Skip to content

ಎಲ್ಲರ ಸಹಾಯ ಬೇಡಿಕೊಂಡು

ಜನವರಿ 9, 2015

ಪ್ರಜಾವಾಣಿಯಲ್ಲಿ ಚಂದ್ರಶೇಕರ ಕೋಳೆಕರ ಅವರ ಬರಹವನ್ನು ಇಲ್ಲಿ ಹಾಕಿದ್ದೇನೆ,,,,,

8Almatti2

ಎಲ್ಲರ ಸಹಾಯ ಬೇಡಿಕೊಂಡು,,,,

ಆಲಮಟ್ಟಿ: ಜೀವನ ದೇವರು ಕೊಟ್ಟ ವರ. ನೀರ ಮೇಲಿನ ಗುಳ್ಳೆ ಎನ್ನುವ ತತ್ವಜ್ಞಾನಿಗಳು ಹೇಳುವಂತೆ ಮನುಷ್ಯನ ಬದುಕು ಎಷ್ಟು ದುಸ್ತರ ಎನ್ನುವುದಕ್ಕೆ ಈ ಬಾಲಕಿಯೇ ಉದಾಹರಣೆಯಾಗಿ ನಿಲ್ಲುತ್ತಾಳೆ.

ಸಮೀಪದ ವಂದಾಲ ಗ್ರಾಮದ ಬಡ ದಂಪತಿಗಳಾದ ರಮೇಶ ಮತ್ತು ಸಂಗೀತಾ ವಡ್ಡರ ದಂಪತಿಯ ಎರಡನೇ ಮಗಳಾದ ಜ್ಯೋತಿ ವಡ್ಡರ ಎಂಬ 17ರ ಬಾಲಕಿ ರಾಜ್ಯಮಟ್ಟದ ಟೇಬಲ್ ಟೆನಿಸ್ ಆಟಗಾರ್ತಿ.

ಓದಿನಲ್ಲಿಯೂ ಮುಂದಿದ್ದ ಈಕೆ ಪಾಲಕರ, ಶಿಕ್ಷಕರ ಪ್ರೀತಿಗೆ ಪಾತ್ರ­ವಾಗಿದ್ದ ಬಾಲೆ. ಈ ಅಪರೂಪದ ಬಾಲಕಿಗೆ ದೇವರು ಸಾಥ್ ನೀಡಲಿಲ್ಲ, ವಿಧಿಯ ಆಟವೇ ಮೇಲಾಯಿತು.

ಅಪರೂಪದ ಕ್ರೀಡಾಪಟುವಾಗಿದ್ದ ಜ್ಯೋತಿ, ರಾಜ್ಯ ಮಟ್ಟದ ಟೇಬಲ್ ಟೆನಿಸ್‌ನಲ್ಲಿ ವಿಜಯಪುರ ಜಿಲ್ಲೆಯನ್ನು ಪ್ರತಿನಿಧಿಸಿದ್ದಳು. ತಾನು ಕಲಿಯುತ್ತಿದ್ದ ವಂದಾಲ ಶಾಕಂಬರಿ ಪ್ರೌಢಶಾಲೆ­ಯಲ್ಲಿ ವಾಲಿಬಾಲ್, ಹ್ಯಾಂಡ್‌ಬಾಲ್ ಸ್ಪರ್ಧೆಗಳಲ್ಲಿ ನಾಯಕಿಯ ಸ್ಥಾನ ವಹಿಸಿ ಜಿಲ್ಲಾ ಮಟ್ಟದವರೆಗೂ ಪ್ರಥಮ ಸ್ಥಾನ ಪಡೆದ ಈ ಬಾಲೆ ಶಾಲೆಯ ಪ್ರತಿಭಾ ಕಾರಂಜಿಯಲ್ಲಿಯೂ ಸಾಧನೆ ಮಾಡಿದ್ದಳು.

2013-–14ನೇ ಸಾಲಿನ ಸಾರ್ವ­ಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಜರುಗಿದ ರಾಜ್ಯಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಭಾಗವಹಿ­ಸಿದ್ದ ಜ್ಯೋತಿ, ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆ ವಿಜಯಪುರ ಇವರ ಸಹಯೋಗದಲ್ಲಿ ನಡೆದ 2013-–14ನೇ ಸಾಲಿನ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಟೇಬಲ್ ಟೆನ್ನಿಸ್ (ಸಿಂಗಲ್ಸ್) ಮತ್ತು ಡಬಲ್ಸ್‌­ನಲ್ಲಿಯೂ ಪ್ರಥಮ ಸ್ಥಾನ, ಅಲ್ಲದೇ 2012-–13ರ ಜಿಲ್ಲಾ ಮಟ್ಟದ ಕ್ರೀಡಾ­ಕೂಟ­ದಲ್ಲಿ ಟೇಬಲ್ ಟೆನಿಸ್‌ನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ.

ಪ್ರತಿಯೊಂದು ಆಟದಲ್ಲಿಯೂ ತನ್ನ ಛಾಪನ್ನು ಮೂಡಿಸುತ್ತಿದ್ದ ಜ್ಯೋತಿ ಕೊಕ್ಕೋ, ಕಬಡ್ಡಿ ಆಟದಲ್ಲಿಯೂ ಎತ್ತಿದ ಕೈ. ಹಲವಾರು ಸತ್ಕಾರ ಸಮಾರಂಭ­ಗಳಲ್ಲಿ ಪದಕ, ಪ್ರಶಸ್ತಿ­ಗಳನ್ನು ತನ್ನ ಮುಡಿಗೇರಿಸಿ­ಕೊಂಡಿದ್ದಳು. ಇಂತಹ ಪ್ರತಿಭಾನ್ವಿತ ಬಡ ವಿದ್ಯಾರ್ಥಿನಿ ಜ್ಯೋತಿಯ ಬದುಕಿನಲ್ಲಿ ಈಗ ಕತ್ತಲು ಕವಿದಿದೆ.

ಆಗಿದ್ದೇನು…?: ಜ್ಯೋತಿ ಶಾಲೆಯಲ್ಲಿ ಒಂದಿನ ಆಟ ಆಡುವಾಗ ಶಾಲಾ ಆವರಣದಲ್ಲಿ ಎಡವಿ ಬಿದ್ದ ಪರಿಣಾಮ ತನ್ನ ಬಲಗಾಲವನ್ನೇ ಕಳೆದುಕೊಳ್ಳುವ ಪರಿಸ್ಥಿತಿ ಉಂಟಾಗಿದ್ದು ಮಾತ್ರ ವಿಚಿತ್ರವಾದರೂ ಸತ್ಯ. 2014ರ ಮಾರ್ಚ್‌ ತಿಂಗಳಲ್ಲಿ ಆಟವಾಡುವಾಗ ಆಕಸ್ಮಿಕವಾಗಿ ಎಡವಿ ಬಿದ್ದ ಪರಿಣಾಮ ಗಾಯವಾಗಿ ರಕ್ತ ಸುರಿದಿತ್ತು. ಇದು ಸಹಜ ಎಂದು ತಿಳಿದ ಆಕೆ ಅದಕ್ಕೆ ಯಾವುದೇ ಚಿಕಿತ್ಸೆ ಪಡೆಯ­ಲಿಲ್ಲ. ಕೆಲ ದಿನಗಳ ನಂತರ ಉಲ್ಬಣ­ಗೊಂಡ ಗಾಯ ಮತ್ತಷ್ಟು ಬಿಗಡಾ­ಯಿಸಿತು. ಚಿಕಿತ್ಸೆಗಾಗಿ ಬಾಗಲ­ಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖ­ಲಾ­ದಾಗ ಎರಡು ತಿಂಗಳ ಕಾಲ ಒಳರೋಗಿಯಾಗಿ ಚಿಕಿತ್ಸೆ ನೀಡಿ ಮರಳಿ ಮನೆಗೆ ಕಳುಹಿಸಲಾಯಿತು. ನಂತರ ಕೆಲ ದಿನಗಳ ನಂತರ ಕಾಲು ನೋವು ಉಬ್ಬರಿಸಿದಾಗ ಮತ್ತೆ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡ­ಲಾಯಿತು. ಆಗ ಆ ಗಾಯ ಗ್ಯಾಂಗ್ರಿನ್ ರೂಪ ಪಡೆದಿತ್ತು. ಕಾಲು ಕತ್ತರಿಸು­ವುದು ಅನಿವಾರ್ಯವಾಗಿತ್ತು.

ತನ್ನ ಬಲಗಾಲನ್ನು ಕಳೆದುಕೊಳ್ಳ­ಬೇಕಾಯಿತು. ಸಾಲ ಮಾಡಿ ₨ 3 ಲಕ್ಷಕ್ಕೂ ಹೆಚ್ಚಿನ ಹಣವನ್ನು ಖರ್ಚು ಮಾಡಿದ್ದರೂ ಕಾಲು ಕಳೆದು­ಕೊಳ್ಳಬೇಕಾಯಿತು.

ಆದರೆ ಈಗ ವಿಧಿ ಮತ್ತೆ ಜ್ಯೋತಿ ಜೀವನದಲ್ಲಿ ಆಟವಾಡುತ್ತಿದೆ. ಕತ್ತರಿ­ಸಿದ ಕಾಲಿನಿಂದ ಮತ್ತೆ ಸಣ್ಣದಾಗಿ ರಕ್ತ ಸುರಿಯಲಾರಂಭಿಸಿದ್ದು, ಇಲ್ಲಿ ಗುಣ­ಮುಖ­ವಾಗುವುದಿಲ್ಲ, ಹೆಚ್ಚಿನ ಚಿಕಿತ್ಸೆಗೆ ಚೆನ್ನೈಗೆ ತೆರಳಬೇಕೆಂದು ಸಲಹೆ ನೀಡಿದ್ದಾರೆ.

ಮೊದಲಿನ ಸಾಲವೇ ಅಧಿಕ­ವಾಗಿದ್ದು, ಮತ್ತೆ ಚಿಕಿತ್ಸೆ ಕೊಡಿಸಲು ಕುಟುಂಬದವರಿಂದ ಸಾಧ್ಯವಾಗುತ್ತಿಲ್ಲ. ಮಗಳು ಕ್ಷಣ ಕ್ಷಣಕ್ಕೂ ಅವ್ವಾ ಎಂದು ಕೂಗುವುದರಿಂದ ತಾಯಿಯ ಕರುಳು ಕಿತ್ತು ಬರುವಂತಾಗಿದೆ.

ತಾಯಿ ಸಂಗೀತಾ ಕೃಷಿ ಕೆಲಸಕ್ಕೆ ತಮ್ಮ ಗ್ರಾಮದ ಮಹಿಳೆಯರೊಂದಿಗೆ ಬೇರೆ ಊರುಗಳಿಗೆ ತೆರಳಿ ದಿನಗೂಲಿ ಮಾಡಿ ಜ್ಯೋತಿ ಸೇರಿದಂತೆ ನಾಲ್ಕು ಹೆಣ್ಣು ಮಕ್ಕಳನ್ನು ಸಲಹುತ್ತಿದ್ದಾಳೆ.

ಜ್ಯೋತಿಯ ಚಿಕಿತ್ಸೆಗಾಗಿ ಸಹಾಯ ಮಾಡುವವರು ವಂದಾಲ ಗ್ರಾಮದಲ್ಲಿ­ರುವ ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವ ಜ್ಯೋತಿ ರಮೇಶ ವಡ್ಡರ ಖಾತೆ ಸಂಖ್ಯೆ- ಐಎಫ್ಎಸ್‌ಸಿ ಕೋಡ್‌ SYNB 0000841 ಉಳಿತಾಯ ಖಾತೆ ಸಂಖ್ಯೆ -0841221­0019992ಗೆ ಧನ ಸಹಾಯ ಮಾಡಬೇಕು ಎಂದು ವಿನಂತಿಸಿದ್ದಾಳೆ.

ಸಂಪರ್ಕ ಸಂಖ್ಯೆ-–8105943934

Advertisements
ನಿಮ್ಮ ಟಿಪ್ಪಣಿ ಬರೆಯಿರಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: