Skip to content

ಅವಳೆದೆಯೊಳಗೆ ಸದಾ ಜೀವಿಸಿರಬೇಕು,,,,

ಏಪ್ರಿಲ್ 30, 2015

ಆಗಸದ ಎದೆಯೊಳಗೆ
ನನ್ನವಳ ಮಾತಿನ
ಮಳೆಯ ಮನದ
ಮೋಡದ ಮರೆಯೊಳಗೆ
ಕಳೆದು ಹೋಗಬೇಕು ನಾನು
ಇತಿಹಾಸ ಮರೆತು,,,,,,

ಹಸಿರು ಹಾಸಿದ ನೆಲದೊಳಗೆ
ನಕ್ಷತ್ರಗಳ ಕರೆತಂದು
ಹರವಿಡಬೇಕು,
ಹಾಲು ಹಾಸಿಗೆಯ ಮೇಲೆ
ನನ್ನ ಚೆಲುವೆಯ ಆಲಂಗಿಸಿ,,,,

ಮೇಘಗಳ ಮಾಧುರ್ಯಕೆ
ಮನವ ಬಿಚ್ಚಿಟ್ಟು
ಅವಳೊಳಗೆ
ಒಂದಾಗಬೇಕು,
ಮನ್ಮಥನೂ ನಾಚುವಂತೆ,,,,

ಎಲ್ಲಾ ತತ್ವಗಳನು
ಪ್ರೀತಿ ತತ್ವದಿಂದಲೇ
ಬಿಗಿದಿಡಬೇಕು,
ಅವಳೊಂದಿಗಿನ ಕ್ಷಣಗಳೆಲ್ಲ
ಹೊಳೆವ ಮುತ್ತಾಗಬೇಕು,
ತುಟಿಗಳು ಬಿರಿದು, ಬಿಗಿದಪ್ಪುವಂತೆ,,,,

ಬಿರುಬಿಸಿಲ ಯವ್ವನಕೆ
ಅವಳ ತಂಪಾದ ಮಡಿಲಿನ
ಎರಕವ ಹೊಯ್ದು ತಣಿಸಬೇಕು,,,,
ಅಲ್ಲೆಲ್ಲೋ ಕೋಗಿಲೆಯು
ನಮ್ಮಿಬ್ಬರನೇ ನೋಡಿ,
ಸದಾ ನಾಚಿ ಮುಗುಳ್ನಗಬೇಕು,,,

ಅವಳೆದೆಯೊಳಗೆ
ನಾ ಸದಾ ಜೀವಿಸಿರಬೇಕು,,,,

-ಜೀ ಕೇ ನ

Advertisements
One Comment
  1. Badarinath Palavalli permalink

    ಎಲ್ಲಾ ತತ್ವಗಳನು
    ಪ್ರೀತಿ ತತ್ವದಿಂದಲೇ
    ಬಿಗಿದಿಡಬೇಕು
    Ultimateಉ ultimateಊ…

    Liked by 1 person

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: