Skip to content

ಖಾಲಿ ಹೊಟ್ಟೆಯ ತುಂಬುವ ಹಸಿವು

ಮೇ 4, 2016

ಜಾಡಿಸಿ ಒದ್ದಿದೆ ನನ್ನೊಳಗಿನ ಮಾನವತೆ
ಮೊನ್ನೆ ಸುಮ್ಮನೆ ಒಂದಷ್ಟು ಅನ್ನದ ಅಗುಳನು
ಉಂಡೆಯಲ್ಲ ಎಂದು,

ಅಲ್ಲೆಲ್ಲೋ ಹಸಿದವನು ಸತ್ತನಂತೆ -ಪೇಪರಿನ ಸುದ್ದಿ,,,
ನನಗ್ಯಾಕೆ! ಯಾರು ಸತ್ತರೆ ಏನಂತೆ?- ನಾನೆಂಬ ಮಾನವ

ಹಸಿವಿಲ್ಲದ ತುಂಬು ಹೊಟ್ಟೆಗೆ
ಮತ್ತಷ್ಟು ತುಂಬಿಸಿ, ಕೊಬ್ಬು ಬೆಳೆಸಿದ ಕೆಟ್ಟತನಕ್ಕೆ
ನಾನೇ ಜವಾಬ್ಧಾರಿ,

ಬಸುರಿಯಾಗದ ಹೆಣ್ಣಿಗೆ ಮಾವಿನಕಾಯಿಯನು
ಅಕ್ಟೋಬರಿನಲ್ಲಿ ಕೇಳಿದರೂ ತಂದು ಕೊಡುವ ರಸಿಕ ಗಂಡು,
ರಸ್ತೆ ಬದಿಯ ನಾಯಿ ಮರಿಗೆ ಬಿಸ್ಕೆಟ್ಟನ್ನು
ಹಾಕದಷ್ಟು ಬಡವನಾಗಿದ್ದು—- ಎಷ್ಟೋ ವರ್ಷಗಳ ಹಳೇ ಕಥೆ

ಹೊಸ ಕಾರಿನ ದೂಳು ತೆಗೆಯಲು, ಲಕ್ಷ ಕೊಟ್ಟ ಪುಂಗನೊಬ್ಬ,
ತನ್ನ ಕಾರ್ಖಾನೆಯ ಕಾರ್ಮಿಕನು , ಒಂದು ಸಾವಿರ ಕೇಳಿದ್ದಕ್ಕೆ
ನಖಶಿಕಾಂತ ಉರಿದುಕೊಂಡನಂತೆ—- ನಿನ್ನೆ ಮೊನ್ನೆ ನಡೆದದ್ದು

ಸಾಫ್ಟ್-ವೇರಿನಲಿ ಮುಳುಗಿ, ಕಂಪ್ಯೂಟರಿನ ಪರದೆಯಲ್ಲಿ
ಮರದ ಚಿತ್ರ ಬಿಡಿಸಿ, ತನ್ನ ಮಕ್ಕಳಿಗೆ ತೋರಿಸಿದವ
ಬಿಸಿಲಿಗೆ ಎದೆಬಡಿದು, ಎ ಸಿ ರೂಮಿನಲಿ ಸತ್ತನಂತೆ- ಇಂದೇ ಆಗಿದ್ದು

ಹಸಿದವನ ಬಗ್ಗೆ ಬರೆಯಲು,
ಹೊಟ್ಟೆ ತುಂಬಿದ ನಾನು, ಎಂತಹ ವ್ಯಂಗ್ಯ,

ಹಸಿದವನು, ಹಸಿದೇ ಇದ್ದಾನೆ,
ಅಗೋ ಅಲ್ಲಿ ಬದಿಯಲ್ಲಿ,,,,,,,
ಒಂದಿನಿತು ಅನ್ನವಿಕ್ಕಲು ಕೈ ಜೋಡಿಸುವಿರಾ.

-ಜಿ ಕೇ ನ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: