Skip to content

ನೇಗಿಲ ಹಿಡಿದ ಯೋದ

ಮೇ 7, 2015

ನೇಗಿಲ ಹಿಡಿದ ಯೋದನೊಬ್ಬ
ತುಕ್ಕು ಹಿಡಿದು ಕುಳಿತಿದ್ದಾನೆ,,,,,
ಅನ್ನಕೆ ಹಬೆಯಿಕ್ಕಲು
ಹಾತೊರೆದ ಮನಸಿಗೆ,,,, ಬೆಂಕಿ ಇಕ್ಕಿ

ಸಮೃದ್ಧ ಹಸಿರೊಳಗೆ ಮನದಣಿಯೇ
ನೆಲಕೆ ಮುತ್ತಿಕ್ಕಿ ನಲಿದವನು,,,,,
ತೋಳುಗಳಿಗೆ ಕೊಳ ಹಾಕಿ
ಕುಳಿತಿಹನು, ಹಳೆಯ ನೆನಪಲ್ಲಿ,,,,

ಬಿಳಿಯ ಎತ್ತಿನ ಜೋಡಿ,
ನೊಗ ಎಳೆವ ಪರಿಯೊಳಗೆ
ಆನಂದ ಕಂಡಾತ,,,,
ಹೊಲದೊಳಗೆ ಎದ್ದ ಖಾರ್ಖಾನೆಯ
ಹೊಗೆಯೊಳಗೆ ಕೆಮ್ಮುತಿಹನು

ಗದ್ದೆಯ ತುಂಬೆಲ್ಲ, ಕಪ್ಪು ರಸ್ತೆಯ
ಬಿನ್ನಾಣ ಕಂಡು
ಒಳಗೊಳಗೆ ವಿಷಾದಿಸಿಹನು,
“ಅನ್ನವಿಲ್ಲದಯೇ ಬದುಕಬಂಡಿ
ಬರಿಯ ರಸ್ತೆಯಲಿ ಎತ್ತ ಸಾಗುವುದು” ಎಂದು

ಹುಲ್ಲು ಹಾಸಿನ ಮನೆಯೊಳಗೆ
ಸದಾ ಗಮ್ಮೆನ್ನುತ್ತಿದ್ದ,
ಎಮ್ಮಿ ಹಾಲಿನ ಗಟ್ಟಿ ಪರಿಮಳಕ್ಕೂ
ಎಲ್ಲಿಂದಲೋ ಬಂದ ಪ್ಯಾಕೆಟಿನ ಹಾಲಿನ
ನಿಸ್ತೆಜತೆಗೂ, ಹೋಲಿಸುತ ಬೆಸ್ತುಬಿದ್ದಿಹನು.

ಮನೆಯೊಳಗೆ, ಮನದೊಳಗೆ
ಆಧುನಿಕ ಆಕ್ರಮಣಕೆ,,,,
ಆಕಾಶಕೆ ತಲೆಚಾಚಿ ನಿರ್ಜೀವವಾಗಿಹನು!!!!

Advertisements
4 ಟಿಪ್ಪಣಿಗಳು
  1. Badarinath Palavalli permalink

    ಆಧುನಿಕ ಆಕ್ರಮಣಕೆ ಹಾಲಿನಲ್ಲಾದ ವ್ಯತ್ಯಾಸದ ಮೂಲಕ ರೈತನ ಸುಸ್ಥಿತಿಯನ್ನು ಮನೋ ವೇದಕವಾಗಿ ನಿರೂಪಿಸಿದ್ದೀರ…

    Liked by 1 person

  2. ಉತ್ತಮವಾಗಿ ಹೇಳಿದ್ದೀರಿ.. ಆಧುನಿಕತೆಗೆ ಹೊಂದಿಕೊಳ್ಳುವಲ್ಲಿ ವಿಫಲವೋ ಏನೋ ಕೆಲವು ರೈತರ ಪಾಡು ಶೋಚನೀಯವಾಗಿದೆ/ವಾಗುತ್ತಿದೆ/ವಾಗಲಿದೆ. ನೇಗಿಲ ಬದಲಿಗೆ ಯಂತ್ರ/ಗಿಡವಾಗಿದ್ದ ಸಸಿ ಬಳ್ಳಿಯಾಗುತ್ತಿರುವುದು/ ಹಣ್ಣುಗಳಲ್ಲಿ ಬೀಜವಿಲ್ಲದಾಗುತ್ತಿರುವುದು ಪ್ರತಿ ಹೊಸದರಲ್ಲೂ ಹಳೆಯ ಸಾವಿದೆ. ಅನ್ನದ ಬಣ್ಣ ಗಾತ್ರ ರುಚಿ ಬದಲಿಸಬಹುದು ಆದರೆ ಆ ಭತ್ತಕ್ಕೆ ಗರ್ಭವನ್ನು ಮಣ್ಣಿಗೆ ಬದಲಾಗಿ ಬೇರಾವುದು ಕೊಡುವುದು ಎಂದಿಗೋ ..?!ಸಾಧ್ಯವೋ ..?
    ಹಾಲಿನಲ್ಲೂ ಸಾಮವೇ ಹಸುವ ಕೆಚ್ಚಲಲ್ಲದೆ ಬೇರೆಲ್ಲಿ ಹಾಲೆಳೆವರೋ… ಕಾದು ನೋಡೋಣ.
    ರೈತರು ಆಧುನಿಕ ಯುಗದಲ್ಲೀಗ ಆಧುನಿಕಥೆಯ ಉಪಯೋಗವನ್ನು ಬಳಸಿ ಅಭಿವೃಧ್ಧಿ ಹೊಂದುವ ಕೃಷಿಕನಾದಲ್ಲಿ ಸಾರ್ಥಕ.

    Liked by 2 people

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: