Skip to content

ಮುಂದೊಂದು ದಿನ

ಮೇ 4, 2016

ಮಳೆಬಿಲ್ಲಿಗೆ ಬಾಣ ಹೂಡಿ
ಮನುಜನ ಕೊಲ್ಲುವ ತವಕ,
ಕಾಡಿನ ಅಂಚಿನ ಜಿಂಕೆಗೆ.

ನಗರದಲಿ ಬಲೆಹಾಕಿ,
ಮಾನವರನು ಸೆರೆಹಿಡಿಯುವ
ಭರವಸೆ ಸಾಗರದ ಮೀನಿಗೆ.

ಒಂದಿಂಚು ಕೊಕ್ಕಿನಲ್ಲಿ,
ಮಾನವನೆದೆಗೆ ಕುಕ್ಕುವ ಆಸೆ
ಆಗಸದ ಪಕ್ಷಿಗೆ.

ಸದಾ ಸ್ವಾರ್ಥಿಯಾದ ಮನುಜನಿಗೆ,
ಮನುಜಾಲಯ ನಿರ್ಮಿಸುವಾಸೆ
ಮೃಗಾಲಯದ ಹುಲಿಗೆ.

ಮುಂದೊಂದು ದಿನ ಹೀಗಾಗಬಹುದು

ಕಂಗೆಟ್ಟ ಭೂಮಿ, ದಿಕ್ಕೆಟ್ಟು ಸೊರಗುವಾಗ
ಎಲ್ಲಾ ರಾಜಕೀಯ ಪಕ್ಷಗಳು ಅಳಿದು
ಆಳುವ ಶಬ್ಧಕ್ಕೆ, ಅವನತಿ ಬಂದು
ಅಳಿಲೊಂದು ಶಾಂತತೆಯಿಂದ ಭೂಮಿಯನ್ನು ಮುನ್ನೆಡೆಸಬಹುದು.
***************************************************************
ಮೊನ್ನೆ ಭೂಮಿ ಹೀಗೆ ಹೇಳಿತಂತೆ,,,,,,,

ಆಧುನಿಕತೆಯ ಹೆಂಡ ಕುಡಿಯುತ್ತಾ
ಅಂಡು ಮೇಲೆ ಮಾಡಿ ಮಲಗಿರುವ
ಸ್ವೇಚ್ಚಾಚಾರದ ಮನುಜರೆ,
ಎದ್ದು ಸಿದ್ದರಾಗಿ ಸಾಯಲು,
ನಿಮ್ಮ ಸರದಿ ಮುಗಿಯಿತಿಲ್ಲಿ,

ಮನುಜಕುಲ ನಾಶವಾಗಿ
ಬೇರೆ ಜೀವಿಗಳು ಸ್ವಚ್ಚಂದವಾಗಿ ಬದುಕಿದರೆ ಸಾಕು,
ನನ್ನೊಡಲು ತಂಪಾಗುವುದು,

Advertisements
One Comment
  1. ಕಲ್ಪನೆಯ ಕಾವ್ಯದಲ್ಲಿ ವಾಸ್ತವದ ಸತ್ಯ 👌

    Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: