Skip to content

ಹನಿ ಹನಿ ಕಥೆಗಳು

ಜೂನ್ 12, 2015
-: ಮಗು, ಅಪ್ಪ ಮತ್ತು ಹಕ್ಕಿ :-
      ಉದ್ಯಾನದಲ್ಲಿ ಅಪ್ಪ ಮತ್ತು ಮಗು ಕುಳಿತಿದ್ದರು, ಆಗಲೇ ಅವರ ಮೇಲಿನ ಕೊಂಬೆಯಲ್ಲಿ ಹಕ್ಕಿಯೊಂದು ಬಂದು ಕುಳಿತಿತು, ಮಗು ಅದನ್ನು ನೋಡಿ ಕೇಕೆ ಹಾಕಲಾರಂಭಿಸಿತು, ಅಪ್ಪ ಮಾತ್ರ ಹಕ್ಕಿ ಹಿಕ್ಕೆ ಹಾಕುವುದೇನೋ ಎಂಬ ಭಯದಲ್ಲಿ ಸರಿದು ಕುಳಿತ.
****************************************************************************************
-: ಮೀನು ಹಿಡಿಯುವ ಬುಗ್ಗ  :-
     ಬುಗ್ಗ ಮುಂಜಾನೆಯೆ ಬಂದು, ಭೋರ್ಗರೆಯುತ್ತಾ ಹರಿವ ಹೊಳೆಯಲ್ಲೇ ಈಜಿ, ಅದಕ್ಕೆ ಅಡ್ಡಲಾಗಿ ಬಲೆ ಹಾಕಿ ಮೀನು ಹಿಡಿಯುತ್ತಿದ್ದ, ಮೀನು ಸಿಗುವವರೆಗೂ ನೀರಿಗೆ ಸವಾಲಗುವಂತೆ ಈಜುತ್ತಾ ಕಾಲಕಳೆಯುತ್ತಿದ್ದ, ಮೀನು ಮಾರಾಟವೇ ಅವನ ಜೀವನೋಪಾಯದ ದಾರಿ, ಅದೊಂದು ದಿನ ಬೆಳಿಗ್ಗೆ, ಅಲ್ಲೇ ಹತ್ತಿರದಲ್ಲಿ ನಾಲ್ಕೈದು ಜನರ ಹಾಹಾಕಾರ, ಯಾರೋ ಹೊಳೆಗೆ ಬಿದ್ದಿದ್ದರು, ತಕ್ಷಣವೇ ಓಡಿದ ಬುಗ್ಗ, ಹೊಳೆಗೆ ಧುಮುಕಿ, ಹೊಳೆಯ ಅರ್ಭಟಕ್ಕೆ ಸವಾಲಾಗುವಂತೆ ಈಜಿ ಬಿದ್ದವನನ್ನು ಕಾಪಾಡಿದ,
       ಎರಡು ವರ್ಷದ ಹಿಂದೆ, ಹೊಳೆಗೆ ಬಿದ್ದವನ ಫೋಟೋ ಪತ್ರಿಕೆಗಳಲ್ಲಿ ರಾರಾಜಿಸಿತ್ತು, ಏಕೆಂದರೆ ಆವನು ಆ ವರ್ಷದ “ರಾಷ್ಟ್ರ ಮಟ್ಟದ ಈಜು ಸ್ಪರ್ದೆಯ” ಪ್ರಥಮ ಬಹುಮಾನ ಗಳಿಸಿದವನಾಗಿದ್ದ.
Advertisements
3 ಟಿಪ್ಪಣಿಗಳು
  1. ಕನ್ನಡ ಬ್ಲಾಗರ್ಸ್ ಎಲ್ಲರನ್ನು ಒಟ್ಟಿಗೆ ಭೇಟಿ ಮಾಡಿಸಬೇಕೆಂಬ ಒಂದು ಸಣ್ಣ ಪ್ರಯತ್ನ ನನ್ನದು.
    Weekend ಅಲ್ಲಿ ಒಂದೆರಡು ತಾಸು ನಾವೆಲ್ಲರೂ ಒಟ್ಟಿಗೆ ಕೂತು ಪರಸ್ಪರ ಕವನ ವಾಚನ ಮಾಡಬೇಕೆಂಬ ಸಣ್ಣ ಆಸೆ.
    ಅದಕ್ಕಾಗಿ ಒಂದು wats app group create ಮಾಡಿ ಎಲ್ಲರು ಅನುಕೂಲವಾಗುವಂತೆ ಒಂದು ಅವಧಿ ನಿಗದಿಪಡಿಸಿಬೇಕಿದೆ.
    ನಿಮಗೂ ಈ ಪ್ರಯತ್ನ ಇಷ್ಟವಾದರೆ, ನಿಮ್ಮ ನಂಬರ್ ತಿಳಿಸಿ !

    Liked by 1 person

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: