ಸಮರ್ಪಣೆ
ರೈಲು ಕಂಬಿಗಳಿಗೆ
ಒಂದನ್ನೊಂದು
ಸೇರುವ ಹಂಬಲ ಇಲ್ಲವೇ ?
ಹೇಳಿದವರ್ಯಾರು ಹಾಗೆಂದು
ಗತ ವರ್ಷಗಳಿಂದ
ದೂರವಿದ್ದು
ಹಂಬಲಿಸಿ, ಕನವರಿಸಿ
ಒಡಲೊಳಗೆ ಬಚ್ಚಿಟ್ಟ
ಪ್ರೀತಿಯನ್ನೆಲ್ಲ,
ತನ್ನ ಮೇಲೆ ಹಾದುಹೋಗುವ
ರೈಲು ಬಂಡಿಯನು, ಹಾಗು
ಅದರಲಿ ಸಾಗುವ
ಅಷ್ಟೂ ಜೀವಗಳನು ಹೊರಲು
ಕಾದಿರಿಸಿವೆ ಅಷ್ಟೇ.
ಮೊನ್ನೆ ಅಲ್ಲೆಲ್ಲೋ
ಪ್ರೇಯಸಿಯ ಸೇರಲು
ಹಂಬಲಿಸಿದ ಹಳಿಯೊಂದು,
ನೂರಾರು ಜನರ ಸಾವಿಗೆ
ಕಾರಣವಾಯ್ತೆಂದು ಸುದ್ದಿಯಾಯ್ತು,
ಹಳಿಯ ಒಡಲೊಳಗಿನ ವಿರಹ
ಅರ್ಥೈಸಿಕೊಂಡವರಾರು !!!!
*********************************
ರೈಲು ಹಳಿಯಂತೆಯೆ
ಸೈನಿಕನೂ ಇದ್ದಾನೆ.
ನಿಂತಿದ್ದಾನೆ
ಗಡಿಯ ಕೊನೆಯಲ್ಲಿ
ಗನ್ನು ಹಿಡಿದು
ಯಾರದೋ ದ್ವೇಷಕ್ಕೆ,
ಯಾರದೋ ಪ್ರೇಮಕ್ಕೆ,
ಇನ್ನ್ಯಾರದೋ ಕಾಮಕ್ಕೆ ಕಾವಲಾಗಿ
ನಡೆಯುತ್ತಿದೆ ದೇಶದೊಳಗೆ
ತರ-ತರ ದೊಂಬರಾಟ
ಕೆಸರಿನ ಎರಚಾಟ,
ಸೈನಿಕನ
ಹೆಂಡತಿ ಇಲ್ಲಿ ಅಳುತ್ತಿದ್ದಾಳೆ,
ಅವನಿಗಾಗಿ
ಕನಸುಗಳನು ತುಂಬಿಕೊಂಡು,
ಅವನ ನೆನಪುಗಳನು ಹೆತ್ತವಕೆ ತಿನ್ನಿಸುತಾ,,,
ಅಲ್ಲಿ ಅವನು,
ಪ್ರಾಣ ಕೊಟ್ಟು,,,,,, ಮರೆಯಾಗಿದ್ದಾನೆ,
-ಜೀ ಕೇ ನ
Advertisements
* ಅವು ಸೇರಬಾರದು, ಸೇರಿದರೆ ಅನರ್ಥ ಕಾರಣವು!
** ರಾಜಕಾರಣದಾಟಕೆ ಬಲಿಬೀಳುವ ಸೈನಿಕ ಮತ್ತು ದರ್ಭಾರಲಿ ಮೀಸೆ ತಿರುವುವನು ಪಾಪಿ ಆಳುವರಸ!
LikeLiked by 1 person