Skip to content

ಹಾಲಿನ ಹುಡುಗಿಯ ಮೋಡ

ಡಿಸೆಂಬರ್ 4, 2015

ಆಕಾಶಕ್ಕೆ ಕೈ ಹಾಕಿ,
ಮೋಡಗಳನ್ನು ತಿನ್ನಬೇಕೆನ್ನುವ ತವಕ,
ಚೆನ್ನೈ ನ ಹಾಲು ಮಾರುವ ಹುಡುಗಿಯ ಕಣ್ಣಲ್ಲಿ,

ಮೋಡದ ಬಿಳಿ ಬಿಳಿ ಹಾಸಿಗೆಯಲ್ಲಿ
ಮಲಗಿ ನಿದ್ರಿಸಿ,
ಅದರ ಪರಿಮಳವನ್ನು ಆಸ್ವಾದಿಸುವ ಕನಸು,
ಅವಳಿಗೆ,,,

ಕೆನ್ನೆ ಮೇಲೆ, ಅರಿಶಿನದ ಬದಲಿಗೆ,
ಮೋಡದ ಚೂರುಗಳನ್ನು ಉಜ್ಜಿಕೊಳ್ಳಬೇಕೆನ್ನುವ,
ತುಂಬು ಹಂಬಲ,

ವರ್ಷಪೂರ್ತಿ ಹಾಲು ಮಾರಿದರೂ,
ಅದರ ರುಚಿಯನ್ನು ಸವಿಯಲಾಗಲಿಲ್ಲ ಎಂಬ ಖೇದವಿಲ್ಲ,
ಅವಳಿಗೆ ಮೋಡದ ಮೇಲೆ ಮಲಗುವ ಚಿಂತೆ ಮಾತ್ರ,,,

ಸದಾ ಮೋಡಗಳ ಕನಸಲ್ಲಿ,
ಆಕಾಶವನ್ನು ಗೆಳೆಯನನ್ನಾಗಿ ಮಾಡಿಕೊಂಡಿದ್ದಳು,
ಮೌನ-ಮೌನ ವಾಗಿ, ಬಹಳ ಮಾತಾಡುತ್ತಿದ್ದಳು
ಆಕಾಶದ ಜೊತೆ.

ಕೆನ್ನೆ ಹೊಳಪುಗೊಳ್ಳುವ ವಯಸ್ಸಲ್ಲಿ,
ಕಿಲುಬು ಕಾಸಿಗೆ, ಬಾಲ್ಯವನ್ನು ಬಲಿಕೊಟಿದ್ದಳಾಕೆ.
ಹೊಂಬೆಳಕಿಗೆ ಆಕೆಗೆಂದು ಇದ್ದದ್ದು, ಬರಿಯ ಆಕಾಶ ಮತ್ತು ಮೋಡ,,,

ಅವಳ ಹಂಬಲಕ್ಕೆ ಕರಗಿ,
ಮೋಡ ಕರಗಿ, ಧಾರಾಕಾರವಾಗಿ ಸುರಿದು ಅವಳನ್ನು ಅಪ್ಪಿತ್ತು,,,,,
ಚೆನ್ನೈ ನಗರ, ಅವಳ ಮೋಡದ ಪ್ರೇಮದ ಉತ್ಕಟತೆಗೆ ಸಾಕ್ಷಿಯಾಗಿತ್ತು.

ಆಕೆಯ ಬಡತನಕ್ಕೆ, ಈಗ ಇಡಿ ನಗರವೇ ಸಾತು ನೀಡುತ್ತಿದೆ,,,,,
ಮುಂದಾದರೂ ಆಕೆ, ಮೋಡಗಳನ್ನು ಪ್ರೀತಿಸುವುದನ್ನು ತಡೆಗಟ್ಟಿ, ಶಾಲೆಗೇ ಕಳುಹಬೇಕಿದೆ.
ಅಲ್ಲಿ ಆಕೆಗೆ ಬದುಕನ್ನು ಪ್ರೀತಿಸಲು, ಕಲಿಸಿಕೊಡಬೇಕಿದೆ.

ಪ್ರಕೃತಿ ಕಾಸಿದ್ದವರ ಕೈಬೊಂಬೆ ಅಲ್ಲ ಎಂದು ಅವಳಿಂದಲೇ ತಿಳಿದಂತಿದೆ,,,,

Advertisements
8 ಟಿಪ್ಪಣಿಗಳು
  1. Different! !!! Very very different

    Liked by 1 person

  2. ‘ಅವಳ ಬಡತನಕ್ಕೆ ಸಾತ್ ನೀಡಿದ ನಗರ…’ ಪ್ರಕೃತಿಯ ಒಂದು ಮುಖದ ಅನಾವರಣದೊಂದಿಗೇ ಮತ್ತೊಂದರ ಚಿತ್ರ ಕಾಣಿಸುವ ಕವಿತೆ ಓದುಗನನ್ನು ತಟ್ಟುತ್ತದೆ.

    Liked by 1 person

  3. ಮಂದಾಕಿನಿಯ ಕಾಲ್ನಡಿಗೆ permalink

    ಚೆನ್ನಾಗಿದೆ. ಚೆನ್ನೈನ ಹೆಸರು ಗೌಣವಾಗಿದ್ದರೆ ಇನ್ನೂ ಸುಂದರವಾಗಿರುತ್ತಿತ್ತೇನೋ, ಅಲ್ಲಿನ ಪರಿಸ್ಥಿತಿ ನೆನೆದು ವಿಷಾದವೆನಿಸುತ್ತದೆ.

    Liked by 1 person

    • ಖಂಡಿತಾ, ನಿಮ್ಮ ಮಾತು ಸತ್ಯ,,,,,,,, ವಿಷಾದದ ಜೊತೆ ಅದಕ್ಕೆ ಕಾರಣಕರ್ತರು ಮಾನವರೆನಿಸಿಕೊಂಡ ನಾವುಗಳೇ ಎನ್ನುವ ಕೀಳರಿಮೆ ಕೂಡ ಇದೆ, ಪ್ರತಿಕ್ರಿಯೆಗೆ ಧನ್ಯವಾದಗಳು ಮನು,,,,,,,,,,

      Liked by 1 person

  4. Nayana G K permalink

    ಚಂದಾಮಾಮನತ್ತ ಕೈಚಾಚಿ ಬೊಗಸೆ ತುಂಬಾ ಬೆಳದಿಂಗಳು ತುಂಬಿಕೊಳ್ಳುವ ಬಯಕೆ ನನಗೆ…. ಆದರೆ ಮೋಡ ಅಡ್ಡ ಬರುತ್ತಿತ್ತು. ನಿಮ್ಮ ಹಾಲಿನ ಹುಡುಗಿಯ ಹಂಬಲಕ್ಕೆ ಕರಗಿದ ಮೋಡದ ಮರೆಯಲ್ಲಿನ ಸೂರ್ಯ, ಚಂದ್ರರು ಅವಳ ಬದುಕಿಗೆ ಬೆಳಕು ನೀಡಲಿ…

    Liked by 1 person

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: