Skip to content

ಮತ್ತೆ ನಗುತ್ತಿದೆ ಕಡಲು

ಫೆಬ್ರವರಿ 5, 2016

ಕೇರಳದ ಕಡಲ ಅಲೆಗಳ ಮೇಲೆ
ಅವಳ ಹೆಜ್ಜೆ ಗುರುತು,
ನನ್ನ ಹೃದಯವನು ಅವಳು ಕದ್ದು
ನಡೆದದ್ದು ಸಮುದ್ರದ ಮೇಲೆ.

ಪ್ರತಿ ಅಲೆಯ ಬಡಿದಾಟದಲಿ
ನನ್ನ ಪ್ರೇಮ ತಲ್ಲಣ,,,,,,,,
ಕಂಡು ಕೇಳರಿಯದ ಸಂಗೀತ
ಪಿಸುಗುಟ್ಟುತ್ತಾಳೆ ಆಗಾಗ ನನ್ನ ಕಿವಿಯಲಿ,

ಸದಾ ಅವಳ ಕಾಯುವಿಕೆಯೇ
ನನ್ನೊಲವಿನ ಬದುಕು,
ಅವಳು, ನನ್ನ ಕೆನ್ನೆಯ ಪಕ್ಕ
ತುಟಿ ನಿಲ್ಲಿಸಿದರೆ,
ಅಬ್ಬಾ ಉಸಿರು ಕಟ್ಟುವ ಮೌನ,

ಕಾಲ್ಬೆರಳಲಿ ಅವಳು ಹಾಡುತ್ತಾಳೆ,
ನಾನು ಕಣ್ಣಲ್ಲೇ ಕೇಳುತ್ತೇನೆ,
ಕಿವಿ ಹೊರ ಪ್ರಪಂಚಕ್ಕೆ ಕುರುಡಾಗಿದೆ,
ನಮ್ಮ ಪ್ರೇಮವೀಗ ಕಣ್ಣುಬಿಡುತ್ತಿದೆ.

ಸ್ವರ್ಗದಲಿ ಒಂದಷ್ಟು ತಳಮಳ,
ಅಪ್ಸರೆ ನನ್ನನ್ನಪ್ಪಿದ್ದಾಳೆಂದು,
ಮುಗಿಬಿದ್ದೆವೆ ಕೋಗಿಲೆಗಳು
ಪ್ರಣಯಕ್ಕೆ ಅವುಗಳದ್ದೇ ಗಾನಗೋಷ್ಠಿ ಎಂದು,,,,,

ಸ್ವರಗಳೆಲ್ಲ ಹಾಡಾಗುತ್ತಿದೆ,,,,,,
ನಾನು ಇಲ್ಲೇ ಇದ್ದವನು,,,,,
ಅವಳ ಪಕ್ಕದಲ್ಲಿ ಕಳೆದುಹೋಗಿದ್ದೇನೆ,
ಎಲ್ಲಿರುವೆನೋ ನನಗೇ ಗೊತ್ತಿಲ್ಲ.

Advertisements
3 ಟಿಪ್ಪಣಿಗಳು
  1. Badarinath Palavalli permalink

    ಕಳೆದು ಹೋಗುವುದರಲ್ಲಿರೋ
    ಮಜ ಅಂತಿಂತದಲ್ಲ ಸಹೋದರ!

    Liked by 1 person

  2. ಕಲ್ಪನಾ ಜಗತ್ತೇ ಯಾವಾಗಲು ಸೊಗಸು.

    Liked by 1 person

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: