Skip to content

ಸೋನುವಿನ ಚಪ್ಪಲಿ, ಹಾಗು ಮಾನವೀಯತೆ

ಡಿಸೆಂಬರ್ 23, 2015

ಬೆಂಗಳೂರಿನಲ್ಲಿ ಮಾನವೀಯತೆ ಸತ್ತೇ ಹೋಗಿದೆ ಎಂಬ ಅನೇಕರ ವಾದಗಳಿಗೆ ವ್ಯತಿರಿಕ್ತವಾಗುವ ವಿಷಯವೊಂದನ್ನು ಸೋನು ನಿನ್ನೆ ಹೇಳಿದಳು.

ಮೊನ್ನೆ ಸೋನು, ಬೆಂಗಳೂರಿನ ಯಾವುದೊ ಬಸ್ ಸ್ಟಾಪಿನಲ್ಲಿ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದಳಂತೆ, ಅನೇಕರೊಳಗೊಂದಾಗಿದ್ದರೂ, ಅಲ್ಲೇ ಇದ್ದ ಮಾನವ ಪ್ರಾಣಿಗಳೆಲ್ಲ ಅಪರಿಚಿತರಂತೆ, ಕಿವಿಗೆ ಏನೋ ಸಿಕ್ಕಿಸಿಕೊಂಡು, ಮೊಬೈಲ್ ಲೋಕದಲ್ಲಿ ಮುಳುಗಿದ್ದರಂತೆ, ಆಗಲೇ ಬಂದ “ಬೀ ಎಮ್ಮಾಟಿಸಿ” (ಬಿ ಎಂ ಟಿ ಸಿ) ಬಸ್ಸಿಗೆ ಜನರ ನೂಕು-ನುಗ್ಗಲು ಶುರುವಾಯಿತಂತೆ, ಸೋನು ಆಫೀಸಿಗೆ ಹೋಗುವ ಗಡಿಬಿಡಿಯಲ್ಲಿ, ಬಸ್ಸು ಹತ್ತಲು ಓಡಲಾರಂಭಿಸಿದಳಂತೆ, ಅವಳ ಜೊತೆಯಲ್ಲಿ ರೇಸಿಗೆ ಬಿದ್ದವರಂತೆ ಎಲ್ಲರೂ ಓಡುತ್ತಿದ್ದರಂತೆ, (ಬಸ್ ಸ್ಟಾಪಿನಿಂದ ಹತ್ತು ಮೀಟರ್ ದೂರ ನಿಲ್ಲುವ ಬಿ ಎಂ ಟಿ ಸಿ ಗೆ, ಓಡದೆ ಹತ್ತಲು ಸಾಧ್ಯವೆ ಇಲ್ಲ ಅಲ್ವ) ಹಾಗೆ ಓಡುತ್ತಾ ಸೋನು ಬಸ್ಸು ಹತ್ತುವಾಗ ಆಕೆಯ ಚಪ್ಪಲಿ ಜಾರಿ ಬಸ್ಸಿನಿಂದ ಕೆಳಗೆ ಬಿದ್ದು ಹೋಯಿತಂತೆ. ಜನರ ನೂಕು ನುಗ್ಗಲಿನಲ್ಲಿ, ತನ್ನ ಚಪ್ಪಲಿ ಜಾರಿ ಕೆಳಗೆ ಬಿದ್ದಿದುದರಿಂದ ಹಿಂತಿರುಗಿ ಕೆಳಗೆ ಇಳಿಯುವ ಹಾಗೆ ಇರಲಿಲ್ಲವಂತೆ, ಕಂಡಕ್ಟರ್ ಗೆ ಹೇಳಿದರೆ ಅವರು ಕ್ಯಾರೆ ಅನ್ನುವುದಿಲ್ಲ ಎಂಬ ಅರಿವಿದ್ದ ಸೋನು, ಒಂದು ಕ್ಷಣ ಗಾಬರಿ ಬಿದ್ದಳಂತೆ, ಅಯ್ಯೋ ಚಪ್ಪಲಿ ಹೋಯ್ತಲ್ಲ ಏನಪ್ಪಾ ಮಾಡೋದು ಎಂಬ ವ್ಯಥೆಯಲ್ಲಿದ್ದಾಗಲೇ, ಬಸ್ಸು ಹತ್ತಲು ತನ್ನ ಸರದಿಗಾಗಿ ಕಾಯುತ್ತಿದ್ದ ಮಧ್ಯ-ವಯಸ್ಸಿನ ಮಹಿಳೆಯೊಬ್ಬರು, ಸೋನುವಿನ ಚಪ್ಪಲಿಯನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ತಂದು ಸೋನುವಿಗೆ ಕೊಟ್ಟರಂತೆ. ಈ ಘಟನೆಯ ನಂತರ ಸೋನು ಬಹಳ ಭಾವುಕಳಾಗಿದ್ದಳು.

ಬಸ್ಸಿನ ರಶ್ಶಿನಲ್ಲಿ ಗೊತ್ತಾಗದೆ ಸ್ವಲ್ಪ ಚಪ್ಪಲಿ ತಾಗಿದರೆ, ಮಹಾ ಮೈಲಿಗೆ ಆಯಿತು ಎಂಬಂತೆ ಕಣ್ಣು ಕುಕ್ಕುವ ಜನರ ಎದುರು ಆ ಮಹಿಳೆ, ಕಂಗೊಳಿಸುವ ಅಮೂರ್ತರೂಪದಂತೆ ಕಂಡುಬಂದಿದುರಲ್ಲಿ ಯಾವುದೇ ಉತ್ಪ್ರೇಕ್ಷೆ ಇಲ್ಲ,
ಈ ಘಟನೆಯನ್ನು ನನಗೆ ಹೇಳುತ್ತ ಸೋನು, ಆ ಮಹಿಳೆಯನ್ನು ನೆನೆದು ಉಲ್ಲಸಿತಳಾಗಿದ್ದಳು, ಒಳ್ಳೆತನದ ಪ್ರಭಾವ, ಅದರ ವಲಯದಲ್ಲಿ ಬರುವ ಎಲ್ಲರಿಗೂ ತಟ್ಟುತ್ತದೆ, ಅಲ್ಲದೇ ಆ ಒಳ್ಳೆತನವನ್ನು ನೆನೆದಾಗಲೂ ಮನಸ್ಸು ಉಲ್ಲಾಸಿತವಾಗುತ್ತದೆ. ಬೆಂಗಳೂರಿನಲ್ಲಿ ಮತ್ತಷ್ಟು ಮಾನವೀಯತೆ, ಕರುಣೆ ಹುಟ್ಟಲಿ,,,

ನಾವು ಮತ್ತೆ ಮಾನವರಾಗೋಣ.

-ಜಿ ಕೆ ನ

Advertisements
7 ಟಿಪ್ಪಣಿಗಳು
 1. ಎರಡು ದಿನಗಳ ಹಿ೦ದೆ.

  Liked by 1 person

 2. ಎರಡು ದಿನಗಳ ಹಿಂದೆ ಇಂಥಾದ್ದೆ ಅನುಭವ ನನಗೂ ಆಯಿತು. . ಅವಸರದಲ್ಲಿ ಹೋಟೆಲೊಂದರ ಟೇಬಲ್ ಮೇಲೆಯೇ ಬಿಟ್ಟು ಹೋಗಿದ್ದೆ. ಹಣ, ಚಿನ್ನದ ಓಲೆ, ATM ಕಾರ್ಡ್ ಗಳು , license ಎಲ್ಲವೂ ಅದರಲ್ಲಿಯೇ ಇದ್ದವು.
  ಪರ್ಸ್ ಕಳೆದು ಹೋದದ್ದು ನನ್ನ ಗಮನಕ್ಕೆ ಬಂದದ್ದು ಮರುದಿನ ಆಫೀಸಿಗೆ ಹೊರಡುವಾಗಲೇ. . ನನ್ನ ಬೇಜವಾಬ್ದಾರಿತನಕ್ಕೆ ಮನಸ್ಸಿನಲ್ಲೇ ನೊಂದುಕೊಂಡು
  ಮತ್ತೊಮ್ಮೆ ಆ ಹೋಟೆಲ್ ಕ್ಯಾಷಿಯರ್ ನ ಬಳಿ ವಿಚಾರಿಸಲು ಹೊರಟೆ. ಬಹಳ ಮಂದಿ ಬಂದು ಹೋಗುವ ಸ್ಥಳವಾದ್ದರಿಂದ ಪರ್ಸ್ ಮತ್ತೆ ಸಿಗಬಹುದು ಎಂಬ ನಂಬಿಕೆ ಇರಲಿಲ್ಲ. ಆದರೂ ಒಮ್ಮೆ ಕೇಳಿ ನೋಡೋಣ ಎಂದು ಕೇಳಿದೆ. . ಅದನ್ನು ಜೋಪಾನವಾಗಿ ತೆಗೆದಿಟ್ಟಿದ ಕ್ಯಾಷಿಯರ್ ನನಗೆ ಹಿಂತಿರುಗಿಸಿದರು. ಮಾನವೀಯತೆ, ಒಳ್ಳೆಯತನ ಇನ್ನೂ ನಮ್ಮ ಜನರಲ್ಲಿ ಬದುಕಿದೆ ಎಂದು ನೆನಪಿಸದ
  ಅವರಿಗೆ ಧನ್ಯವಾದ ಹೇಳುತ್ತಾ ಆಫೀಸಿನತ್ತ ಹೆಜ್ಜೆ ಇಟ್ಟೆ.

  Liked by 1 person

 3. ಎರಡು ದಿನಗಳ ಹಿಂದೆ ಇಂಥಾದ್ದೆ ಅನುಭವ ನನಗೂ ಆಯಿತು. . ಅವಸರದಲ್ಲಿ ಪರ್ಸ್ ಅನ್ನು ಹೋಟೆಲೊಂದರ ಟೇಬಲ್ ಮೇಲೆಯೇ ಬಿಟ್ಟು ಹೋಗಿದ್ದೆ. ಹಣ, ಚಿನ್ನದ ಓಲೆ, ATM ಕಾರ್ಡ್ ಗಳು , license ಎಲ್ಲವೂ ಅದರಲ್ಲಿಯೇ ಇದ್ದವು.
  ಪರ್ಸ್ ಕಳೆದು ಹೋದದ್ದು ನನ್ನ ಗಮನಕ್ಕೆ ಬಂದದ್ದು ಮರುದಿನ ಆಫೀಸಿಗೆ ಹೊರಡುವಾಗಲೇ. . ನನ್ನ ಬೇಜವಾಬ್ದಾರಿತನಕ್ಕೆ ಮನಸ್ಸಿನಲ್ಲೇ ನೊಂದುಕೊಂಡು
  ಮತ್ತೊಮ್ಮೆ ಆ ಹೋಟೆಲ್ ಕ್ಯಾಷಿಯರ್ ನ ಬಳಿ ವಿಚಾರಿಸಲು ಹೊರಟೆ. ಬಹಳ ಮಂದಿ ಬಂದು ಹೋಗುವ ಸ್ಥಳವಾದ್ದರಿಂದ ಪರ್ಸ್ ಮತ್ತೆ ಸಿಗಬಹುದು ಎಂಬ ನಂಬಿಕೆ ಇರಲಿಲ್ಲ. ಆದರೂ ಒಮ್ಮೆ ಕೇಳಿ ನೋಡೋಣ ಎಂದು ಕೇಳಿದೆ. . ಅದನ್ನು ಜೋಪಾನವಾಗಿ ತೆಗೆದಿಟ್ಟಿದ ಕ್ಯಾಷಿಯರ್ ನನಗೆ ಹಿಂತಿರುಗಿಸಿದರು. ಮಾನವೀಯತೆ, ಒಳ್ಳೆಯತನ ಇನ್ನೂ ನಮ್ಮ ಜನರಲ್ಲಿ ಬದುಕಿದೆ ಎಂದು ನೆನಪಿಸದ
  ಅವರಿಗೆ ಧನ್ಯವಾದ ಹೇಳುತ್ತಾ ಆಫೀಸಿನತ್ತ ಹೆಜ್ಜೆ ಇಟ್ಟೆ.

  Liked by 1 person

 4. Nayana permalink

  Tumba olleya maatu helidiri Naveen avare…. Yellaroo avara badukinalli olleyatanvannu meredare chennagiruttade.

  Liked by 1 person

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: