Skip to content

ಹುಡುಕಿಕೊಡಿ ಈ ನಗರದೊಳಗೆ, ನನ್ನ ಹಳ್ಳಿಯನು

ಜನವರಿ 5, 2015

ತವರಿನ ಬಡತನದ ಮುಂದೆ
ಯಾವ ಸಿರಿಯಾದರೇನು ?
ಎಲ್ಲವೂ ತೃಣವೆ,,,,,,

ಅಮ್ಮನ ಹಳೇ ಸೀರೆಯ
ನೆರಿಗೆಯ ಮಡಿಲಲ್ಲಿ ಸಿಕ್ಕ ನಿದ್ದೆ
ಎಲ್ಲಿ ಸಿಕ್ಕಿದೆ, ಇಷ್ಟೆಲ್ಲಾ ಐಶಾರಾಮದೊಳಗೆ?

ದುಡಿದು ಬರುವ ಅಪ್ಪನ
ಚರ್ಮ ಸುಲಿದು, ಒರಟಾದ
ಕೈಗಳಲಿ ತಂದು ಕೊಟ್ಟ
ಎಂಟಾಣೆ ಚಾಕಲೇಟಿನ ಸ್ವಾದ ,
ಎಷ್ಟು ತಿಂಡಿಗಳಿಗಿದೆ ಇಲ್ಲಿ ?

ಇರುವ ಪಾವು ಅಕ್ಕಿಯಲಿ,
ಒಂದು ಹಿಡಿಯನು ಮರುದಿನಕ್ಕೆ ತೆಗೆದಿಟ್ಟು
ಅವ್ವ ಮಾಡುವ ಅಡುಗೆಯ ಸಾರ್ಥಕತೆ
ಎಲ್ಲಿ ಸಿಗುತ್ತದೆ ಈಗ
ಇಷ್ಟು ಸಾವಿರ ಹೊಟೇಲುಗಳಲ್ಲಿ ?

ಹರಿದ ಲಂಗದ, ಕಪ್ಪು ಕಣ್ಣಿನ ಪಕ್ಕದ ಓಣಿಯ
ಲಂಬಾಣಿ ಹುಡುಗಿಯ ಕಳ್ಳ ನೋಟದ ಶುದ್ದ ಪ್ರೇಮ
ಎಲ್ಲಿ ಸಿಗುತ್ತದೆ ಇಲ್ಲಿ, ದಿನವೂ ಲಿಪ್-ಸ್ಟಿಕ್ ನಲಿ
ಸೆಳೆಯುವ ಬಹಳಷ್ಟು ಹುಡುಗಿಯರಲಿ ?

ಶಾಲೆಯ ಹಾದಿಯಲಿ
ಕದ್ದು ತಿಂದ ಕಬ್ಬಿನ ಜಲ್ಲೆಯ ರುಚಿ
ಎಲ್ಲಿ ಸಿಗುತ್ತದೆ ಇಲ್ಲಿ
ಲಕ್ಷ ಕೊಟ್ಟರೂ ,,,,,,,?

ಇಲ್ಲಿ ಏನಿಲ್ಲ, ಅನಿಸುತ್ತಿದೆ
ಅಲ್ಲೇ ಎಲ್ಲ,,,,,, ಎಲ್ಲ ಎಂದರೆ ಎಲ್ಲಾ,,,,,,,

ಯಾಕೋ ಏನೋ,,,,,,,,,
ಕಾಡುತ್ತಿದೆ ನನ್ನ ಹಳ್ಳಿ ಎಡೆಬಿಡದೆ
ಆಗಾಗ ನನ್ನನು ಕಣ್ಣೀರಾಗಿಸಿ,,,,,,,,,,,,,,,

-ಜೀ ಕೇ ನ

Advertisements
2 ಟಿಪ್ಪಣಿಗಳು
  1. ಕಣ್ಣೀರು ಇಡಬೇಡವೊ ತಮ್ಮಾ….

    Liked by 1 person

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: