Skip to content

ನೀ ಬೇಗ ಬಂದರೆ,,,, ಮುಂದಿನ ಮಳೆಗಾಲ ನಮ್ಮದಾಗಬಹುದು

ಫೆಬ್ರವರಿ 15, 2016

ಹೇಯ್ ಚೆಲುವೆ,
ಅಲ್ಯಾಕೆ ಕದ್ದು ಇಣುಕುತಿರುವೆ?
ಇಗೋ ನೋಡಿಲ್ಲಿ, ಕನಸುಗಳ ಆಣೆಕಟ್ಟು ಕಟ್ಟಿದ್ದೇನೆ
ಹೃದಯದ ಭಾವಗಳ ಬೆರೆಸಿ,
ಬಾ ಇಲ್ಲಿ ಈಜಾಡು,

ಒಂದೊಮ್ಮೆ ನೀ ಇಲ್ಲಿ,
ತುಟಿಯ ಪಕ್ಕದ ಕೆನ್ನೆಗೆ, ಉಸಿರು ತಾಗಿಸಿದೆಯಲ್ಲ,
ಅಂದೇ, ನನ್ನ ಅಂಗಿಯ ಗುಂಡಿ ಬಿಚ್ಚಿ ಹೋಗಿ,
ಇದ್ದೊಂದು ಹೃದಯ ನಿನ್ನ ಪಾಲಾಗಿದೆ.

ಬರು ಬರುತ್ತಾ ವಯಸ್ಸಾದಂತೆ
ನಿನ್ನ ಮುಂಗುರುಳು ಉದುರಿ ಹೋಗಿ,
ನೀನು ಇನ್ನಷ್ಟು ಅಂದವಾಗಿ ಕಾಣುತ್ತಿರುವೆ,
ಕಿವಿಗೆ ಹಾಕಿದ ಓಲೆ, ನಿನ್ನನು ಚುಂಬಿಸಲು
ಕೆನ್ನೆಗೆ ಹಾರಲು ತಯಾರಾಗಿದೆ.

ನಿನ್ನ ಕೈಯ ಅಂದಕೆ,
ಮೆಹಂದಿ ನಾಚಿ ನೀರಾಗಿ,
ಬಣ್ಣಗಳ ಸೂರೆಗೊಳಿಸುತ್ತಿದೆ.
ನಿನ್ನ ಹಿಂಬದಿಯಲ್ಲಿ ಸೂರ್ಯ ಮಂಕಾಗಿದ್ದನೆ
ನೀನೆ ಇಷ್ಟೊಂದು ಹೊಳೆವಾಗ,

ನಿನ್ನೊಲವಿಗೆ,
ಕೊಡಚಾದ್ರಿಯ ಹಸಿರು ಸೀರೆಯನು,
ತಂದು ಉಡಿಸಬೇಕೆನಿಸುತ್ತಿದೆ,
ನೋಡಿದಷ್ಟೂ ನೋಡುತ್ತಾ,,,,,
ಕಿಲ ಕಿಲ ನಗು ಕೇಳುತ್ತಾ,,,,,
ಜಲಪಾತದ ತುದಿಯಿಂದ ಹಾರಿಬಿಡಲೇ
ಎನಿಸುತ್ತಿದೆ,,,,,,

ಚೆಲುವೆ,,,,,,
ಈ ಶತಮಾನದಲ್ಲೂ ನಾಚುತ್ತಿರುವೆಯಲ್ಲ ನೀನು,
ಅದೇ ನನ್ನ ಹೃದಯವನು ಕದ್ದದ್ದು,

ನೀ ಬೇಗ ಬಂದರೆ,
ಮುಂದಿನ ಮಳೆಗಾಲ ನಮ್ಮದಾಗಬಹುದು

Advertisements
3 ಟಿಪ್ಪಣಿಗಳು
  1. Badarinath Palavalli permalink

    ಬರ್ತಾರೆ ಬರ್ತಾರೆ, ಅವರು ಈ ಶತಮಾನದ ಒಲವ ದೇವತೆಯಾಗುತ್ತಾರೆ… just wait…

    Liked by 1 person

  2. ದಗೆ ಜೋರಾಗಿದೆ. ಮಳೆಗಾಲ ಬೇಗ ನಿಮ್ಮದಾಗಿಸಿಕೊಳ್ಳಿ.

    Liked by 1 person

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: