Skip to content

ಸಾವಿನ ಮನೆ 

ಮಾರ್ಚ್ 4, 2015
ನಡು ರಾತ್ರಿಯಲಿ ತಟ್ಟೆಂದು
ಕಿಟಾರನೆ ಕಿರುಚಿದ ನನ್ನಾತ್ಮ
ನಿಧಾನವಾಗಿ
ಸಾವಿನ ಮನೆಯ ಬಾಗಿಲಿನಲ್ಲಿ
ಇಣುಕಿ ನೋಡಿ ಮುಗುಳ್ನಗುತ್ತಿತ್ತು,,,
  ,
ಕಿಟಕಿ ಬಾಗಿಲುಗಳಿಲ್ಲದ
ಸಾವಿನ ಮನೆಯ ಒಳಗೆ
ಮಂದ ಬೆಳಕು
ನವಿರಾಗಿ ಪಸರಿಸಿತ್ತು
 ,
ದೇಹವಿಲ್ಲದ ಅನೇಕ ಆತ್ಮಗಳು
ಅಲ್ಲಿ ಸ್ವಚ್ಚಂದವಾಗಿ
ನಲಿವಿನ ಉತ್ತುಂಗದಲ್ಲಿದ್ದವು
 ,
ಧರ್ಮಗಳ ಹೆಸರೇ ಇಲ್ಲದೇ
ಜಾತಿ ವ್ಯವಸ್ಥೆಯ ವ್ಯಭಿಚಾರವಿಲ್ಲದೆ
ಗಂಡು ಹೆಣ್ಣೆಂಬ ಭೇದವಿಲ್ಲದೆ.
ಆತ್ಮಗಳೆಲ್ಲ ಸಂತೃಪ್ತಿಯಿಂದ
ಸಂಭ್ರಮಿಸುತ್ತಿದ್ದವು.
 ,
ಸಾವಿನೊಳಗಿನ ಬದುಕು ಇಷ್ಟೊಂದು
ಸರಳವೇ !! ನನ್ನಾತ್ಮ ಆಶ್ಚರ್ಯಗೊಂಡಿತು.
“ವಸುದೈವ ಕುಟುಕಂಬಕಂ” ಅಲ್ಲಿಯೇ
ವಿರಾಜಮಾನವಾಗಿದ್ದ ಬೆಳಕಿನ ಆತ್ಮ
ಪದೇ ಪದೇ ನುಡಿಯುತ್ತಿತ್ತು.
 ,
ಧರ್ಮವೆಂಬ ಹೆಸರಿನ ಗುಂಪನ್ನು
ಹುಟ್ಟು ಹಾಕಿದ ಕೆಲವೇ ಆತ್ಮಗಳು,,
ಭೂಮಿಯ ಮೇಲ್ಮೈಯನ್ನು ನೋಡಿ,,,,,
ಮನೆಯ ಮೂಲೆಯಲಿ, ಶೋಕತಪ್ತರಾಗಿ
ತಾವು ಮಾಡಿದ ತಪ್ಪಿಗೆ ಅಳುತ್ತಾ ಕುಳಿತಿದ್ದವು….
 ,
ಭೂಮಿಯ ಮೆಲ್ಪದರದಿಂದ ಬರುವ
ಬಂದೂಕಿನ-ರಕ್ತದ ವಾಸನೆಗೆ ಅವು
ಪದೇ ಪದೇ ವ್ಯಥೆ ಪಡುತ್ತಿದ್ದವು……
 ,
ಬೆಳಕಿನಾ ಆತ್ಮ ಮತ್ತೆ ಮತ್ತೆ,
“ವಸುದೈವ ಕುಟುಕಂಬಕಂ” ಎನ್ನುತ್ತಲೇ ಇತ್ತು,,,,
 ,
ನನ್ನಾತ್ಮ,,,, “ನಾನು” ಸಾಯುವುದೇ
ಬದುಕಿನ ಮಾರ್ಗ ಎಂದು ಕಂಡುಕೊಂಡಂತಿತ್ತು.
 ,
-ಜೀ ಕೇ ನ
Advertisements
ನಿಮ್ಮ ಟಿಪ್ಪಣಿ ಬರೆಯಿರಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: