Skip to content

ಮೋಡದ ವಯ್ಯಾರ

ಆಗಷ್ಟ್ 24, 2015

ಪ್ರಕೃತಿಯನ್ನು ಆಸ್ವಾದಿಸಿ ವಿಡಿಯೋದಲ್ಲಿ ಸೆರೆಹಿಡಿಯುವ ಅವಕಾಶವೊಂದು ಸಿಕ್ಕಿತು, ಗೆಳೆಯನೊಬ್ಬ ಹಾಡಿದ (ನನಗೆ ಅರ್ಥವಾಗದ) ಮಲಯಾಳಂ ಹಾಡಿಗೆ ವಿಡಿಯೋ ಮಾಡಲು ನದೀ ತೀರಕ್ಕೆ ಹೊರಟೆವು, ಆ ಸುಂದರ ಪ್ರಕೃತಿಯ ಮಧ್ಯದಲ್ಲಿ ಕ್ಯಾಮರ ಹಿಡಿದು ಕುಳಿತು, ಗಾಳಿಯ ಪರಿಮಳವನ್ನು ಅಸ್ವಾದಿಸುವುದೇ ನನ್ನ ಗುರಿಯಾಗಿತ್ತು,,,,,,,,

ವಿಡಿಯೋ ಮಾಡುವಾಗ ಪದೇ ಪದೇ ಗೆಳೆಯನಿಗೆ ಗೋಳು ಕೊಟ್ಟಿದ್ದೆ, ಸುಮ್ಮನೆ ಕಲ್ಲುಗಳ ರಾಶಿಯ ಮಧ್ಯ ಕುಳ್ಳಿರಿಸಿದ್ದೆ,,,, ಹಾವೊಂದು ಹೊರಬಂದರೂ ಮತ್ತದೇ ಜಾಗದಲ್ಲಿ ಕುಳಿತ ಅವನ ಧೈರ್ಯಕ್ಕೆ ಮೆಚ್ಚಿದ್ದೆ,,,,, ನದಿಯ ಒಂದು ತೀರದಲ್ಲಿ ಅವನು, ಇನ್ನೊಂದು ತೀರದಲ್ಲಿ ನಾನು, ಅವನು ಹಾಡುವುದು ಏನೂ ಕೇಳಿಸದೇ ಇದ್ದರೂ ನಾನು ಕ್ಯಾಮರ ಹಿಂದೆ ನಿಂತು ನಗುತ್ತಿದ್ದೆ, ಅವನು ಅಲ್ಲಿಯೇ ಏಳಲು ಹೋಗಿ ಜಾರಿ ಬಿದ್ದಾಗ ಕಿಚಾಯಿಸಿ ನಕ್ಕಿದ್ದೆ, ಸೊಂಪಾಗಿ ಬೀಸುತ್ತಿದ್ದ ಗಾಳಿಗೆ ಕ್ಯಾಮರ ಅಲ್ಲಾಡಿದಾಗ ಒಂದೇ ಹಾಡಿನ ಸಾಲನ್ನು ಏಳೆಂಟು ಬಾರಿ ಹಾಡಿಸಿ ಅವನಿಗೆ ಸುಸ್ತು ಮಾಡಿದ್ದೆ,,,,,,,, ಬ್ರಿಡ್ಜ್ ಒಂದರ ಮೇಲೆ ಅವನು ನಿಂತಾಗ ಅಲ್ಲಿನ ಮೋಡಗಳ ಮೈಮಾಟಕ್ಕೆ ಮನಸೋತು ಕ್ಯಾಮರ ಆನ್ ಮಾಡುವುದನ್ನೇ ಮರೆತು,, ಅವನು ಹಾಡಿದ್ದನ್ನೇ ಮತ್ತೆ ಮತ್ತೆ ಹಾಡುವಂತೆ ಒತ್ತಾಯಿಸಿದ್ದೆ, ನಮಗೆ ಅಲ್ಲಿ ಯಾರ ಹಂಗೂ ಇರಲಿಲ್ಲ, ಹಾಗು ನಮ್ಮ ಬಳಿ ಇದ್ದುದು ಬರಿಯ “ಪಾಯಿಂಟ್ ಅಂಡ್ ಶೂಟ್ ಕ್ಯಾಮರ” ಅದರಲ್ಲಿ ವಿಡಿಯೋ ರೆಕಾರ್ಡ್ ಮಾಡುವುದು ಕಷ್ಟವಾದರೂ, ಪ್ರಯತ್ನ ಮಾಡುವಲ್ಲಿ ಸಫಲರಾದೆವು, ಶೂಟಿಂಗ್-ನ ಉದ್ದಕ್ಕೂ ಸುರಿದ ಜಿಟಿ ಜಿಟಿ ಮಳೆ, ನಮಗೆ ಏನೋ ಒಂದು ರೀತಿಯ ಚೈತನ್ಯ ಕೊಡುವಂತಿತ್ತು,,,,,,

“Watch in HD”

ಈ ವಿಡಿಯೋದಲ್ಲಿ ಅನೇಕ ತಪ್ಪುಗಳಿವೆ, ಆದರೂ ಧೈರ್ಯಮಾಡಿ ಅಪ್ಲೋಡ್ ಮಾಡಿದ್ದೇನೆ,,,,,,, ಸುಮ್ಮನೆ ನೋಡಿ ನಕ್ಕು ಬಿಡಿ.

-ಜೀ ಕೇ ನ

Advertisements
5 ಟಿಪ್ಪಣಿಗಳು
  1. kusuma ravi permalink

    Hi G K N,

    Super Location, The Best Camerawork by NonCameraman

    Liked by 1 person

  2. ಸುಮ್ಮನೆ ನಕ್ಕು ಇರೋಕಾಗುತ್ತಾ? ಏನೇನೊ ಕಸರತ್ತು ಮಾಡುವ ಉಮೇದಿ. ಪರವಾಗಿಲ್ಲ.👌☺

    Liked by 1 person

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: