿ ಹಿಡಿದು,
ಹಸಿವೆಯಲಿ ಕಿರುಚುವಾಗ
ಯಾವ ಧರ್ಮವೂ ಅನ್ನವಿಕ್ಕಲಿಲ್ಲವೆಂದರೆ.
ನನಗ್ಯಾಕೆ ಬೇಕು ಧರ್ಮ ?
ನಾನು ಮನುಜನಾಗಬಲ್ಲೆ.
********************************
ಉಸಿರುಗಟ್ಟಿಸುವ
ನಗರದ ತುದಿಯಲೀ,
ದೊಡ್ಡಮನೆಯ ಜಗುಲಿಯಲೀ
ಲಕ್ಷ ದುಡಿದೂ,
ನೆಮ್ಮದಿ ಇಲ್ಲದ ಜೇನು ಹುಳುವಾದರೆ.
ನನಗ್ಯಾಕೆ ಬೇಕು, ಈ ನಗರ, ಈ ಲಕ್ಷ ?
ನಾನು ಬಡವನಾಗಬಲ್ಲೆ.
********************************
ದಿನವೂ ಚರ್ಚು, ಮಸೀದಿ, ಮಂದಿರ ಸುತ್ತಿ
ಲೆಕ್ಕವಿಲ್ಲದಷ್ಟು ಮಂತ್ರಗಳನು ಜಪಿಸಿ
ರಾತ್ರಿ ಹೊಟ್ಟೆಗಿಲ್ಲದೆ
ಉಪವಾಸ ಮಲಗುವುದಾದರೆ,
ನನಗೇಕೆ ಬೇಕು ಚರ್ಚು, ಮಸೀದಿ, ಮಂದಿರ ?
ನಾನು ನಾಸ್ತಿಕನಾಗಬಲ್ಲೆ.
********************************
ಇರುವ “ಒಂದೇ ಒಂದು ಬದುಕನು” ಬದುಕಲು,
ಏನೆಲ್ಲಾ ,,,,,,,,,,,,,,,,,,,,,,,,,
Advertisements
From → ನಾಚಿಕೆ ಇಲ್ಲದ ಸಾಲುಗಳು
’ಹಸಿವೆಯಲಿ ಕಿರುಚುವಾಗ
ಯಾವ ಧರ್ಮವೂ ಅನ್ನವಿಕ್ಕಲಿಲ್ಲವೆಂದರೆ.
ನನಗ್ಯಾಕೆ ಬೇಕು ಧರ್ಮ ?’
ಇದು ಯಾಕೆ ಯಾವ ಮತಾಂಧನಿಗೂ ಅರಿವಾಗುವುದೇ ಇಲ್ಲ?
LikeLiked by 1 person
ಅವರೆಲ್ಲ ಹೊಟ್ಟೆ ತುಂಬಿ,,, ಜೇಬೂ ತುಂಬಿದವರು ಸರ್,,
LikeLiked by 1 person
ಜಂಜಾಟದ ಬದುಕಿನ ಚಿತ್ರಣ ಸೊಗಸಾಗಿದೆ.
LikeLiked by 1 person
ಓದುವ ನಿಮ್ಮ ಹಂಬಲಕ್ಕೆ ನಾನು ಋಣಿ
LikeLike
ಪ್ರೀತಿಯನ್ನೆ ಅಪಾರವಾಗಿ ಪ್ರೀತಿಸುವ ನಾನು ಹೃದಯಾಂತರಾಳದಿಂದ ನಿಷ್ಕಲ್ಮಶವಾಗಿ ಬರೆಯುವ, ಬದುಕನ್ನು ಆಳವಾಗಿ ಚಿಂತಿಸಿ ಬರೆಯುವ ನಿಮ್ಮ ಬರಹ ಓದಲು ಇಷ್ಟವಾದ ಬರಹ. ಹೆಚ್ಚು ಹೆಚ್ಚು ಬರೆಯುವ ಶಕ್ತಿ ಆ ಭಗವಂತ ನೀಡಲಿ!
LikeLiked by 1 person
ಖಂಡಿತವಾಗಿಯು ಅಕ್ಕ,,,,,,,,, ಪ್ರೀತಿಯಿಂದಾ ಹಾರೈಸಿದ್ದಕ್ಕೆ ಮೂಖನಾಗಿದ್ದೇನೆ,,,,,,,, ನಿಮ್ಮ ಕನ್ನಡದ ಸ್ಪಷ್ಟತೆ, ಮನಸಿನ ಸ್ಪಷ್ಟತೆಯ ಕನ್ನಡಿಯಂತಿದೆ,,,, ಬರಹದ ಜೊತೆ ಬದುಕು
LikeLiked by 1 person
ಈಗಷ್ಟೆ ಬರಹದ ಜಗತ್ತಿನಲ್ಲಿ ಅದೂ ಈ ಐವತ್ತೆಂಟರ ಬದುಕಿನಲ್ಲಿ ಅಂಬೆಗಾಲಿಕ್ಕುತ್ತಿದ್ದೇನೆ. ನಿಮ್ಮಂಥವರ ಪ್ರೀತಿಯ ಬರಹಗಳನ್ನು ಓದುವ ಅವಕಾಶ ಪಡೆದ ನಾನೆ ಧನ್ಯ ಹೇಳಬೇಕು. ಬದಲಾದ ಈಗಿನ ಬದುಕು ನನಗೆ ಸೊಗಸಾಗಿದೆ.
LikeLiked by 1 person
ಬದಲಾಗುವ ಜಗತ್ತಿಗೆ ಹೊಂದಿಕೊಳ್ಳುವ ಆ ಮನೋಭಾವವೇ ನಿಮ್ಮ ಬದುಕಿನ ಗಟ್ಟಿತನವನ್ನು ತೋರಿಸುತ್ತಿದೆ,,,,,,, ಬರೆಯುತ್ತ-ಬದುಕುತ್ತ ಸದಾ ಹಾರುತ್ತಿರಿ,,,, ಹೊಸ ಬದುಕಿನೆಡೆಗೆ,,,, ಜೊತೆಗೆ ಬದುಕಿಗೆ ಕಾಲಿಡುತ್ತಿರುವ ನಮ್ಮ ಮೇಲೆ ಸರಿ ದಾರಿಯಲ್ಲಿ ನಡೆಸುವ ಕಣ್ಣೊಂದು ಇಟ್ಟಿರಿ 🙂
LikeLiked by 1 person
ಅಯ್ಯೋ ತಮ ಇಷ್ಟು ಚಿಕ್ಕ ವಯಸ್ಸಿಗೇ ಅದೆಷ್ಟು ಅನುಭವ ತಿಳುವಳಿಕೆ ಭಂಡಾರ ಹೊತ್ತು, ಆಳವಾದ ಅಧ್ಯಯನ ನಡೆಸುತ್ತಿದ್ದಿಯಾ. ಖುಷಿ ಆಗುತ್ತದೆ. ಬೆಳೆಯುವ ಸಿರಿ ಮೊಳಕೆಯಲ್ಲಿ. ನಿನ್ನಲ್ಲೆ ಆ ಶಕ್ತಿ ಇದೆ. ಯಾವಾಖಲೂ ಸದುಪಯೋಗಪಡಿಸಿಕೊ. ಶುಭವಾಗಲಿ.
ನನ್ನ ಕಾಲ ಮುಗೀತಾ ಬಂತು. ಆದರು ಇರುವಷ್ಟು ದಿನಗಳಲ್ಲಿ ಹಾರುವ ಹುಮ್ಮನಸ್ಸು. ನಿನ್ನ ಬೆಂಬಲಕ್ಕೆ ಧನ್ಯವಾದಗಳು.(ನೀನೂ ಅನ್ನುವ ಶಬ್ದ ಅರಿವಿಲ್ಲದೆ ಬರೆದೆ, ಅಳಿಸುವ ಮನಸ್ಸಾಗಲಿಲ್ಲ. ಇದೂ ಒಂದು ಆತ್ಮದ ಸಂಬಂಧವಿರಬಹುದೆ. ಎಲ್ಲೊ ಋಣವಿದೆ!)
LikeLiked by 1 person
ಆತ್ಮೀಯತೆಗೆ ಹಾಗು ಹಾರೈಕೆಗೆ ಮೂಕನಾಗಿದ್ದೇನೆ
LikeLiked by 1 person