Skip to content

ಇವಳ್ಯಾರ ಮಗಳೋ !

ಅಕ್ಟೋಬರ್ 7, 2015

ಕಡಲ ತಡಿಯಲ್ಲಿ, ಕನಸುಗಳನ್ನು ನೇತುಹಾಕಿದ
ಮೀನು ಮಾರುವ ಹುಡುಗಿ
ನನಗೆ ಅಂದು, ಮೀನು ಸಾರು ಬಡಿಸಿದ್ದಳು,,,,,,
ಮೀನಿಗೆ ಅವಳ ಕನಸುಗಳದ್ದೆ ರುಚಿ,

ಉಪ್ಪು ನೀರಿನ ನವೆಗಿಂತ, ಅವಳ ಕೈಯೊಳಗೆ
ಫ್ರೈ ಆಗುವುದೇ ಮೇಲೆ ಎಂದುಕೊಂಡಂತೆ,
ಮೀನುಗಳೆಲ್ಲ ನಗುತ್ತಲೇ, ಸಮುದ್ರದಿಂದ
ಹಾರಿ ಹಾರಿ ಬಂದಿದ್ದವು,,,

ಮಳೆ ಗುಡುಗಿನ ತಣ್ಣನೆಯ ರಾತ್ರಿಯಲಿ,
ಬಿಸಿ ಬಿಸಿ, ಕುಚ್ಚಲಕ್ಕಿಗೆ ಕಾಯಿ ಹಾಕದ
ಮೀನು ಸಾರಿನ ಘಮ ಘಮ,,,,
ಆಸ್ವಾದಿಸಿ ತಿಂದಾಗಲೆ ತಿಳಿದದ್ದು,,,,,
ಅವಳ ಕನಸಿನ ಗಟ್ಟಿತನಕ್ಕೆ ಸರಿಯಾದ ರುಚಿ,,,
ಅವಳು ಬೇಯಿಸಿದ ಸಾರಿಗಿದೆಯೆಂದು,,,

ಬೆಳಗಾದರೆ ಆಕೆ ನೋಡಲು ಸಿಗುವುದಿಲ್ಲ,,,
ಅಲ್ಲೆಲ್ಲೋ ಕಾಲೇಜಿನ ಬೆಂಚಿನ ಮೇಲೆ,
ಪಾಠದ ಒಳಹೊಕ್ಕು ಕುಳಿತುಬಿಡುತ್ತಿದ್ದಳು,,,,
ಸಂಜೆ ಬಂದವಳೇ, ಮತ್ತದೇ ಮೀನಿನ ಮೋಹಿಗಳಿಗೆ
ಉಣಬಡಿಸುತ್ತಿದ್ದಳು,,,,,

ಅದೆಷ್ಟೋ ಮೀನುಗಳು, ಅವಳಿಗಾಗಿ ಜೀವ ತೆತ್ತವು,,,
ಅವೆಲ್ಲವುಗಳ ನೆನಪಲ್ಲೀಗ,, ಕಡಲ ತಡಿಯಲ್ಲೆ
ಶಾಲೆ ತೆರೆದಿದ್ದಾಳೆ,,,,,
ಮೀನು ವಾಸನೆಯ ಮಕ್ಕಳಿಗೆ ಅವಳೇ ಗುರು,,,,
ಮೀನುಗಳು ಸ್ವರ್ಗ ಸೇರಿವೆ,,,,,,

-GK Naveen kumar

Advertisements
7 ಟಿಪ್ಪಣಿಗಳು
  1. Disha gulvady permalink

    Life is a celebration when we celebrate each silly things. You have been enjoyed even the taste of fish curry also.. every heart sings a song which is incomplete ,until a pen trys to put it in words.

    Liked by 1 person

  2. ಸಖತ್ತಾಗಿ ಬರಿತೀರಿ ಕಂಡ್ರಿ. ಓದುತ್ತಿದ್ದರೆ ಮನಸ್ಸಿನಲ್ಲಿ ಅಚ್ಚಾಗಿಬಿಡುವಷ್ಟು!

    Liked by 1 person

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: