Skip to content

ಹೇ ಬೆಸ್ತರ ಹುಡುಗಿ, ಕಾಡಬೇಡ ನೀನು,

ಮೇ 20, 2016

ಹೇ ಬೆಸ್ತರ ಹುಡುಗಿ, ಕಾಡಬೇಡ ನೀನು,

ಪಾಂಡಿಚೆರಿಯ ಸಮುದ್ರದ ದಡದಲ್ಲಿ
ಹಳೆಯ ಚೂಡಿದಾರದಲ್ಲಿ
ಹೊಸದಾಗಿ ಮಿಂಚುತ್ತಿದ್ದ ನೀನು
ನನ್ನ ನೋಡಿ ನಾಚಿದ್ದೇಕೆ.

ಹೊಸ ಅಂಗಿ ಹಾಕಿ
ನಿನ್ನ ಪಕ್ಕ, ಹಳಬನಂತೆ ಕುಳಿತಿದ್ದಕ್ಕಾ!

ನಿನ್ನ ಗಾಳಕ್ಕೆ ಮೀನು ಬಿದ್ದಿತೋ ಇಲ್ಲವೋ
ನಾನಂತು ಬಿದ್ದೆ !

ನಿನ್ನ ಅಕ್ಕನ ಮೊಬೈಲ್-ನಲ್ಲಿ ನನ್ನ ಫೋಟೊ ಸೆರೆಹಿಡಿದೆಯಲ್ಲ,

ಅಷ್ಟೇ ಸಾಕಿತ್ತು

ಮತ್ತೆ ನಿನ್ನ ಎದೆಯಲ್ಲಿ ಯಾಕೆ ಸೆರೆ ಹಿಡಿದೆ?

ಪ್ರತೀ ಅಲೆಯ ಹೊಡೆತಕ್ಕೂ ನಾನು ಮುಖ ಕೊಟ್ಟು ನಿಂತಾಗ,
ನನಗೆ ನೋವಾಗುವುದೇನೊ ಎಂದು, ಒಳಗೇ ತಲ್ಲಣಿಸಿದೆಯಲ್ಲ, ಯಾಕೆ!
ಪ್ರೀತಿ ಗೀತಿ ಇತ್ಯಾದಿ! ಹಾ?

ನನಗೆ ಅರ್ಥವಾಗದ ನಿನ್ನ ತಮಿಳು
ನಿನಗೆ ಅರ್ಥವಾಗದ ನನ್ನ ಕನ್ನಡ,
ಆದರೂ ಮನಪೂರ್ತಿ ನಕ್ಕೆವೆಲ್ಲ,
ಏನಾದರೂ ಅರ್ಥವಾಯಿತಾ ನಿನಗೆ!
ನಾವು ನಕ್ಕಿದ್ದು ಯಾಕೆಂದು?

ಮೊದಲ ಬಾರಿ ನನಗೆ, ಬಾಷೆ ಬರದೇ ಮೂಕನಾಗಿ ಹೀಗೆ ಇರಬಹುದು ಎನಿಸಿದ್ದು

ಕಳ್ಳಿ ನೀನು,
ನಿನ್ನ ಮೀನು ಪರಿಮಳದ ಜೋಪಡಿಯನು
ನನ್ನ ಹೆಸರಿಗೆ ಬರೆಯುವ ಕಾತರದಲ್ಲಿದ್ದೆ,
ನಾನು ಅಲ್ಲೊಂದು ಪ್ರೇಮ ಮಂದಿರ ನಿರ್ಮಿಸಬಹುದೇನೋ ಎಂಬ ಆಸೆಯಲ್ಲಿ,

ಗೆಳೆಯನ ಬೈಕು‌ ಹತ್ತಿ
ನಾನು ನಿರ್ಗಮಿಸುವುದನು,
ಬಾಳೆಮರದ ಆಸರೆ ಹಿಡಿದು ಇಣುಕಿದೆಯಲ್ಲ
ಅದು ಸದಾ ನೆನಪಿರುವ ಚಿತ್ರ,

ಕಾಯುತ್ತಿರು ಅಲ್ಲೇ,
ಮತ್ತೆ ಬರುವೆ ನಾನು,
ನಿನ್ನ ಬಡತನ ನೀಗಿಸುವ ಮೀನಾಗಿ ಅಲ್ಲ,
ನಿನ್ನ ಹೃದಯ ಶ್ರೀಮಂತಿಕೆಯ ಪಾಲುದಾರನಾಗಿ.

ಅಲ್ಲಿಯವರೆಗು ಕನಸಲ್ಲಿ ಬಂದು ಕಾಡಬೇಡ
ಮಳೆಗಾಲ ಬೇರೆ,,,,

– ಜಿ ಕೆ ನ

Advertisements
4 ಟಿಪ್ಪಣಿಗಳು
  1. ಪಾಂಡೀಚೇರಿಯಲ್ಲಿ ಬಾಳೆ ಗಿಡ ಇದೇಯೆ? ಹುಡುಗಿ ಸಿಕ್ಕಳಲ್ಲ ಸಾಕಲ್ವ?

    Liked by 1 person

  2. ಮಳೆಗಾಲ ಬಂದರೆ‌ WordPress ತುಂಬಾ ಕವನಗಳ ರಾಶಿ..
    ತುಂಬಾ ಚೆನ್ನಾಗಿದೆ

    Liked by 1 person

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: