Skip to content

ನಾಚಿಕೆ ಇಲ್ಲದ ಸಾಲುಗಳು- 9

ಏಪ್ರಿಲ್ 27, 2016

ಸರಾಗವಾಗಿ ಮರ ಕಡಿದು,
ತಿರುಳು ತಿರುಳಾಗಿ ತಿರುಗಿಸಿ,
ಚಪ್ಪಟೆಯಾಗುವ ತನಕ ಒತ್ತಿ,
ಬಿಳಿಹಾಳೆಯಾಗುವ ವರೆಗೆ ಸಂಸ್ಕರಿಸಿ,

ಕೊನೆಗೆ ಅದರ ಮೇಲೆ,

“ಮರ ಉಳಿಸಿ” ಎಂದು ಬರೆಯುವ
ಮನುಜನ ಹುಂಬತನಕ್ಕೆ
ಅದೆಷ್ಟು ಮರಗಳು ಕಣ್ಣೀರಿಟ್ಟಿವೆಯೋ!!

*******************************************

ಕರ್ನಾಟಕದಲ್ಲಿ,
ಕಾವೇರಿ ಅಲ್ಲದೇ,
ಇನ್ನೂ ಅಧಿಕ ನದಿಗಳಿವೆ ಎಂದು
ಅನೇಕ ಬೆಂಗಳೂರಿಗರಿಗೆ ಗೊತ್ತಿಲ್ಲ

*******************************************

ಸತ್ತವರ ಶ್ರಾದ್ಧವನು,
ನದಿಯ ದಡದಲ್ಲಿ ಮಾಡಬಹುದು,,,
ನದಿಯೇ ಸತ್ತರೆ!
ಶ್ರಾದ್ಧ ಮಾಡುವುದೆಲ್ಲಿ ?

*******************************************

ವಸ್ತುಗಳನ್ನು ಮಾರುವುದು ಹೇಗೆಂದು ಕಲಿಸಲು
ಅನೇಕ ಕಾಲೇಜುಗಳಿವೆ,,,
ಕೊಳ್ಳುವಿಕೆಗೆ ಹೇಗೆಂದು ಕಲಿಯಲು
ಕಾಲೇಜನ್ನು ಯಾರು ತೆರೆಯಬಹುದು ?

*******************************************

ಪ್ರೇಮ ಕಾಮದ ವ್ಯತ್ಯಾಸ ಇಷ್ಟೇ,

ಮಗು ಎದೆ-ಹಾಲು ಕುಡಿಯುವುದು,
ಅಪ್ಪ _________________

*******************************************

ದೇವರು ಇದ್ದಾನೆ ಎನ್ನುವವರೂ,,,,,
ಹಾಗು
ದೇವರು ಇಲ್ಲ ಎನ್ನುವವರೂ,,,,,,,,
ಇಬ್ಬರೂ

ಈ ತಿಂಗಳ ಬಿಸಿಯಲ್ಲಿ ಬೆಂದಿದ್ದಾರೆ,

Advertisements
2 ಟಿಪ್ಪಣಿಗಳು
  1. ಕೆಲವು ಸಾಲುಗಳಿಗೆ ಜಗತ್ತನ್ನೇ ಬೆತ್ತಲು ಮಾಡುವ ಶಕ್ತಿಯಿದೆ ..

    Liked by 1 person

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: