Skip to content

ಹೆಣ್ಣು

ಮೇ 2, 2016

ಜಗದ ಪ್ರೇಮವನ್ನೆಲ್ಲ,
ತನ್ನ ಮೊಲೆಗಳ ಮೇಲೆ ಹೊತ್ತ
ಮಹಾತಾಯಿ ಹೆಣ್ಣು,

ಮಾಧಕತೆಯಲ್ಲಿ
ಮಧುರತೆಯನ್ನು ಬೆರೆಸಬಲ್ಲ
ಏಕೈಕ ಶಕ್ತಿ ಹೆಣ್ಣು,

ಕಣ್ಣಲ್ಲಿ ಕಾಣದೆ,
ಕೈಯಲ್ಲಿ ಮುಟ್ಟದೆ,
ಕರುಳಲ್ಲಿಯೇ ಜಗವರಿಯಬಲ್ಲವಳು ಹೆಣ್ಣು,

ಅಪಾರ ನೋವೊಳಗೆ
ಅಪರಿಮಿತ ಪ್ರೀತಿಕೊಡುವ,
ಅದ್ವೈತ ಮೂರ್ತಿ ಹೆಣ್ಣು,

ತನ್ನ ಮಡಿಲ ತಂಪಲ್ಲಿ,
ಪ್ರತಿ ಮಗುವ ಬದುಕನ್ನು
ಕಟ್ಟಿ ಕೊಟ್ಟವಳು ಹೆಣ್ಣು,

ನಗುವಿನ ಒಳಗೆ
ನಲ್ಮೆಯನು ಸೇರಿಸುವ
ನಕ್ಷತ್ರ ಕಣ್ಣವಳು ಹೆಣ್ಣು,

ಕವಿತೆಯ ಸಾಲುಗಳಿಗೆ
ಅರ್ಥವ ಒದಗಿಸುವ
ಭಾವಾರ್ಥ ಒಂದು ಹೆಣ್ಣು

ಬಿಸಿಲ ಬೇಗೆಯಲಿ
ರಸ್ತೆಯ ಬದಿಯಲ್ಲಿ
ನೆರಳು ನೀಡುವ ಮರ ಹೆಣ್ಣು,
(ಬದುಕಿನ ಪಯಣಕ್ಕೆ)

ಬರಿಯ ಕೆಂಪು ತುಟಿಯಲ್ಲಿ
ಇಡೀ ಭುವಿಯನ್ನು
ತಂಪಾಗಿಸಬಲ್ಲವಳು ಹೆಣ್ಣು,

ಪೆನ್ನು-ಪುಸ್ತಕವಿಲ್ಲದೆ
ಬದುಕಿನ ಪಾಠವನು
ಕಲಿಸಿ-ಕೊಡುವವಳು ಹೆಣ್ಣು,

ಪ್ರತಿ ಗಂಡಿನ
ಬದುಕಿನ ಸಾರಥಿ
ನಿಜವಾಗಿಯೂ ಒಂದು ಹೆಣ್ಣು,

ನಂಬಿದ ಕಣ್ಣುಗಳಿಗೆ
ರೆಪ್ಪೆಯಾಗಿ
ಬದುಕು ಸವೆಸುವವಳು ಹೆಣ್ಣು,

ಕನ್ನಡಿಯ ಒಳಗೆ
ಸಂಪೂರ್ಣ ನೋವನ್ನು ಕಟ್ಟಿಟ್ಟು
ಹೊರಗೆ ನಗುವವಳು ಹೆಣ್ಣು

ಅಕ್ಕಿಯ ಗಟ್ಟಿತನಕ್ಕೆ
ಅನ್ನದ ಮೃಧುತ್ವ ಕೊಡುವ
ಭಾವವೇ ಹೆಣ್ಣು,

ಮನದೊಳಗೆ ಅಲೆಗಳ ಸಾಗರ
ಹೊರಗೊಂದು ನಿಶಬ್ಧ ಸಮುದ್ರ,
ಎರಡೂ ಒಟ್ಟಿಗೆ ಒಂದು ಹೆಣ್ಣು,

ಸಂಸಾರದ ಕಣ್ಣಿಗೆ
ದೂರ ದೃಷ್ಟಿ
ಹೆಣ್ಣು,

ಅವನತಿಯ ಕೊನೆಯಲ್ಲಿ,
ಉನ್ನತಿಗೆ
ಹುಟ್ಟು ನೀಡುವವಳು ಹೆಣ್ಣು,

ಮನೆಯ ಚಾವಣಿಗೆ
ಮೇಲ್ಚಾವಣಿ
ಒಬ್ಬ ದಿಟ್ಟ ಹೆಣ್ಣು,

ಸಮಾಜದ ಸಂಸ್ಕೃತಿಗೆ
ಸರ್ಪಗಾವಲು
ಎಂದೆಂದಿಗೂ ಹೆಣ್ಣು,

ಇಂದಿನ ಆಧುನಿಕತೆಯಲ್ಲೂ
ಹೆಣ್ತನವ ಕಾಪಾಡಿಕೊಂಡ ಪ್ರತಿ ಹೆಣ್ಣಿಗೂ ನಮನ,,,,,,,,,,

Advertisements
4 ಟಿಪ್ಪಣಿಗಳು
  1. ಅಳುವ ಕಂಗಳ
    ಕಣ್ಣೀರು ಒರೆಸಿ
    ಧೈರ್ಯ ತುಂಬುವವಳುಹೆಣ್ಣು.

    ಜಗದ ಕಷ್ಟವೆಲ್ಲ
    ತನ್ನದೆಂದು ತಿಳಿದು
    ಪರರ ಕಷ್ಟಕ್ಕೆ ಆಗುವವಳು ಹೆಣ್ಣು.

    ಸೂಪರ ತಮ್ಮಯ್ಯಾ. ಹೆಣ್ಣನ್ನು ಅದೆಷ್ಟು ಗೌರವದಿಂದ ಕಂಡೆ. ಹಾಗೆ ಖುಷಿಯಲ್ಲಿ ನಾನೊಂದೆರಡು ಸಾಲು ಗೀಚಿದೆ. ಕವನ ಸೊಗಸಾಗಿದೆ.

    Liked by 1 person

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: