Skip to content

ಕುಡುಕನ ಮಾಧುರ್ಯ

ಜನವರಿ 5, 2015

ಬಾರಿನ ಪಕ್ಕದ ಖಾಲಿ ಬಾಟಲಿಗಳಿಗೆ
ಮಾತ್ರ ಗೊತ್ತು, ಗಂಡಸರ ನೈಜ ದುಃಖ,
ಹೆಂಡಿರು ಮಕ್ಕಳು ನೀಗಿಸಲಾಗದ ವೇದನೆಯನು
ನೀಗಿಸುವುದು ಈ ಬಾಟಲಿಗಳೇ ,,,,,,,,

ಎಲ್ಲ ಗಂಡಸರ ಮೌನ ವೇದನೆಯನು
ತನ್ನೊಳಗೆ ಬಚ್ಚಿಟ್ಟೂ,,, ಶಬ್ದ ಮಾಡದ
ಬಾಟಲಿಗಳ ಭಾವನೆಗಳೊಳಗೆ ಕೈ ಹಾಕಿ
ಅಲ್ಲಾಡಿಸಿ ಶಬ್ದ ನೋಡಬೇಕು,
ಕಿರುಚುತ್ತವೆ ಅವು,,,,,,,,
ತನ್ನನು ಖಾಲಿ ಮಾಡಿ ಎಸೆದ ಗಂಡಿನ ನೋವಿಗಾಗಿ

ಬಾರಿನ ಗೋಡೆಗಳಿಗೆ, ಕಿಟಕಿ ಇರುವುದಿಲ್ಲ
ಅದು ಮೌನವಾಗಿ, ಎಲ್ಲವನೂ ತನ್ನೊಳಗೆ
ಬಚ್ಚಿಡುವ
ಸುಂದರ ಸಮಾದಿ,
ಪ್ರತಿಯೊಬ್ಬ ಗಂಡಸೂ ಪ್ರಾಮಾಣಿಕ ಕುಡುಕ,
ಬಾರಿನ ಐದು ಗೋಡೆಗಳ ಒಳಗೆ,

ಹೆಂಡದ ವಾಸನೆಯ ಸ್ವಾದವನು ಅರಿತವನೂ
ಬಗ್ಗುವುದಿಲ್ಲ ಸಣ್ಣ ಪುಟ್ಟ ಜಂಜಡಗಳಿಗೆ
ಹೆಂಡವೇ ಅವನ ಮುದ್ದು ಪ್ರೇಯಸಿ
ಮನದ ಆಳದೊಳಗೆ

ಬಾರಿನ ಒಳಗೆ ಯಾರೂ ಬಡವರಲ್ಲ
ಅವರವರ ಜೇಬಿನ ತೂಕಕ್ಕೂ
ಕುಡಿಯುವ ಮತ್ತಿಗೂ, ಸಂಬಂದವೇ ಇಲ್ಲ
ಎಲ್ಲರೂ ಆಗರ್ಭ ಶ್ರೀಮಂತರೇ,,,,,,,
ಹಳಸಿದ ಭಾವನೆಗಳ ಒಡೆಯರು.

ನೆತ್ತರನ್ನೆಲ್ಲ ಅಡವಿಟ್ಟಾದರೂ ಕುಡಿಯಲೇ ಬೇಕು
ಕಾರಣ ಇಷ್ಟೇ
ಆ ಖಾಲಿ ಬಾಟಲಿಗಳೇ ನಿಜವಾದ ಪ್ರೇಯಸಿಯರು………

ಬೆಂಕಿ ಬೀಳಲಿ ಹಾಳು ಬದುಕಿಗೆ

ಕುಡಿಯದೆ, ಒದ್ದಾಡುತ್ತ ನೂರು ದಿನ ಬದುಕುವುದಕ್ಕಿಂತ
ಕುಡಿದ ನಶೆಯಲ್ಲಿ ತೇಲಾಡುತ್ತಾ ಮೂರು ದಿನ ಬದುಕುವುದೇ ಮೇಲು,,,

Advertisements
2 ಟಿಪ್ಪಣಿಗಳು
  1. kusuma ravi permalink

    E Kavana bareda nimage nanna Dhikkaravide. Kuduka gandasara Palina
    sathyavirabahudu idu, aadare avara kuditada nashege sikki Chidra
    Chidra vada avara kutumbadavaru noduva Narakavannu kandavaryaru? Yava
    tappu madade Nalugi hoda badukugalige nyaya koduvavaryaru?

    Kudidu 4 dina badukidaru saku anta nirdhara tegedukondore adu avarige
    bitta swatantra, dayamadi mattondu hennannu kattikondu samsara beleso
    Papa matra madabedi. Hage ontiyagi kudidu kudidu sayiri, mattondu
    jivavanu halu mado adhikara nimagilla, nenapirali.

    Liked by 1 person

    • ವಯಕ್ತಿಕವಾಗಿ ಎಂದೂ ಕುಡಿದವನಲ್ಲ, ಆದರೆ ಇತ್ತಿಚಿಗೊಮ್ಮೆ ಬಾರಿನ ಪಕ್ಕದಲಿ ಸುಮಾರು ಗಂಟೆಗಳ ಕಾಲ ಸುಮ್ಮನೆ ಕುಳಿತಿದ್ದೆ,,,,,, ಅಲ್ಲಿ ಕಂಡದ್ದು ಬರಿಯ ನೋವಿನಲ್ಲಿ ನರುಳುತ್ತಿದ್ದವರೇ,,,,,, ಅವರ ದೃಷ್ಟಿಯಲ್ಲಿ ಬಾಟಲಿಯ ಶಬ್ಧಗಳನ್ನು ಹೇಳುವ ಪ್ರಯತ್ನ ಮಾಡಿದೆ ಅಷ್ಟೇ,,,,,,, ಅದು ಬಿಟ್ಟರೆ ಮಧ್ಯಪಾನ ಮತ್ತರ ದಿಸೆಯಿಂದಾ ಅತೀ ನೋವುಂಡವನಾದ್ದರಿಂದ ಎಂದೂ ಅದನ್ನು ದಿಕ್ಕರಿಸುತ್ತೇನೆ ಕೂಡಾ . ನಿಮ್ಮ ಭಾವದ ನೋವುಂಟು ಮಾಡಿದ್ದಕ್ಕೆ ಕ್ಷಮೆ ಇರಲಿ,,,,,,,, ಇಡೀ ಕುಡುಕ ಸಮಾಜಕ್ಕೊಂದು ನನ್ನ ದಿಕ್ಕಾರವಿದೆ ,,,,,,, ಕಳಕಳಿಯ ಪ್ರತಿಕ್ರಿಯೆಗೆ ಧನ್ಯವಾದಗಳು ಕುಸುಮಕ್ಕ

      Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: