Skip to content

ಕೋಲನೂರಿ ನಿಂತವಳು, ಕಾಲ ಮೀರಿ ನಡೆದವಳು

ಡಿಸೆಂಬರ್ 1, 2014

ನಿನ್ನೆಯ (30/NOV/2014) “ಉದಯವಾಣಿ” ದಿನಪತ್ರಿಕೆಯಲ್ಲಿ ಪ್ರಕಟವಾದ ನನ್ನದೊಂದು  ಲೇಖನ..

pic1

ಬದುಕಿನಲ್ಲಿ ಇಂತಹ ಕ್ಷಣಗಳಿರುತ್ತವೆ, ಆಗಬಾರದ್ದು ಆಗಿಹೋಗಿರುತ್ತದೆ. ಶಾಶ್ವತ ಊನಕ್ಕೆ ಕಾರಣವಾಗಿರುತ್ತದೆ.
ವ್ಯವಸ್ಥೆಯಿಂದಲೋ, ಇನ್ನೊಬ್ಬರಿಂದಲೋ ಹತ್ತಿರದವರಿಂದಲೋ ದೂರದವರಿಂದಲೋ ನೋವುಂಡ ಕಾರಣಕ್ಕೆ ಜೀವನದ ಬಗ್ಗೆ ನಿರಾಶರಾಗಿ,  ಬದುಕಿಗೆ ವಿದಾಯ ಹೇಳುವವರು ಉಂಟು. ಅಯ್ಯೋ ಹೀಗಾಯಿತೆ, ಇದೆಂತಹ ನನ್ನ ಹಣೆಯ ಬರಹ ಎಂದು ಹಲುಬುತ್ತ, ಅವರಿವರ ಅನುಕಂಪವನ್ನು ಹಾಸಿ ಹೊದ್ದು ಮಲಗುವವರೂ ಉಂಟು.
ಆದರೆ ಬದುಕಿನ ನೋವುನಲಿವುಗಳ ಏರಿಳಿತದಲ್ಲಿ ಈಜಾಡಿಯೂ ಬದುಕನ್ನು ಪ್ರೀತಿಸಿದವರು ಅಪರೂಪ.

ಇಂತಹವರು ಭೊರ್ಗರೆಯುವ ನದಿಯ ಮಧ್ಯದ ಬಂಡೆಯಂತೆ ಗಟ್ಟಿಯಾಗಿ ನಿಂತಿರುತ್ತಾರೆ. ಕೆಲವೊಮ್ಮೆ ಬದುಕೇ ಇವರ ಸಾಹಸ ಮತ್ತು ಇಚ್ಛಾಶಕ್ತಿಗೆ  ಮಣಿದು ಹಾದಿ ತೆರೆಯುತ್ತದೆ. ಇಂತಹ ಅಪರೂಪದ ಕೆಚ್ಚೆದೆಯ ಸಾಧಕಿ ಅರುಣಿಮಾ ಸಿನ್ಹಾ.

ದೈಹಿಕ ಊನಗಳು ಇವರ ಬದುಕಿನ ಸಾಹಸಯಾತ್ರೆಯಲ್ಲಿ ಮಿತಿಯಾಗಲೇ ಇಲ್ಲ. ತಮ್ಮ ಅಂಗವಿಕಲತೆಯನ್ನು ಸವಾಲಿನಂತೆ ಎದುರಿಸಿ ಹೊಸ ಎತ್ತರವನ್ನು ಏರಿದವರು ಅರುಣಿಮಾ. ಹಾಗೆ ಅವರು ಏರಿ ನಿಂತದ್ದು ಎವರೆಸ್ಟ್‌ ಎತ್ತರದಲ್ಲಿ !

ಅರುಣಿಮಾ ಸಿನ್ಹಾ ಹುಟ್ಟಿದ್ದು ಜುಲೈ 20, 1986. ಉತ್ತರಪ್ರದೇಶ ರಾಜ್ಯದ ಲಕ್ನೋ ಬಳಿ ಇರುವ ಅಂಬೇಡ್ಕರ್‌ ನಗರದಲ್ಲಿ. ಅರುಣಿಮಾಳ  ತಂದೆ ಸ್ವರ್ಗಿ ಹರೇಂದ್ರ ಕುಮಾರ ಸಿನ್ಹಾ, ತಾಯಿ ಗ್ಯಾನವಾಲ ಸಿನ್ಹಾ. ಈ ದಂಪತಿಗೆ ಎರಡನೆಯ ಮಗಳಾಗಿ ಹುಟ್ಟಿದ ಅರುಣಿಮಾಳಿಗೆ ಒಬ್ಬ ಅಕ್ಕ ಮತ್ತು ಓರ್ವ ತಮ್ಮ. ಹರೇಂದ್ರ ಕುಮಾರ ಸಿನ್ಹಾ ಅವರು ಭಾರತೀಯ ಸೈನ್ಯದಲ್ಲಿ ಸೈನಿಕರಾಗಿ ದುಡಿಯುತ್ತಿದ್ದರು.

ಬಾಲ್ಯದಿಂದಲೇ ಅರುಣಿಮಾಳ ಆಸಕ್ತಿ ಕ್ರೀಡೆಯತ್ತ ಹೊರಳಿತ್ತು. ಪುಟ್ಟ ಹುಡುಗಿಯ ಕ್ರೀಡಾ ಹುಮ್ಮಸ್ಸನ್ನು ತಂದೆ ಪ್ರೋತ್ಸಾಹಿಸಿದರು.  ಕೆಲವೊಮ್ಮೆ ಓಟದಲ್ಲಿ ತನ್ನ ಓರಗೆಯ ಗಂಡು ಹುಡುಗರನ್ನು ಈಕೆ ಸೋಲಿಸುತ್ತಿದ್ದುದು ವಿಶೇಷವಿತ್ತು.  ಅರುಣಿಮಾಳ ಕುಟುಂಬದ ಆರ್ಥಿಕ ಪರಿಸ್ಥಿತಿ ಅಷ್ಟೇನೂ ಉತ್ತಮವಾಗಿರಲಿಲ್ಲ. ಅದೊಂದು ಅರುಣಿಮಾಗೆ ಮಿತಿಯಾಗಲಿಲ್ಲ. ಶಾಲ ಮಟ್ಟದಲ್ಲಿಯೇ ಅರುಣಿಮಾಗೆ ಅನೇಕ ಪ್ರಶಸ್ತಿ ಬಹುಮಾನಗಳು ದೊರೆತವು. ಕಾಲೇಜು ಹಂತದಲ್ಲಿ ಅರುಣಿಮಾ ಹೆಚ್ಚಿನ ಕ್ರೀಡಾಭ್ಯಾಸಕ್ಕೆ ತನ್ನನ್ನು ತೊಡಗಿಸಿಕೊಂಡ ಪರಿಶ್ರಮದ ಫ‌ಲವಾಗಿ ರಾಷ್ಟ್ರಮಟ್ಟದ ಫ‌ುಟ್ಬಾಲ್‌ ಪಂದ್ಯಕ್ಕೆ ಆಯ್ಕೆ ಆದಳು. ಎಲ್ಲಿಲ್ಲದ ಉತ್ಸಾಹ, ಹುಮ್ಮಸ್ಸು, ಕಠಿಣ ದೈಹಿಕ ಕಸರತ್ತು, ಮಾನಸಿಕ ದೃಢತೆಯನ್ನು ಮೈಗೂಡಿಸಿಕೊಂಡು ಕಾಲ್ಚೆಂಡಿನ ಆಟದ ತಂತ್ರಗಳನ್ನೆÇÉಾ ಸಂಪೂರ್ಣವಾಗಿ ಮೈಗೂಡಿಸಿಕೊಂಡು ಬೆಳೆದಳು.

ಕಾಲ್ಚೆಂಡು ಆಟದಲ್ಲಿ ನುರಿತ ಪಟುವಾಗಿ, ಕ್ರೀಡೆಯ ತಂತ್ರವನ್ನು ಅತ್ಯಂತ ಆಸಕ್ತಿಯಿಂದ ಅಭ್ಯಾಸ ಮಾಡಿದ ಅರುಣಿಮಾ, ರಾಷ್ಟ್ರಮಟ್ಟದ ಫ‌ುಟ್ಬಾಲ್‌ ಪಂದ್ಯದಲ್ಲಿ ರೋಚಕವಾಗಿ ಆಡಿದಳು. ಮಿಂಚಿನ ಓಟದ ಕಾಲ್ಚೆಂಡಿನ ಆಟ ಆಕೆಗೆ ಅಭಿನಂದನೆಗಳ ಸುರಿಮಳೆಯನ್ನು ತಂದಿತ್ತು. ಅದರೊಡನೆ ಕೊಂಕು ನುಡಿಗಳಿಗೂ ಸಿದ್ಧವಿರಬೇಕಿತ್ತು. ಹೆಣ್ಣುಮಗು ಆಟದ ಬಯಲಿನಲ್ಲಿ ಟ್ರಾಕ್‌ ಸೂಟ್‌ ಬದಲಿಸುವಾಗ, ಕಿತ್ತು ತಿನ್ನುವ ವಕ್ರನೋಟದ ಕಣ್ಣುಗಳಿದ್ದವು. ಬೆಳೆದ ಹೆಣ್ಣುಮಕ್ಕಳಿಗೆಂಥ ಕಾಲು ಚೆಂಡಿನ ಆಟ ಎಂಬ ಸಮಾಜದ ಕೊಂಕು ಮಾತುಗಳಿದ್ದವು.
ಅರುಣಿಮಾ ಇವುಗಳತ್ತ ತನ್ನ ಗಮನ ಕೊಡದೆ ತನ್ನ ತಾಲೀಮಿನತ್ತ ದೇಹ ಮತ್ತು ಮನಸ್ಸುಗಳನ್ನು ಕೇಂದ್ರೀಕರಿಸಿದಳು. ಇದರ ಫ‌ಲವಾಗಿ ಮತ್ತೂಮ್ಮೆ ಅರುಣಿಮಾ, ರಾಷ್ಟ್ರಮಟ್ಟದ ವಾಲಿಬಾಲ್‌ ತಂಡಕ್ಕೆ ಆಯ್ಕೆಯಾದಳು. ಅಲ್ಲಿಯೂ ಆಕೆಯ ಮಿಂಚಿನ ಆಟಕ್ಕೆ ಮನಸೋಲದವರು ಇರಲಿಲ್ಲ. ರಾಷ್ಟ್ರ ಮಟ್ಟದ ವಾಲಿಬಾಲ್‌ ಮತ್ತು ಫ‌ುಟ್ಬಾಲ್‌ ಎರಡೂ ತಂಡಗಳಲ್ಲಿ ಆಡಿ ತನ್ನ ಪ್ರತಿಭೆಯನ್ನು ದೇಶಕ್ಕೆ ಪರಿಚಯಿಸಿದಳು.

ಬಾಲ್ಯ ಕಳೆದು ಪ್ರೌಢಳಾಗಿ ಬೆಳೆದ ಅರುಣಿಮಾ ಸ್ನಾತ್ತಕೋತ್ತರ ಪದವಿ ಪಡೆದಳು. ಉದ್ಯೋಗದ ಹುಡುಕಾಟಕ್ಕೆ ಅರುಣಿಮಾ ತೊಡಗಿದಳು. ಆಗಲೇ ಆಕೆಗೆ ಸಿ.ಐ.ಎಸ್‌.ಎಫ್.ನಲ್ಲಿ ಉದ್ಯೋಗದ ಅವಕಾಶವಿರುವ ಬಗ್ಗೆ ಮಾಹಿತಿ ದೊರೆಯಿತು. ಕೂಡಲೇ ಕೆಲಸಕ್ಕೆ  ಅರ್ಜಿ ಹಾಕಿದಳು. ಅಲ್ಲಿಂದ ಪ್ರವೇಶ ಪರೀಕ್ಷೆಗೆ ಆಹ್ವಾನ ಪತ್ರ ಬಂದಿತು. ಖುಷಿಯಿಂದ ಅರುಣಿಮಾ ಪರೀಕ್ಷೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡು ತಯಾರಾದಳು. ಪ್ರವೇಶ ಪರೀಕ್ಷೆ ಸ್ಥಳ ದೆಹಲಿಯಲ್ಲಿರುವ ಗೌತಮಬುದ್ಧನಗರ ಎಂಬಲ್ಲಿತ್ತು.  ಲಕ್ನೋದಿಂದ ದೆಹಲಿಗೆ 500 ಕಿ.ಮೀ.ಗಿಂತಲೂ ಹೆಚ್ಚಿನ ಅಂತರ. ರೈಲಿನಲ್ಲಿ ಹೆಚ್ಚು ಕಡಿಮೆ 8 ರಿಂದ 9 ಗಂಟೆಗಳ ಪ್ರಯಾಣ. ಉದ್ಯೋಗ ಆಕೆಯ ಅಗತ್ಯವಾಗಿತ್ತು.

ಪ್ರಯಾಣಕ್ಕೆ ಸಿದ್ಧವಾದಳು.

ಆ ದಿನ ಏಪ್ರಿಲ್‌ 11, 2011ರ ರಾತ್ರಿ ಅರುಣಿಮಾ ಪದ್ಮಾವತಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ದೆಹಲಿಗೆ ಹೊರಟಳು. ಪರೀಕ್ಷೆಯ ಸಕಲ ಸಿದ್ಧತೆಗಳೊಂದಿಗೆ ತನ್ನೆಲ್ಲ ಅಂಕಪಟ್ಟಿ ಹಾಗೂ ಇತರ ದಾಖಲೆಪತ್ರಗಳನ್ನು ಜೋಪಾನವಾಗಿ ಇಟ್ಟುಕೊಂಡು ಜಾಗರೂಕವಾಗಿ ಪ್ರಯಾಣಕ್ಕೆ ಹೊರಟಿದ್ದಳು.

ಪಯಣ ಆರಂಭವಾಯಿತು…

ರೈಲು ಲಕ್ನೋ ಬಿಟ್ಟು ಹೊರಟಿತು. ಇರುಳ ಆಳದಲ್ಲಿ ಘೀಳಿಟ್ಟು ಹೊರಟ ರೈಲಿನ ವೇಗವು ಹೆಚ್ಚುತ್ತ ಹೊರಟಿತ್ತು. ಮಧ್ಯರಾತ್ರಿಯ ಸಮಯ, ರೈಲು ಬರೇಲಿ ಬಳಿ ಸಾಗಿತ್ತು. ಪ್ರಯಾಣಿಕರೆಲ್ಲ ಗಾಢನಿದ್ರೆಯಲ್ಲಿ ಮುಳುಗಿದ್ದರು. ಆಗಲೇ ಎಲ್ಲಿಂದಲೋ ಚೀರುವ ಧ್ವನಿ ಅರುಣಿಮಾಗೆ ಕೇಳಿಸಿತು. ಅರುಣಿಮಾ ಕಣ್ಣು ಬಿಟ್ಟು ನೋಡುವಷ್ಟರಲ್ಲಿ ಚೀರಾಟ ಹೆಚ್ಚಾಗಿತ್ತು. ರೈಲಿನ ಬೋಗಿಯಲ್ಲಿ ಸರಗಳ್ಳತನ ಮಾಡುವ ಖದೀಮರ ಗುಂಪೊಂದು ಎಲ್ಲರ ಕೊರಳು ಕಿವಿ ಮೂಗಿಗೆ ಕೈ ಹಾಕಿ, ಅತ್ಯಂತ ಕ್ರೂರವಾಗಿ ಚಿನ್ನದ ಆಭರಣಗಳನ್ನು ಅಪಹರಿಸುತ್ತಿದೆ! ಆಯುಧವಿದ್ದ ಆ ದರೋಡೆಕೋರರು ಏನು ಮಾಡಲೂ ಹೇಸರು ಎಂದು ಹೆದರಿದ ಪ್ರಯಾಣಿಕರು ತಮ್ಮ ಆಭರಣಗಳನ್ನು ನೀಡಿ ಭಯಭೀತರಾಗಿ ಚೀರಿಡುತ್ತಿ¨ªಾರೆ.

ಅದೇ ಸಮಯಕ್ಕೆ ದರೋಡೆಕೋರನೊಬ್ಬ ಅರುಣಿಮಾಳ ಸರಕ್ಕೆ ಕೈ ಹಾಕಲು ಬಂದ. ಬಿಸಿರಕ್ತದ ದಿಟ್ಟ ತರುಣಿಗೆ ಅಸಾಧ್ಯದ ಆಕ್ರೋಶ. ಕೋಪಗೊಂಡ ಅರುಣಿಮಾ ಅವನ ಕೈಯನ್ನು ರಭಸದಿಂದ ದೂರ ಸರಿಸುತ್ತಾಳೆ. ಆತ ಇನ್ನೊಂದು ಕೈಯಲ್ಲಿ ಸರವನ್ನು ಕೀಳಲು ಮುಂದಾಗುತ್ತಾನೆ. ಆ ಕೈಯನ್ನೂ ಬಿರುಸಾಗಿ ದೂಡುತ್ತಾಳೆ. ಕ್ರೋಧ‌ಗೊಂಡ ಆತ ಉಳಿದವರನ್ನು ಕರೆದು ಆಕೆಯನ್ನು ಬಿಗಿದು ಹಿಡಿಯುವಂತೆ ಹೇಳುತ್ತಾನೆ. ಎಲ್ಲರು ಏಕಕಾಲದಲ್ಲಿ ಪುಟ್ಟ ದೇಹದ ಮೇಲೆ ಮುಗಿಬೀಳುತ್ತಾರೆ. ಆದರೆ ಆಕೆಯ ಪ್ರತಿಭಟನೆ ಮಾತ್ರ ನಿಲ್ಲುವುದಿಲ್ಲ. ಅಷ್ಟರಲ್ಲಿಯೇ ಆಕೆಯ ಕುತ್ತಿಗೆಯ ಮೇಲೆ ಬಲವಾದ ಹೊಡೆತ ಬೀಳುತ್ತದೆ. ಖದೀಮನೊಬ್ಬ ರಭಸದಿಂದ ಎತ್ತಿ ಹೊಡೆದಿದ್ದ.  ಕುತ್ತಿಗೆಯೇ ಚೂರಾದ ಅನುಭವ. ಮೆದುಳು ಕ್ಷಣಕಾಲ ಕೆಲಸ ಮಾಡುವುದನ್ನೆ ನಿಲ್ಲಿಸಿದಂತೆ ಕ್ಷಣ ಭಾಸವಾದರೂ, ಛಲಬಿಡದೆ ಅರುಣಿಮಾ ಜಗ್ಗಾಡುತ್ತಾಳೆ. ಈಗ ಮೂವರೂ ದರೋಡೆಕೋರರು ಆಕೆಯನ್ನು ಧರಧರನೆ ಎಳೆದು ಬಾಗಿಲ ಬಳಿ ಕೊಂಡೊÂಯುತ್ತಾರೆ. ಅವರಿಂದ ಬಿಡಿಸಿಕೊಳ್ಳುವ ಶತಪ್ರಯತ್ನ ಮಾಡುತ್ತಿ¨ªಾಳೆ. ಸಹಾಯಕ್ಕೆ ಯಾರೂ ಮುಂದಾಗಿಲ್ಲ. ಹೆದರಿ ಮುದುಡಿದ ಜನ. ಒಂಟಿ ಹೆಣ್ಣಿನ ಹೋರಾಟ.
ಯಾರು ಕೂಡಾ ರೈಲಿನ ಚೈನ್‌ ಎಳೆದು ನಿಲ್ಲಿಸುವ ಪ್ರಯತ್ನಕ್ಕೂ ಕೈ ಹಾಕುವುದಿಲ್ಲ. ರೈಲು ಅತಿ ವೇಗದಲ್ಲಿ ಸಾಗುತ್ತಿದೆ. ಆಕೆಯನ್ನು ಸುತ್ತುವರೆದು ಹಿಡಿದು ನಿಂತ ದರೋಡೆಕೋರರು ಆಕೆಯ ಸರವನ್ನು ಕಿತ್ತುಕೊಂಡು ಆಕೆಯನ್ನು ಎತ್ತಿ ಚಲಿಸುವ ರೈಲಿನಿಂದ ಹೊರಗೆ ಎಸೆದುಬಿಡುತ್ತಾರೆ. ಉಳಿದ ಎಲ್ಲರೂ  ದಿಗಾ½$›ಂತರಾಗಿ ನೋಡುತ್ತಿ¨ªಾರೆ. ಯಾರೊಬ್ಬರೂ ಪ್ರತಿಭಟಿಸುವ ಧೈರ್ಯ ಮಾಡುವುದಿಲ್ಲ.

ರಭಸದಿಂದ ಸಾಗುತ್ತಿದ್ದ ರೈಲಿನಿಂದ ಹೊರಗೆ ಎಸೆಯಲ್ಪಟ್ಟ ಅರುಣಿಮಾಳ ದೇಹ ನುಚ್ಚು ನೂರಾಗಿದೆ. ಮೊದಲೇ ಕುತ್ತಿಗೆಗೆ ಬಲವಾದ ಹೊಡೆತ ಬಿದ್ದಿತ್ತು. ಈಗಂತೂ  ಆಕೆಯ ಬೆನ್ನುಮೂಳೆ ಸಂಪೂರ್ಣವಾಗಿ ಮುರಿದು, ನುಜ್ಜುಗುಜಾjಯಿತು. ಅದಲ್ಲದೆ ಆಕೆ ಎಸೆದು ಬಿದ್ದದ್ದು ಚಲಿಸುವ ರೈಲಿನ ಪಕ್ಕದಲ್ಲಿಯೇ ಹಾದು ಹೋಗುವ ಇನ್ನೊಂದು ರೈಲಿನ ಹಳಿಯ ಮೇಲೆ. ಬಿದ್ದ ಕ್ಷಣವೇ ಜ್ಞಾನ ತಪ್ಪಿಹೋಗಿತ್ತು.  ಬಲಗಾಲಿಗೆ ಅತಿಯಾದ ಪೆಟ್ಟಾಗಿತ್ತು. ಅತ್ಯಂತ ದುರಂತದ ಘಟನೆಯೆಂದರೆ, ಆಕೆಯ ಎಡಗಾಲಿನ ಒಂದು ಭಾಗ‌ ಹಳಿಯ ಮೇಲೆ ಬಿದ್ದಿತ್ತು.
ಅದೇ ಸಮಯಕ್ಕೆ ಆ ಹಳಿಯ ಮೇಲೆ ಹಾದು ಹೋದ ಇನ್ನೊಂದು ರೈಲು, ಆಕೆಯ ಎಡಗಾಲನ್ನು ಕತ್ತರಿಸಿ ನುಜ್ಜುಗುಜಾjಗಿಸಿತು. ಪ್ರಜ್ಞೆಯಿಲ್ಲದೆ ಬಿದ್ದ ಅರುಣಿಮಾಳ ದೇಹದಿಂದ ರಕ್ತ ಸುರಿದು ಹರಿದಿದೆ. ಆ ಕರಾಳ ರಾತ್ರಿ ಆಕೆಯ ಎಡಗಾಲಿನ ಮೇಲೆ ನಲವತ್ತಕ್ಕೂ ಹೆಚ್ಚು ರೈಲುಗಳು ಹಾದು ಹೋದವು!

ಕೇವಲ ಒಂದು ಗಂಟೆಯ ಹಿಂದೆ, ಭವ್ಯ ಭವಿಷ್ಯದ ನೂರು ಕನಸನ್ನು ಹೊತ್ತು ದೆಹಲಿಗೆ ಹೊರಟ ರಾಷ್ಟ್ರಮಟ್ಟದ ಆಟಗಾರ್ತಿ ರೈಲು ಹಳಿಗಳ ನಡುವೆ ಕಾಲು ಕಳೆದುಕೊಂಡು ಬದುಕುವ ಭರವಸೆ ಇಲ್ಲದೆ ನಜ್ಜುಗುಜ್ಜಾದ ದೇಹದಲ್ಲಿ ಬಿದ್ದಿದ್ದಳು.

ಸುಮಾರು ಏಳು ಗಂಟೆಗಳ ಕಾಲ ಚೈತನ್ಯವಿಲ್ಲದೆಯೇ ಬಿದ್ದುಕೊಂಡಿದ್ದ ಅರುಣಿಮಾಳ ದೇಹವನ್ನು ಯಾರೂ ಕಂಡಂತಿರಲಿಲ್ಲ. ದೇಹದ ಬಹುಪಾಲು ರಕ್ತ ಬಸಿದುಹೋಗಿತ್ತು. ಮುಂಜಾವಿನ ಮಬ್ಬು ಬೆಳಕಲ್ಲಿ ಅತ್ತ ಹಾದು ಬಂದ ಸಿಂಧು ಕಶ್ಯಪ್‌ ಲಾಲ್‌ ಎನ್ನುವ ವ್ಯಕ್ತಿ ಆಕೆಯ ದೇಹವನ್ನು ನೋಡಿದರು. ಹತ್ತಿರ ಬಂದು ಆಕೆಯ ಸ್ಥಿತಿ ನೋಡಿದ ಆತನಿಗೆ ಮೂಛೆì ಹೋಗುವಂತಾಗಿತ್ತು. ಸಾವರಿಸಿಕೊಂಡು ಆಕೆ ಬದುಕಿ¨ªಾಳ್ಳೋ ಇಲ್ಲವೋ ಎಂದು ದೂರದಿಂದಲೇ ಪರೀಕ್ಷಿಸಿ ನೋಡಿದರು. ಮೆಲು ಉಸಿರಾಟದ ಏರಿಳಿತವನ್ನು ಗಮನಿಸಿ ಕೂಡಲೇ ಸ್ಥಳೀಯರನ್ನು ಕರೆದು, ಅವರ ಸಹಾಯದಿಂದ  ಆಕೆಯನ್ನು ಬರೇಲಿಯಾ ಜಿÇÉಾಸ್ಪತ್ರೆಗೆ ಕೊಂಡೊಯ್ದರು.

ಬರೇಲಿಯ ಜಿÇÉಾಸ್ಪತ್ರೆಯಲ್ಲಿ ಆಧುನಿಕ ವೈದ್ಯ ಸಲಕರಣೆಗಳು ಇÇÉಾವಾದ್ದರಿಂದ ಬರಿಯ ಪ್ರಥಮ ಚಿಕಿತ್ಸೆಯನ್ನು ಮಾತ್ರ ನೀಡಿ ಲಕ್ನೋದಲ್ಲಿರುವ ಕಿಂಗ್‌ ಛಾರ್ಜ್‌ ಮೆಡಿಕಲ್‌ ಆಸ್ಪತ್ರೆಗೆ ಅರುಣಿಮಾಳನ್ನು  ಸ್ಥಳಾಂತರಿಸಲಾಯಿತು.

ಅಲ್ಲಿಯವರೆಗೂ ಆಕೆಯ ಜೀವ ಉಳಿದ¨ªಾದರೂ ಹೇಗೆ ಎಂಬುದೇ ಅಚ್ಚರಿಯ ಪ್ರಶ್ನೆಯಾಗಿತ್ತು. ಆಕೆಯ ಸ್ಥಿತಿಯನ್ನು ಕಂಡು ವೈದ್ಯರೇ ಹೌಹಾರಿ ಹೋದರು.  ಕೂಡಲೆ ಶುಶ್ರೂಷೆ ಪ್ರಾರಂಭಿಸಿದ ಕಿಂಗ್‌ ಚಾರ್ಜ್‌ ಆಸ್ಪತ್ರೆಯ ವೈದ್ಯರು ಆಕೆಯ ಎಡಗಾಲು ಜಜ್ಜಿ ಹೋದ ಪರಿಯನ್ನು ಪರಿಗಣಿಸಿ ಎಡಗಾಲನ್ನು ಮಂಡಿಯ ಕೆಳಗೆ ಸಂಪೂರ್ಣವಾಗಿ ಕತ್ತರಿಸಿದರು. ಬಲಗಾಲಿನ ಮೂಳೆಗೂ ಅತಿಯಾದ ಹೊಡೆತ ಬಿದ್ದಿದ್ದರೂ ಅದು ಉಳಿದಿತ್ತು. ಪೆಲ್ವಿಕ್‌ ಮೂಳೆಗೆ, ಬೆನ್ನು ಮೂಳೆಗೆ, ಕುತ್ತಿಗೆ ಭಾಗದ ಮೂಳೆಗಳಿಗೆ, ತಲೆಯ ಬುರುಡೆಗೆ ಅತಿಯಾದ ಪೆಟ್ಟಾಗಿತ್ತು.
ಜೊತೆಗೆ ಮೈ ಕೈ ಮೇಲೆಲ್ಲ ತರಚಿದ ಗಾಯಗಳು. ಆಕೆಯನ್ನು ಪರೀಕ್ಷಿ ಸುತ್ತ ಹೋದಂತೆ ಅಲ್ಲಿನ ವೈದ್ಯರು ದಂಗಾಗಿ ನುಡಿದಿದ್ದರು, ಇಷ್ಟರಮಟ್ಟಿಗೆ ಜರ್ಝರಿತವಾದ ದೇಹದಲ್ಲಿ ಜೀವ ಉಳಿದ ನಿದರ್ಶನಗಳೇ ಕಡಿಮೆ.
ಅರುಣಿಮಾ ಇನ್ನೂ ಜೀವಂತವಾಗಿ¨ªಾಳೆ ಎಂಬುದೇ ಸೋಜಿಗ. ಈಕೆ ಬದುಕಿ ಉಳಿಯುವ ಸಾಧ್ಯತೆ ಅತಿ ಕಡಮೆ ಇದೆ, ಕಾದು ನೋಡೋಣ ಎಂದು ಯಾವ ಭರವಸೆಯನ್ನೂ ನೀಡದೆ ಹೇಳಿದ್ದರು.

ಶಸ್ತ್ರಚಿಕಿತ್ಸೆ ನಡೆದ ಹಲವು ಗಂಟೆಗಳ ನಂತರ ಅರುಣಿಮಾಳಿಗೆ ಪ್ರಜ್ಞೆ ಬಂದಿತು. ಆಗಲೇ ಆಕೆಗೆ ಅರಿವಾಗುವುದು ತನ್ನ ಎಡಗಾಲನ್ನು ಕತ್ತರಿಸಲಾಗಿದೆ ಎಂದು. ತನ್ನ ಓಟದ ಕಾಲು, ಸತತ ಅಭ್ಯಾಸದಲ್ಲಿ, ಪ್ರಯತ್ನದಲ್ಲಿ, ಪ್ರಯಾಸದಲ್ಲಿ ಸದೃಢಗೊಳಿಸಿದ ಕ್ರೀಡಾಪಟುವಿನ ಕಾಲು, ಕಾಲ್ಚೆಂಡಿನಾಟದಲ್ಲಿ ಶರವೇಗದಲ್ಲಿ ಓಡಿ ಚಿಮ್ಮುತ್ತಿದ್ದ ಕಾಲು ಕಡಿದು ಹೋಗಿತ್ತು. ಅದರೊಡನೆ ಆ ಕ್ಷಣ ಅವಳೆಲ್ಲ ಭವಿಷ್ಯದ ಕನಸುಗಳೂ ಕತ್ತರಿಸಿದಂತೆ ಕಂಡಿತ್ತು. ಅಗಾಧ ನೋವಿನಲ್ಲಿ, ಆಘಾತದಲ್ಲಿ ಆಸ್ಪತ್ರೆಯ ಹಾಸಿಗೆಯಲ್ಲಿ, ಸಾವಿನಂಚಿನಲ್ಲಿ ದಿನಗಳು ಕಳೆದವು.
ಇಷ್ಟರÇÉಾಗಲೇ ಅರುಣಿಮಾಳ ಸ್ಥಿತಿ ದೇಶದ ಉದ್ದಗಲದಲ್ಲಿ ಸುದ್ದಿಯಾಗಿತ್ತು. ದಿನಪತ್ರಿಕೆಗಳು, ದೂರದರ್ಶನ
ವಾಹಿನಿಗಳು ಅರುಣಿಮಾಳಿಗಾದ ಅನ್ಯಾಯವನ್ನು, ಅಪಘಾತ ಖಂಡಿಸಿ ಸುದ್ದಿ ಬಿತ್ತರಿಸುತ್ತವೆ. ಆದರೆ ರೈಲು ಇಲಾಖೆಯ ಅಧಿಕಾರಿಗಳು ಮಾತ್ರ ಯಾವ ಪ್ರತಿಕ್ರಿಯೆ ವ್ಯಕ್ತ ಪಡಿಸದೆ ಕಣ್ಮುಂಚಿ ಕುಳಿತಿ¨ªಾರೆ. ಮಾಧ್ಯಮಗಳು ಹಿಡಿದು ಕೇಳಿದಾಗ, ರೈಲ್ವೆ ಅಧಿಕಾರಿ ಕೊಟ್ಟ ಉತ್ತರ ಮೈ ಉರಿಯುವಂತಿತ್ತು.  ಆತ ಹೇಳುತ್ತಾನೆ, ಅರುಣಿಮಾ ಎಂಬ ವ್ಯಕ್ತಿ ರಾಷ್ಟ್ರ ಮಟ್ಟದ ಕ್ರೀಡಾಪಟು ಅಲ್ಲವೇ ಅಲ್ಲ.  ಆಕೆ ರಾಜ್ಯಮಟ್ಟದ ಕ್ರೀಡಾಪಟು ಎಂಬುದೂ ಕೂಡಾ ಅನುಮಾನ. ಅದಲ್ಲದೆ ಆಕೆಗೆ ಆದುದು ಅಪಘಾತ ಅಲ್ಲ, ಆಕೆಯೇ ಸ್ವತಃ ಆತ್ಮಹತ್ಯೆಗೆ ಪ್ರಯತ್ನಿಸಿ¨ªಾಳೆ. ಹಾಗಾಗಿ ಇದರಲ್ಲಿ ನ‌ಮ್ಮ ಪಾತ್ರ ಏನೂ ಇಲ್ಲವೆಂದು ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡು ಬಿಡುತ್ತಾನೆ. ಇತ್ತ ರಾಜ್ಯ ಸರ್ಕಾರವೂ ಯಾವುದೇ ರೀತಿಯ ಸಹಾಯಕ್ಕೆ ಮುಂದಾಗುವುದಿಲ್ಲ.

ಕ್ರೀಡೆಯನ್ನೇ ತನ್ನ ಬದುಕಾಗಿಸಿಕೊಂಡು ಹೊರಟಿದ್ದ ಅರುಣಿಮಾ ಆಸ್ಪತ್ರೆಯಲ್ಲಿ ಕಾಲು ಮುರಿದುಕೊಂಡು ಒರಗಿದ ಈ ಸಮಯ ಅತ್ಯಂತ ಕಷ್ಟ¨ªಾಗಿತ್ತು. ಆಕೆಯನ್ನು ನೋಡಲು ಬರುವ ಜನರ ಕರುಣಾಜನಕ ದೃಷ್ಟಿಯಂತೂ ಅರುಣಿಮಾಳನ್ನು  ಸಂಪೂರ್ಣವಾಗಿ ಕೊಂದು ಬಿಡುತ್ತಿತ್ತು. “ಅಯ್ಯೋ ಪಾಪ ಕಾಲೇ ಹೋಯಿತು, ಇನ್ನೇನು ಜೀವನ ಮಾಡಲು ಸಾಧ್ಯ?  ಛೆ ! ಛೆ! ಹೀಗಾಗಬಾರದಿತ್ತು’ ಎಂಬೆಲ್ಲ ಉಪಯೋಗವಿಲ್ಲದ ಅನುಕಂಪದ ಮಾತುಗಳನ್ನು ಎಸೆದು ಹೋಗುತ್ತಿದ್ದರು. ಜನರ ವಕ್ರ ನೋಟದಲ್ಲಿ, ಅರುಣಿಮಾಳ ಮನಸ್ಸು ಚಿತ್ರಹಿಂಸೆ ಅನುಭವಿಸುತ್ತಿತ್ತು.

ಲಕ್ನೋ ನಗರದ ಕಿಂಗ್‌ ಜಾರ್ಜ್‌ ಮೆಡಿಕಲ್‌ ಕಾಲೇಜಿನ ಆಸ್ಪತ್ರೆಯಲ್ಲಿ ಮೊದಲ ಶಸ್ತ್ರಕ್ರಿಯೆ ನಡೆದು ಆಕೆಯ ಎಡಗಾಲನ್ನು ಮೊಣಕಾಲಿನವರೆಗೂ  ಕತ್ತರಿಸಿದ್ದರು. ಆದರೆ ಗಾಯಕ್ಕೆ ಸೋಂಕು ತಾಗಿ ರಣರಂಪವಾಗಿ ಆಕೆಯನ್ನು ದಿಲ್ಲಿಯ “ಆಲ್‌ ಇಂಡಿಯಾ ಇನ್‌ಸ್ಟಿಟ್ಯೂಟ್‌ ಆಫ್ ಮೆಡಿಕಲ್‌ ಸಯನ್ಸ್‌ ಆಸ್ಪತ್ರೆ’ಯ ಟ್ರಾಮಾ ಸೆಂಟರ್‌ಗೆ ತುರ್ತಾಗಿ ರವಾನಿಸಬೇಕಾಯಿತು. ಇಲ್ಲಿ ಎರಡನೇ ಶಸ್ತ್ರಕ್ರಿಯೆ ನಡೆಯಿತು.

ಅರುಣಿಮಾ ಅಗಾಧ ನೋವಿನಲ್ಲಿ ಮುಳುಗಿದ್ದಳು ನಿಜ, ಆದರೆ ಯಾವ ಕ್ಷಣಕ್ಕೂ ಸಾವು ದಾರಿಯೆಂದು ಆಕೆ ನಿರ್ಧರಿಸಿರಲಿಲ್ಲ. ಬದಲಿಗೆ ಮತ್ತೆ ಬದುಕಿನತ್ತ ಮುಖಮಾಡಿ ದಾಪುಗಾಲು ಇಡುವ ಯೋಚನೆಗಳು ಅವಳದಾಗಿತ್ತು. ಬಹಳಷ್ಟು ರೋಗಿಗಳು ತಮ್ಮ ವಿಧಿಗೆ ಸೋತು ಮಲಗಿದ್ದಲ್ಲಿಯೇ ಮಲಗಿರುವಾಗ, ಅರುಣಿಮಾ ಬಿಡದ ಹಟದಲ್ಲಿ, ಕೃತಕ ಕಾಲಿನಲ್ಲಿ  ಗೋಡೆ ಹಿಡಿದು ನಡೆಯುವ ಸಾಹಸಕ್ಕೆ ಕೈ ಹಾಕಿದಳು.

ಅರುಣಿಮಾ ಗಾಢವಾಗಿ ಆಲೋಚಿಸಿದಳು. ತಾನು ವಿಶೇಷವಾದುದನ್ನೇನಾದರೂ ಸಾಧಿಸದೆ ಹೋದರೆ, ಕೊನೆಯವರೆಗೂ ಅಂಗವಿಕಲೆ ಎನ್ನುವ ಹಣೆಪಟ್ಟಿಯೊಂದಿಗೆ ಬದುಕಬೇಕಾಗುತ್ತದೆ ಎಂದು ಆಕೆಗೆ ಮನದಟ್ಟಾಗಿತ್ತು. ಬಹಳಷ್ಟು ಯೋಚಿಸಿ ನಿರ್ಧಾರಕ್ಕೆ ಬಂದಳು. ಭಾವನನ್ನು ಕರೆದು ಹೇಳಿದಳು, “ಭಯ್ನಾ, ನಾನು  ಎವರೆಸ್ಟ್‌  ಹತ್ತುತ್ತೇನೆ’.

ಆಕೆಯ ಇಚ್ಛೆಯನ್ನು ಕೇಳಿದ ಓಂ ಪ್ರಕಾಶ್‌ ಸಿನ್ಹಾರಿಗೆ ದಿಗ½$›ಮೆಯಾಗುತ್ತದೆ. ಆದರೆ ಜೊತೆಗೆ ಖುುಷಿಯೂ ಸೇರಿತ್ತು. ಅದೇ ದಿನ ಮುಂಜಾನೆ ದಿನ ಪತ್ರಿಕೆ ಓದುವಾಗ ಓಂ ಪ್ರಕಾಶ್‌ ಕೂಡಾ ಇಂತಹ ಸಾಹಸವನ್ನೇ ಯೋಚಿಸಿದ್ದರು. ಅರುಣಿಮಾಳ ಇಚ್ಛಾಶಕ್ತಿಯ ಬಗ್ಗೆ ಅವರಿಗೆ ಭರವಸೆ ಇತ್ತು. ಭಾವನ ಪ್ರೋತ್ಸಾಹ ಅರುಣಿಮಾಗೆ ಉತ್ಸಾಹ ನೀಡುತ್ತದೆ. ಮತ್ಯಾರೇ ಸಾಮಾನ್ಯರು ಅರುಣಿಮಾ ಇದ್ದ ಸ್ಥಿತಿಯಲ್ಲಿ ಎವರೆಸ್ಟ್‌ ಹತ್ತುವೆ ಎಂದದ್ದು ಕೇಳಿದ್ದರೆ ನಕ್ಕು ಬಿಡುತ್ತಿದ್ದರು.

untitled

ಬಲಗಾಲಿನ ಪೆಟ್ಟಾದ ಮೂಳೆಗೆ ಕೃತಕ ಆಸರೆಯನ್ನು ನೀಡಲು ಕಂಬಿ ಬಳಸಲಾಯಿತು. ಅದಾಗಲೆ ಯಾರ ಸಹಾಯವು ಇಲ್ಲದೆ ಎದ್ದು ಕುಳಿತುಕೊಳ್ಳಲು ಆರಂಭಿಸಿದ ಅರುಣಿಮಾ, ಕೃತಕ ಕಾಲಿನಲ್ಲಿ ನಡೆಯಲು ಪ್ರಾರ‌ಂಭಿಸಿದಳು. ಮತ್ತೆ ಮಗುವಾಗಿ, ಒಂದೊಂದೇ ಹೆಜ್ಜೆ ಇಟ್ಟು ನಡೆಯಲು ಹೊರಟ ಅರುಣಿಮಾಳ ಎದುರು ಎವರೆಸ್ಟ್‌ನ ಎತ್ತರದ ಗುರಿ ಕೈ ಬೀಸಿ ಕರೆಯುತ್ತಿತ್ತು.

ತಾನೊಬ್ಬ ರಾಷ್ಟ್ರ ಮಟ್ಟದ ಕ್ರೀಡಾಪಟುವಾದರೂ, ತನ್ನ ಬಗ್ಗೆ ಹಗುರವಾಗಿ ಮಾತನಾಡಿದ ಅಧಿಕಾರಿಗಳ ಮೇಲೆ, ರಾಜಕಾರಣಿಗಳ ಮೇಲೆ ಕೋಪ ಮಡುಗಟ್ಟಿತ್ತು. ಅವರಿಗೆ ಮಾತ್ರವಲ್ಲ, ಇಡೀ ಜಗತ್ತಿಗೆ ತಾನು ಎಂತಹ ಕ್ರೀಡಾಪಟು ಎಂದು ತೋರಿಸುವ ಸಾತ್ವಿಕ ಛಲ ಆಕೆಯ ಎದೆಯಲ್ಲಿ ಗಟ್ಟಿಯಾಯಿತು.

2011ರ ಸೆಪ್ಟೆಂಬರ್‌ನ ಕೊನೆಯ ದಿನಗಳು, ಅರುಣಿಮಾಳ ಛಲವನ್ನು ನೋಡಿದ ಇತರ ರೋಗಿಗಳು ಹಾಗು ಆಸ್ಪತ್ರೆಯ ಸಿಬ್ಬಂದಿಗಳು ಬೆರಗಾಗುತ್ತಾರೆ. ಬರಿಯ ಐದು ತಿಂಗಳ ಒಳಗೇ ಆಕೆ ಸ್ವತಂತ್ರವಾಗಿ ನಡೆಯುವುದನ್ನು ಕಲಿತು ಬಿಟ್ಟಿದ್ದಳು. ಅವಳನ್ನು ಕಂಡ ವೈದ್ಯರೂ ಬೆರಗಾದರು. ಅದೇ ದಿನ ಅವಳನ್ನು ಡಿಸಾcರ್ಜ್‌ ಮಾಡುವ ಸಲಹೆಯನ್ನೂ ವೈದ್ಯರು ನೀಡುತ್ತಾರೆ.

ಅರುಣಿಮಾಳಿಗೆ ಎಲ್ಲಿಲ್ಲದ ಖುಷಿ. ಆಸ್ಪತ್ರೆಯಿಂದ ಹೊರಬಿದ್ದ ಆ ದಿನ, ಮನೆಗೆ ಹೋಗುವ ಬದಲು ನೇರ ಬಚೇಂದ್ರಿಪಾಲ್‌ರ ಕಛೇರಿ ತಲುಪಿದರು. ಅವರಿಗಾಗಿ ಕಾಯುತ್ತ ಕುಳಿತಿರುವಂತೆ, ಕಚೇರಿಗೆ ಬಂದ ಬಚೇಂದ್ರಿ ಪಾಲ್‌ರಿಗೆ ವಿಸ್ಮಯವಾಗುತ್ತದೆ. ನಿನ್ನೆ ತಾನೆ ಡಿಸಾcರ್ಜ್‌ ಆದ ಹುಡುಗಿ ಆಗಲೇ ತನ್ನೆದುರು ಪ್ರತ್ಯಕ್ಷಳಾಗಿ¨ªಾಳೆ! ಹತ್ತಿರ ಬಂದ ಬಚೇಂದ್ರಿ ಪಾಲರು ಆಕೆಯನ್ನು ಅಪ್ಪಿ ಕೇಳುತ್ತಾರೆ, “ಹೇಳು ಮಗು ಏನು ಮಾಡಬೇಕೆಂದಿರುವೆ?’

“ಮ್ಯಾಮ್‌ಜಿ, ನಾನು ಎವರೆಸ್ಟ್‌ನ್ನು ಏರಬೇಕೆಂದು ಆಲೋಚಿಸಿದ್ದೇನೆ, ದಯವಿಟ್ಟು ಸಹಾಯ ಮಾಡಿ’
ಬಚೇಂದ್ರಿ ಪಾಲ್‌ ಆಕೆಯ ಮುಖವನ್ನು ದಿಟ್ಟಿಸಿ ನೋಡಿ ಹೇಳುತ್ತಾರೆ, “ಮಗು ಇಂತಹ ಪರಿಸ್ಥಿತಿಯಲ್ಲಿ ನೀನು ಎವರೆಸ್ಟ್‌ನ ಎತ್ತರಕ್ಕೆ ಆಲೋಚಿಸಿದ್ದೀಯ ಎಂದರೆ, ನಿನ್ನೊಳಗೆ ನೀನು ಆಗಲೇ ಎವರೆಸ್ಟ್‌ ಅನ್ನು ಹತ್ತಿಯಾಗಿದೆ. ಇನ್ನೇನಿದ್ದರು ಹೊರ ಜಗತ್ತಿಗೆ ತೋರಿಸಲು ಹತ್ತಬೇಕಷ್ಟೆ’

ಎವರೆಸ್ಟ್‌ ಹಾದಿಯ ದುರ್ಗಮ ಪರ್ವತಾರೋಹಣವನ್ನು ಅವರು ಕ್ರಮಿಸಿದ ರೀತಿ,   2013ರ ಮೇ 22 ರಂದು ಎವರೆಸ್ಟ್‌ ಎತ್ತರದಲ್ಲಿ ನಿಂತ ರೋಮಾಂಚನದ ಕಥೆಯನ್ನು ಒಂಟಿ ಕಾಲಿನ ಎವರೆಸ್ಟ್‌ ಸಾಹಸಿ ಪುಸ್ತಕದಲ್ಲಿ ದಾಖಲಿಸಿದ್ದೇನೆ.

,

— ನವೀನ್‌ ಕುಮಾರ್‌ ಜಿ ಕೆ

Advertisements
2 ಟಿಪ್ಪಣಿಗಳು
  1. Badarinath Palavalli permalink

    ಚಿಕ್ಕ ಸೋಲಿಗೂ ಮನೋಸ್ಥೈರ್ಯ ಕಳೆದುಕೊಳ್ಳುವ ಅಳ್ಳೆದೆಯ ಉತ್ತರ ಕುಮಾರರಿಗೆ ಅರುಣಿಮಾ ಸಿನ್ಹಾ ಅವರು ಜೀವನ ಪಾಠ ಕಲಿಸುವ ಮೇಸ್ಟ್ರಂತವರು.

    ಉ.ವಾಗೇ ಅಭಿನಂದನೆಗಳು.

    Liked by 1 person

  2. Olle article le Naveena. Arunima udaharane spoorthidayaka.

    Liked by 1 person

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: