Skip to content

ಸಂಭ್ರಮಿಸುತ್ತೇನೆ ನಾನು ನನ್ನ ಸಾವನ್ನು 

ಜನವರಿ 23, 2015

 

ಸಂಭ್ರಮಿಸುತ್ತೇನೆ ನಾನು ನನ್ನ ಸಾವನ್ನು
ಬೆತ್ತಲೆಯಾಗಿದ್ದ ಪ್ರಕೃತಿಯನು ಎಡೆಬಿಡದೆ
ಅನುಭವಿಸಿದ ನನ್ನ ಗಂಡಸ್ತನ ಮಣ್ಣಾಯಿತೆಂದು
 ,
ನನ್ನ ಗೋರಿಯ ಎದುರಲ್ಲಿ ತಮಟೆ ಬಾರಿಸಿ
ಕುಣಿಯುತ್ತೇನೆ ನಾನು,,, ನನ್ನೊಳಗಿನ ಅಹಂಕಾರ
ಹೇಳ ಹೆಸರಿಲ್ಲದಂತೆ ನಿರ್ನಾಮವಾಯಿತೆಂದು
 ,
ನನ್ನ ಹೊರುವ ನಾಲ್ಕು ಜನರ ಹೆಗಲು ನೋವದಂತೆ
ಸಾವಿನಲ್ಲಿ ದೇಹವನ್ನು ಸಂಪೂರ್ಣ ಧಾನಮಾಡಿ
ಹಗುರಾಗುತ್ತೇನೆ ನಾನು- ನನ್ನದೇನಿಲ್ಲ ಎಂದು ಸಾರಲು
 ,
ಸಕಲ ಚರಾಚರ ಜೀವರಾಶಿಗಳಿಗೆ ಸಾವೊಂದನ್ನೇ
ಅರ್ಪಿಸುತ್ತೇನೆ ನಾನು ಮನದಾಳದಿಂದ, ನೀವಿಲ್ಲದೆ
ನನ್ನದೆನ್ನುವ ಬದುಕು, ಬದುಕೇ ಅಲ್ಲವೆಂದು !
 ,
ನಾನು ನಿರ್ಗಮಿಸಿದ ಹನ್ನೊಂದು ದಿನಗಳಿಗೆ ನನ್ನ ಶ್ರಾದ್ಧದ
ಅಡುಗೆಯನ್ನು, ನನ್ನದೇ ಮಾಂಸದಲ್ಲಿ ಮಾಡಿಸಿ ಕಾಡುಪ್ರಾಣಿಗಳಿಗೆ
ಬಡಿಸುತ್ತೇನೆ, ಅವುಗಳ ಜಾಗವನ್ನು ಆಕ್ರಮಿಸಿಕೊಂಡ ತಪ್ಪಿಗಾಗಿ
 ,
ಈ ಪುಣ್ಯಭೂಮಿಯಲ್ಲಿ ಸಾಯುತ್ತೇನೆ ನಾನು ಮತ್ತೆಂದು ಹುಟ್ಟದಂತೆ
ದುರಾಸೆಗಳ ಕಿಚ್ಚಿಗಾಗಿ ಇನ್ನೊಬ್ಬರ ಆಸೆಗಳನ್ನು ಕೊಲ್ಲುವೆನೆಂದು
ಮತ್ತೊಬ್ಬರ ಭಾವನೆಗಳನ್ನು ಹಿಂಡುವೆನೆಂಬ ವಿಚಿತ್ರ ಭಯದಲ್ಲಿ!
 ,
ಸಂಭ್ರಮಿಸುತ್ತೇನೆ ನಾನು ನನ್ನ ಸಾವನ್ನು
ಎಂದಿಗಿಂತಾ ಮಿಗಿಲಾಗಿ, ಈ ಭೂಮಿಗೆ
ನನ್ನ ಸಾವು ಸಮಾಧಾನ ನೀಡಲೆಂದು ಶರಣಾಗಿ
 ,
-ಜೀ ಕೇ ನ
Kaavya
Advertisements
9 ಟಿಪ್ಪಣಿಗಳು
  1. Badarinath Palavalli permalink

    ‘ನನ್ನ ಹೊರುವ ನಾಲ್ಕು ಜನರ ಹೆಗಲು ನೋವದಂತೆ
    ಸಾವಿನಲ್ಲಿ ದೇಹವನ್ನು ಸಂಪೂರ್ಣ ಧಾನಮಾಡಿ
    ಹಗುರಾಗುತ್ತೇನೆ ನಾನು- ನನ್ನದೇನಿಲ್ಲ ಎಂದು ಸಾರಲು’
    ನಿಮಗಿದೋ ನಮ್ಮ ಕೋಟಿ ಸಲಾಮುಗಳು.

    Liked by 1 person

  2. ಕವನ ತುಂಬಾ ಇಷ್ಟವಾಯಿತು 🙂

    Liked by 1 person

  3. ವಾವ್….. ಇಂಥಾ ಸಾವಿರ ಸಂಭ್ರಮವೇ…….. ಇಷ್ಟವಾಯ್ತು……….

    Liked by 1 person

  4. ನಿರ್ಲಿಪ್ತ ಮೌನದೆಡೆಗೆ …

    Liked by 1 person

  5. ಎಲ್ಲ ಬಿಟ್ಟು ಖಾಲಿಯಾಗುವೆ ಆತ್ಮನ ಅಪೇಕ್ಷೆ Super

    Liked by 1 person

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: