Skip to content

ದಿಶಾಳ ಬರಹಗಳು

ಮಾರ್ಚ್ 20, 2016

ನಾನು ಮತ್ತು ಸೀರೆ

ಹೆಣ್ಣು ಮಕ್ಕಳಿಗೆಲ್ಲ ಮೊದಲ ಬಾರಿ ಸೀರೆ ಉಡುವುದು ವಿವರಿಸಲಾಗದ ಅನುಭವ. ಸೀರೆಯ ಜೊತೆ ಒಂದಿಷ್ಟು ನಾಚಿಕೆ ಉಚಿತವಾಗಿ ಬರುತ್ತದೆ. ಚಿಕ್ಕದಿರುವಾಗ ದೊಗಳೆ ಅಂಗಿಯ ಮೇಲೆಯೇ ಅಮ್ಮನ ಸೀರೆಯನ್ನ ಕದ್ದು ಉಟ್ಟು ಕನ್ನಡಿ ಮುಂದೆ ನಿಲ್ಲುತ್ತಿದ್ದೆ . ಆದರೆ ಯಾವ ಕಡೆ ಸೀರೆ ಸೆರಗು ಹಾಕಬೇಕು ಎಂಬುದೇ ದೊಡ್ಡ ಗೊಂದಲ. ಅಪ್ಪಿ ತಪ್ಪಿ ಯಾರಾದರೂ ಕಂಡು ಬಿಟ್ಟರೆ ಅಯ್ಯೋ ಹೇಳಲಾಗದ ನಾಚಿಕೆ. ಉಟ್ಟು ಅಭ್ಯಾಸವಾದ ನಂತರ ಅಮ್ಮನೆದುರೇ ಹೋಗಿ ನಿಂತಾಗ ಅಯ್ಯೊ ನನ್ ಮಗಳು ಹಂಗ್ಸಾದ್ಲಲ್ಲ ಎಂದು ದೃಷ್ಟಿ ತೆಗೆಯುತ್ತಿದ್ದಳು. ಸೀರೆಯುಟ್ಟುಕೊಳ್ಳುವುದು ನನ್ನ ಆಟಕ್ಕೂ ಲಗ್ಗೆ ಇಟ್ಟಿತು. ಆಗೆಲ್ಲ ಅಣ್ಣ, ಬೆಕ್ಕು ,ನಾಯಿ ಮಾತ್ರವಲ್ಲದೆ ಮನೆಯಲ್ಲಿರುವವರೆಲ್ಲ ನನ್ನ ಜೊತೆ ಆಟಕ್ಕೆ ಬರಬೇಕು ಎಂದು ಹಟ ಹಿಡಿಯುತ್ತಿದ್ದೆ. ಸಂಜೆಯ ಹೊತ್ತಿಗೆ ಪುರುಸೊತ್ತಿನಲ್ಲಿರುತಿದ್ದ ಅಜ್ಜ ಶಾಲೆ ಬಿಟ್ಟು ಬಂದ ನನಗೆ ಸದಾ ಆಟವಾಡಲು ಸಿಗುತ್ತದ್ದರು. ತಲೆಗೊಂದು ಮಂಡಾಳೆ ಹಾಕಿಕೊಂಡು ಸೊಂಟ ತಿರುಗಿಸುತ್ತಾ ಬುಟ್ಟಿ ಹೊತ್ತುಕೊಂಡು ಮೀನು ಮಾರುವ ಹೆಂಗಸಾಗುತ್ತಿದ್ದೆ. ಮೀನು ಬೇಕೇ? ಮೀನು ಬೇಕೇ? ಎಂದು ಅಜ್ಜನನ್ನು ಮೀನು ಕೊಂಡುಕೊಳ್ಳುವಂತೆ ಪುಸಲಾಯಿಸುತ್ತದ್ದೆ. “ಎಂತ ಮೀನ್ ಇತ್ತೆ?” ಎಂದು ಅಜ್ಜ ಪ್ರಶ್ನಿಸುತ್ತಿದ್ದರು. ಬಂಗಡೆ, ಬೈಗೆ ,ನಂಗು ಅಂತ ನನಗೆ ಗೊತ್ತಿದ್ದ ಹೆಸರೆನ್ನೆಲ್ಲ ಹೇಳುತ್ತಿದ್ದೆ ಅಜ್ಜನಿಗೆ ನನಗೆ ಅಷ್ಟೆಲ್ಲ ಮೀನಿನ ಹೆಸರು ಗೊತ್ತಲ್ಲ ಎನ್ನುವುದೇ ಅಚ್ಚರಿ. ಅಜ್ಜ ನನ್ನ ಮೀನು ವ್ಯಾಪಾರಕ್ಕಿದ್ದ ಏಕೈಕ ಗಿರಾಕಿ. ನಾ ಹೇಳಿದ ದರ ಅವರ್ಯಾವತ್ತು ಕೊಟ್ಟವರೇ ಅಲ್ಲ. ಸೀರೆ ಉಡುವುದೆ ಆಟವಾದ ಮೇಲೆ ಮೀನು ವ್ಯಾಪಾರಕ್ಕೂ ಸೀರೆಯುಟ್ಟುಕೊಂಡೆ ಬರುತ್ತಿದ್ದೆ. ಅಜ್ಜ ದೃಷ್ಟಿ ತೆಗೆಯುತ್ತಿದ್ದಳು. ನನಗೆ ತುಂಬ ಆಟವಾಡಬೇಕು ಎಂಬ ಆಸೆ. ಆದರೆ ಅಜ್ಜನಿಗೆ ಸರಿಯಾಗಿ ಕಿವಿ ಕೇಳಿಸುವುದಿಲ್ಲವಾದ್ದರಿಂದ ಕೂಗಿ ಕೂಗಿ ಗಂಟಲೇ ಬಿದ್ದು ಹೋಗುತ್ತಿತ್ತು. ದಿನಕ್ಕೊಮ್ಮೆ ಸೀರೆಯುಟ್ಟು ಅಜ್ಜನೊಂದಿಗೆ ಮೀನು ಮಾರುವ ಆಟವಾಡದಿದ್ದರೆ ನನಗೆ ತಿಂದ ಅನ್ನ ಅರಗುತ್ತಿರಲಿಲ್ಲ .. ಈಗ ಬಾಲ್ಯ ಕಳೆದುಹೋಗಿದೆ. ಈಗಲೂ ಆಗಾಗ ಅಜ್ಜಯ್ಯ ಮೀನು ಬೇಕಾ? ಎಂದು ಕೇಳುತ್ತನೆ ಆದರೆ ಸೀರೆ ಉಡುವುದುಲ್ಲ .ಅಜ್ಜನ ಕಿವಿ ಈ ದೇಶವನ್ನೆ ದಾಟಿರುವುದರಿಂದ ಸ್ವಲ್ಪ ಕಷ್ಟವಾಗುತ್ತದೆ ….ಬದುಕಿನ ಸಣ್ಣ ಪುಟ್ಟ ಸಂಗತಿಗಳಲ್ಲೂ ಅದೆಷ್ಟು ಖುಷಿ ಇರುತ್ತದೆ …ಈಗ ಸೀರೆಯುಟ್ಟುಕೊಂಡು ಕೋಣಿಯಿಂದ ಹೊರಗೆ ಬರುವುದಕ್ಕೂ ನಾಚಿಕೆ, ಸೀರೆಯುಟ್ಟು ನಡೆಯುವ ಕಷ್ಟ, ಸೀರೆಯುಡಿಸುವುದಕ್ಕೆಂದು ಬರುವ ಹೆಂಗಸರ ಮಧ್ಯೆ ಹೇಳಲಾಗದ ನಾಚಿಕೆ., ಇದೆಲ್ಲದರಲ್ಲೂ ಅದೇನೋ ಖುಷಿ , ಸುಖ ಇರುತ್ತದೆ….

************************************
ಚಂದಿರನ ಹಿಂದೆ ಅಡಗಿದ್ದಾನೆ ಅವನು
ಬೊಗಸೆ ತುಂಬ ನಕ್ಷತ್ರಗಳ ಹಿಡಿದು …….
ಬೆಳದಿಂಗಳಲ್ಲೂ ಅವನುಸಿರ ಶಾಖ
ಬೇಲಿಯ ಹೂವಿಗೂ ಅವನದ್ದೆ ಪರಿಮಳ….
ನಾ ನಕ್ಕಾಗ ಇಣುಕುತ್ತಾನೆ
ಹೆಣ್ತನವೇ ಕರಗುತ್ತಿದೆ ಆ ತುಂಟ ನೋಟಕ್ಕೆ …
ಸಾವಿರದ ಭಾವಗಳು ಕಾಡಿ ಕಟ್ಟಿರುವ
ಅರಮನೆಗೆ ನಾ ರಾಜಕುಮಾರಿ…
ಹೀಗೆ ಕೇಳದ ಹಾಡಿಗಾಗಿ ಮಿಡಿಯುವ ಭಾವಕ್ಕೆ ,
ಗುನುಗುವ ರಾಗಕ್ಕೆ ಏನೆನ್ನಲಿ ನಾ???

************************************

ಚಂದಿರ ಬಸುರಿ
ತಿಂಗಳು ತುಂಬುತ್ತಿದೆ
ಕೆಲವೇ ದಿನದಲ್ಲಿ ಹೆರಿಗೆಯಾಗಬಹುದು

************************************

(ಚಿಕ್ಕ ಗೆಳತಿ ದಿಶಾಳ ಬರಹಗಳು ಮನಮುಟ್ಟುವಂತಿದ್ದವು,,,,
–ಬರಹಗಳನ್ನು ಹಂಚಿಕೊಳ್ಳಲು ಒಪ್ಪಿದ್ದಕ್ಕಾಗಿ ಧನ್ಯವಾದಗಳು ದಿಶಾ )

Advertisements
4 ಟಿಪ್ಪಣಿಗಳು
 1. ಅನಾಮಿಕ permalink

  Super momeory

  Liked by 1 person

 2. ದಿಶಾ permalink

  ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು ನವೀನ್ 😊

  Liked by 1 person

 3. ದಿಶಾ permalink

  ಖಂಡಿತಾ…..

  Liked by 1 person

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: