ದಿಶಾಳ ಕವಿತೆಗಳು
ದಿಶಾ ಬರೆದ ಕವಿತೆಗಳು, ಹೆಣ್ಣಿನ ನೈಜ ಸಂಗೀತವೊಂದು ಕೇಳುತ್ತದೆ ಈ ಸಾಲುಗಳಲ್ಲಿ
ಅಲ್ಲೆಲ್ಲೊ ಮಣ್ಣಲ್ಲಿ ಬಿದ್ದು
ಒದ್ದಾಡುತ್ತಿದ್ದ ಬೀಜಕ್ಕೆ
ಮೊದಲ ಮಳೆಗೆ ಸಿಕ್ಕಿ
ಮೊಳಕೆಯೊಡೆದ ಸಂಭ್ರಮ.
*******************
ಯಾವ ಕೆರೆಯಲ್ಲೂ ಮುಳುಗದೆ
ಮುಂಗಾರಿನಲ್ಲೇ ಮೀಯುವೆ ಎಂದು
ಮಳೆ ಕೋಗಿಲೆ ಕಾಯುತ್ತಿತ್ತು
*******************
ದುಖಃವಾದಾಗ ಅತ್ತು ಬಿಡಿ
ಮಳೆ ಬಂದು ಹೋದ ಆಕಾಶ
ತಿಳಿಯಾಗಿರುತ್ತದೆ.
*******************
ಮೊದಲ ಮಳೆಗೆ
ಪರಿಮಳಿಸುವ
ಮಣ್ಣು ,
ಮೊದಲ ಪ್ರೀತಿಯಲ್ಲಿ
ಮುಳುಗಿದ
ಹೆಣ್ಣು ,
ಎರಡೂ ಒಂದೇ.
******************
ಬಿಸಿಲ ತುಣುಕೊಂದು
ಸಿಂಗರಿಸಿಕೊಳ್ಳಲು
ಮಳೆ ಕನ್ನಡಿ ಹಿಡಿಯಿತು
ಬಿಸಿಲು ಮಳೆಬಿಲ್ಲಾಯಿತು.
*******************
ಗೊಸುಂಬೆಗಿಂತಲೂ ಬೇಗ
ಬಣ್ಣ ಬದಲಾಯಿಸುವ
ಸಂಜೆಯಾಕಾಶಕ್ಕೂ
ಹದಿ ವಯಸ್ಸಿನ ಮನಸ್ಸಿಗೂ
ಯಾವ ವ್ಯತ್ಯಾಸವಿಲ್ಲ.
*******************
ಗಾಳಿ ತಂಪಾಗಿದೆಯೆಂದು
ಎಲೆ ಚೊಟ್ಟು ಕಳಚಿಕೊಂಡರೆ
ನೆಲವೇ ಗತಿ.
*******************
ಭೂಮಿಯನ್ನು ಚುಂಬಿಸುವ
ಮೊಡದ ಬಯಕೆಗೆ
ನಡುವಿನ ಆಕಾಶ ಒದ್ದೆಯಾಯಿತು
********************
ಕರಿಮಣಿಯೆಂದರೆ ಅವನು ,
ಅವಳೆದೆಯ ಕನಸುಗಳನ್ನು
ಕದ್ದು ಪೋಣಿಸಿದ ಸರವಾಗಬೇಕು.
– ದಿಶಾ
ದಿಶಾ ಯಾರು?
LikeLiked by 1 person
ಪರಿಚಯದ ಪುಟ್ಟ ಹುಡುಗಿ, ಬಾಲ್ಯದಲ್ಲಿಯೇ
LikeLike
ಹೌದಾ.
LikeLiked by 1 person
ಬಾಲ್ಯದಲ್ಲಿಯೆ ಪುಸ್ತಕವನ್ನೂ ಬರೆದಿದ್ದಾಳೆ,
ಬಹಳ ಚೂಟಿ, ಹಾಗು ಸಾಹಿತ್ಯಾಸಕ್ತೆ,
ಸಾಹಿತ್ಯದ ಕೆಲವು ಪುರಸ್ಕಾರಗಳೂ ಆಕೆಗೆ ದೊರಕಿವೆ,
ಬಹಳ ಕುತೂಹಲಿ,,,,
ಅವಳಿಗೆ ಬ್ಲಾಗ್ ಇಲ್ಲದ ಕಾರಣ, ಹಾಗು ಕಾಲೇಜಿನ ಓದಿನ ಮದ್ಯ ಬ್ಲಾಗನ್ನು ಮಾಡುವ ಗೋಜಿಗೆ ಹೋಗದ ಕಾರಣ, ಅವಳ ಬರಹಗಳನ್ನು ಇಲ್ಲಿ ಹಾಕುತ್ತೇನೆ
LikeLike
ನನ್ನ Congratulations ಹೇಳು ಮತ್ತೆ☺
LikeLiked by 1 person
Yes, ಆಕೆ ಓದುತ್ತಳೆ ಇದನ್ನ, ಆಗ ತಲುಪುತ್ತದೆ ನಿಮ್ಮ ಹಾರೈಕೆ. 🙂
LikeLike
ಧನ್ಯವಾದ ಸಂಗೀತ ಅಕ್ಕ.
ನಿಮ್ಮ ಪ್ರೋತ್ಸಾಹವನ್ನ ಸದಾ ನೆನೆಯುತ್ತೇನೆ ನವೀನ್ 😊
LikeLiked by 1 person