Skip to content

ಕೊಂಡುಕೊಳ್ಳುವೆಯ ನೀ, ಪ್ರೀತಿಯ ರುಪಾಯಿ ಕೊಟ್ಟು

ಫೆಬ್ರವರಿ 26, 2015

ಏಕಾಂತದಲಿ

ಮೈ ಮರೆಯೋಣ ಎಂದರೆ

ನಿನ್ನ ನೆನಪು ಬಿಡುತ್ತಿಲ್ಲ.
 ,
ನದಿಯ ತೀರವೊಂದು ಪ್ರತಿರಾತ್ರಿ
ಸಾವಿರ-ಸಾವಿರ ನಕ್ಷತ್ರಗಳನು
ಹೆತ್ತು ತನ್ನೊಡಲಲ್ಲಿ ಬಚ್ಚಿಟ್ಟರೂ
ಅದಕ್ಕೆ ದಕ್ಕದ ಹಾಗೆ.
 ,
ನೇಸರದ ನಾವಿಕನಿಗೆ,
ಇನಾಮು ಕೊಟ್ಟವರಾರು,
ಭೂಮಿಯನು, ಪ್ರೀತಿಸಿ
ಗಿರಕಿ ಹೊಡೆಯಲು,,,
ಅವನಂತೆಯೇ ನಾನು, ನಿನ್ನ
ನೆನಪಿನೊಳಗೆ ಗಿರಕಿ ಹೊಡೆಯುತ್ತಿದ್ದೇನೆ.
 ,
ಸೇತುವೆ ಇಲ್ಲದ ನದಿಯನ್ನು ದಾಟುವುದು
ನಿನ್ನ ನೆನಪಿನ ನದಿಯೊಳಗೆ ಈಜುವುದು.
ಎರಡೂ ಒಂದೇ,,,,,,,,,
ಈಜುವವ ನಾನೆ ಅಲ್ಲವೇ.
 ,
ನೆನಪು ನೀರಿನ ಹಾಡು
ನಿಲ್ಲುವುದು ಯಾವಾಗ,
 ,
ನನ್ನೊಡಲ ಒಂದು ಹಿಡಿ ನೆನಪನ್ನಾದರೂ
ಕೊಂಡುಕೊಳ್ಳುವೆಯ ನೀ, ಪ್ರೀತಿಯ ರುಪಾಯಿ ಕೊಟ್ಟು……
 ,
-ಜೀ ಕೇ ನ
Advertisements
4 ಟಿಪ್ಪಣಿಗಳು
 1. Badarinath Palavalli permalink

  ಕಟ್ಟಿಕೊಟ್ಟ ರೀತಿಯಲ್ಲೇ ಕವನವೂ ಗೆದ್ದಿದೆ.

  Liked by 1 person

 2. Badarinath Palavalli permalink

  ಆಕೆಯೇ ಬೆಳಸಿದ ಪ್ರೀತಿಯ ಅವರಿಗೇ ಮಾರವ ಚಾಣಾಕ್ಷ ಕವಿ!

  Liked by 1 person

  • ನಾವೇ ತಯಾರಿಸಿದ ವಸ್ತುಗಳನ್ನು, ನಾವೇ ದುಬಾರಿ ಬೆಲೆ ಕೊಟ್ಟು ಕೊಂಡುಕೊಳ್ಳುವಂತೆ ಮಾಡುವ ಬಂಡವಾಳಶಾಹಿಗಳಿಗಿಂತ ಎಷ್ಟೋ ವಾಸಿ ಅಲ್ಲವ ಸರ್,,,, ಈ ನೆನಪಿನ ಮಾರಾಟ,,,,

   Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: