Tags
ಕನಸು, ಕನ್ನಡ, ಕನ್ನಡಿ, ಕವನ, ಕವಿತೆ, ಕಾಡುವ, baraha, kannada, kannada blog, kannada film mythri, kannada kathe, kannada kavana, kannada movie mythri, karnataka, karntaka, kathe, kavana, kavite, kavithe, mythri, mytri, navakarnataka
ಕೇರಳದಲ್ಲಿ ಅಪ್ಪುವಿನ ಚಿತ್ರ,
ಜೂನ್ 15, 2015
ಗಿರಿರಾಜ್ ಬಿ ಎಂ ನಿರ್ದೇಶಿಸಿರುವ ಮೈತ್ರಿ ಚಿತ್ರ, ಕನ್ನಡದಲ್ಲಿ ಹಲವು ಮನ್ನಣೆ ಗಳಿಸಿ, ಮಲಯಾಳಂಗೂ ಕಾಲಿಟ್ಟಿದೆ, ರಿಮ್ಯಾಂಡ್ ಹೋಮಿನ ಹುಡುಗನೊಬ್ಬನ ಜೀವನದ ಸುತ್ತ ಹೆಣೆದಿರುವ ಕಥೆ ಅಲ್ಲಲ್ಲಿ ಕಣ್ಣಿಗೆ ಸಿಂಚನವೆರೆಸುತ್ತಲೆ ಇರುತ್ತದೆ,,,,, ಸಿದ್ಧ ಎನ್ನುವ ಪಾತ್ರ ಇಂದಿನ ಸಮಾಜಕ್ಕೆ ಕನ್ನಡಿ ಹಿಡಿದಿರುವಂತೆ ಚಿತ್ರಿಸಿದ್ದಾರೆ ನಿರ್ದೇಶಕರು, ಬಾಲ್ಯದ ಕನಸುಗಳನ್ನ ಹಾಡುತಾ ಮೊದಲ ಹಾಡಿನಲ್ಲಿಯೇ ನಮ್ಮನ್ನೆಲ್ಲ ಬಾಲ್ಯದ ನೆನಪುಗಳಿಗೆ ಕೊಂಡುಹೋಗುವ ಪ್ರಯತ್ನ ಅತ್ಯಂತ ಶ್ಲಾಘನೀಯ, ಕನ್ನಡದಲ್ಲಿ ಮೂಡಿಬಂದ ಮೈತ್ರಿಯ ಯಾತವತ್ತು ರೂಪ ಹೊತ್ತಿದ್ದರೂ, ಕೇರಳದ ಸಂಸ್ಕೃತಿಗೆ ತಕ್ಕಂತೆ ಅಲ್ಲಲ್ಲಿ ಸಣ್ಣ ಸಣ್ಣ ಬದಲಾವಣೆಗಳಿವೆ, ಆದರೆ ಮೂಲ ಕಥೆಗೆ ಎಲ್ಲಿಯೂ ಹೊಡೆತ ಬಿದ್ದಿಲ್ಲ,
,
ಅನೇಕ ಕ್ರೈಮ್ ಗಳನ್ನು ಮಾಡಿ, ರಿಮಾಂಡ್ ಹೋಮ್ ಸೇರಿದ ಮಕ್ಕಳಲ್ಲಿ, ಬದಲಾವಣೆ ತರುವುದು ಅಸಾಧ್ಯ ಎಂದು ನಂಬಿದ, ಹಾಗು ಅವರಿಗೆ ಗನ್ನು ಕೊಟ್ಟರೆ ಈ ವಯಸ್ಸಿನಲ್ಲೇ ದೊಡ್ಡ ಕ್ರಿಮಿನಲ್ಗಳಾಗುತ್ತಾರೆ ಎಂದು ವಾದಿಸುವ ಅಲ್ಲಿನ ವಾರ್ಡನ್ನಿಗೆ,,,,,,, “ಮಕ್ಕಳಿಗೆ ಗನ್ನು ಕೊಡುವ ಪೆನ್ನು ಕೊಟ್ಟು ನೋಡಿ, ಅವರು ಇತಿಹಾಸ ಸೃಷ್ಟಿಸಬಲ್ಲರು” ಎಂದು ಅಪ್ಪು ಹೇಳಿದಾಗ, ಒಂದು ಕ್ಷಣ ಮೈ ನವಿರೇಳುತ್ತದೆ,
,
ಚಂದ ನೀನು ಚಂದ ಎನ್ನುವ ಹಾಡು, ಯಾವುದೋ ಅವ್ಯಕ್ತ ಭಾವದೊಳಗೆ ನಮ್ಮನ್ನು ಸೆಳೆದುಕೊಂಡು ಹೋಗುತ್ತದೆ
,
ಹೆಚ್ಚಿನ ಅತಿರೇಕತನವಿಲ್ಲದೇ, ಅಬ್ಬರವಿಲ್ಲದೆ, ಕಥೆ ಸಮಾಜದ ಕುಹಕ ವ್ಯಕ್ತಿಗಳಿಗೆ ತೀಕ್ಷ್ಣ ಏಟು ನೀಡುತ್ತದೆ, ಒಮ್ಮೆ ನೋಡಲೇ ಬೇಕಾದ ಸಿನಿಮಾ.
ಮೈತ್ರಿಗಿಂತಲೂ ಮುಂಚೆಯೇ, “ನವಿಲಾದವರು” ಹಾಗು “ಜಟ್ಟ” ಎಂಬ ಎರಡು ವಿಶಿಷ್ಟ ಸಿನಿಮಾ ಕೊಟ್ಟವರು ಗಿರಿರಾಜ್, (ನವಿಲಾದವರು ಸಿನಿಮಾ “ಟೋಟಲ್ ಕನ್ನಡ” ಮಳಿಗೆಯಲ್ಲಿ ದೊರೆಯುತ್ತದೆ) ನವಿಲಾದವರು ಸಿನಿಮಾ ಅತೀ ಕಡಿಮೆ ವೆಚ್ಚದಲ್ಲಿ ತಯಾರಾದ ಅತೀ ಸೂಕ್ಷ್ಮ ಕಥೆಯುಳ್ಳ ಕಿರುಚಿತ್ರ,,,,,,,, ಒಂದು ಚಿತ್ರವನ್ನೂ ಹೀಗೂ ಮಾಡಬಹುದೇ, ನೋಡಬಹುದೇ, ಆಲೊಚಿಸಬಹುಡೇ ಎಂಬ ಸಾರ್ಥಕ ಪ್ರಶ್ನೆಯನ್ನು ಮನದಲ್ಲಿ ಹುಟ್ಟುಹಾಕುವ ಈ ಚಿತ್ರ, ಗಿರಿರಾಜರ ಚೊಚ್ಚಲ ಹೆರಿಗೆ ಎಂದೇ ಹೇಳಬೇಕು. ಆಸಕ್ತಿ ಉಳ್ಳವರು ಒಮ್ಮೆ ಆ ಸಿನಿಮಾವನ್ನು ತಂದು ನೋಡಿ, ಮನುಷ್ಯ ಸಂಬಂದಗಳಿಗೆ ಧರ್ಮದ ಕಡಿವಾಣ ಹೇಗೆ ಬಿದ್ದೆದೆ ಎಂಬ ಚಿತ್ರಣ ಅದರಲ್ಲಿದೆ.
,
ಇಂತಹ ವಿಶಿಷ್ಟ ಚಿತ್ರಗಳನ್ನು ಕೊಟ್ಟ, ಸಿನಿಮಾ ಪ್ರೇಮಿಯ ಚಿತ್ರ ಪ್ರಯಾಣ ಇನ್ನಷ್ಟು ರೋಚಕತೆಯಿಂದ ಕೂಡಿರಲಿ ಎಂದು ಹಾರೈಸೋಣ.
,
-ಜೀ ಕೇ ನ
Advertisements
From → ಹಾಗೆ ಸುಮ್ಮನೆ
ನಿಮ್ಮ ಟಿಪ್ಪಣಿ ಬರೆಯಿರಿ