Skip to content

“ಪಂಜುವಿನಲ್ಲಿ ಬಡಿದ ಹೃದಯಶಿವನ ಎದೆಬಡಿತ”

ಜೂನ್ 15, 2016

hrudayashiva <<——ಇಲ್ಲಿ ಡೌನ್ಲೋಡ್ ಮಾಡಿ

ಕಥೆ ಕವನ ಕಾದಂಬರಿ ಇತ್ಯಾದಿ ಸಾಹಿತ್ಯದ ಪ್ರಕಾರಗಳನ್ನು ಬಿಟ್ಟು, ಎಲ್ಲರಿಗೂ ಕಾಡುವುದು ಸಿನಿಮಾ ಹಾಡಿನ ಸಾಹಿತ್ಯ, ಸಿನಿಮಾ ಹಾಡು ಹೃದಯಗಳ ಮಿಡಿತಕ್ಕೆ ಸಂಬಂದಿಸಿದ್ದು,

ಕನ್ನಡದ ಸಿನಿಮಾ ಹಾಡಿನ ಸಾಹಿತ್ಯ ಎಲ್ಲ ಕಾಲದಲ್ಲಿಯೂ ಶ್ರೀಮಂತವೇ,

ಎದೆ ಭಾರವಾದಾಗ, ಖುಷಿಗೊಂಡಾಗ, ಕೋಪಗೊಂಡಾಗ, ನೊಂದಾಗ ಹೀಗೆ ಪ್ರತೀ ಭಾವಕ್ಕೂ ಸಾವಿರಾರು ಹಾಡುಗಳು ನಮ್ಮ ಜೊತೆ ಇರುತ್ತವೆ, ಹಾಡುಗಳು ನಮ್ಮ ಬದುಕಿನ ಅವಿಭಾಜ್ಯ ಅಂಗಗಳೂ ಹೌದು.

ಮೊದಲ ಮಳೆಯಲ್ಲಿ, ಎಂತಹ ಗಟ್ಟಿ ಮನಸಿನವನ ಹೃದಯವೂ ಕರಗುವಂತೆ, ಅಲ್ಲಲ್ಲಿ ರೇಡಿಯೋದಲ್ಲಿ, ಟಿವಿಯಲ್ಲಿ, ಮೊಬೈಲ್ ನಲ್ಲಿ, ಗುನುಗುವ ಹಾಡುಗಳು ಮೈ ನವಿರೇಳಿಸುತ್ತವೆ, ಸುಮಧುರ ಭಾವ ಕೊಟ್ಟು ಪುಳಕಿತವಾಗಿಸುತ್ತವೆ,,,, ಈ ಎಲ್ಲ ಹಾಡುಗಳ ಹಿಂದೆ, ಒಬ್ಬ ಬರಹಗಾರ, ಒಬ್ಬ ಸಂಗೀತ ತಜ್ಞ, ಖಂಡಿತವಾಗಿಯೂ ಇರುತ್ತಾರೆ,,,,,, ಇವರಿಬ್ಬರ ಮಿಡಿತಗಳು ಸರಿಯಾಗಿ ಸಮ್ಮಿಳಿತಗೊಂಡರೆ ಸುಂದರ ರಸದೌತಣ (ಕೆಲವೊಮ್ಮೆ ಯಾವುದೇ ಮ್ಯೂಸಿಕ್ ಇಲ್ಲದೆಯೇ ಹಾಡುಗಳು ಮತ್ತು ಅವುಗಳ ಸಾಹಿತ್ಯ ನಮ್ಮನ್ನು ಸೆಳೆಯುವುದು ಗಮನಾರ್ಹ).

ನಾನು ಹಾಡುಗಳ ಬರವಣಿಗಯ ಗೀಳಿಗೆ ಬಿದ್ದು, ಚಿಕ್ಕ ಅಧ್ಯಯನ ನಡೆಸಲಾರಂಭಿಸಿದೆ, ಆಗ ಸಿಕ್ಕ ಒಂದು ಸುಂದರ ಕೃತಿ ಎಂದರೆ “ಹೃದಯಶಿವ”, ಪಂಜು ಪಂಜು ಪತ್ರಿಕೆಗಾಗಿ ಬರೆದ ಅವರ ಸಿನಿಮಾ ಹಾಡುಗಳ ಬರವಣಿಗೆಯ ಹಿಂದಿನ ಅನುಭವಗಳು.

ಹೃದಯಶಿವ ಅವರ ಬರವಣಿಗೆಯನ್ನು ಒಟ್ಟುಗೂಡಿಸಿ ಇಲ್ಲಿ ಹಾಕಿದ್ದೇನೆ, ಬೇಕಾದವರು ದಾರಾಳವಾಗಿ ಡೌನ್ಲೋಡ್ ಮಾಡಿಕೊಂಡು ಓದಿ,,,,,,(hrudayashiva <<——ಇಲ್ಲಿ ಡೌನ್ಲೋಡ್ ಮಾಡಿ) ಜೊತೆಗೆ ಹೃದಯಶಿವನ ಹೃದಯ ಮಿಡಿತಕ್ಕೆ ಧನ್ಯವಾದಗಳನ್ನು ತಿಳಿಸಲು ಮರೆಯದಿರಿ.

ಯಾರಿಗಾದರೂ ಇಂತಹದೇ ಅಪೂರ್ವ ಬರಹಗಳು ದೊರಕಿದಲ್ಲಿ ಹಂಚಿಕೊಳ್ಳಲು ಮರೆಯದಿರಿ,

ಸಾವಿರಾರು ಭಾಷೆಗಳನ್ನು ಕಲಿತರೂ ಕನ್ನಡಿಗರಾಗಿಯೇ ಉಳಿಯೋಣ,,,,,,,,, ಭಾವಗಳನ್ನು ಬೆಸೆಯುತ್ತಾ, ಕನ್ನಡದ ಆಕಾಶಕ್ಕೆ ಇನ್ನಷ್ಟು ಮಧುರ ಗೀತೆಗಳನ್ನು ನಕ್ಷತ್ರವಾಗಿಸೋಣ.

-ಜಿ ಕೆ ನ

Advertisements
2 ಟಿಪ್ಪಣಿಗಳು
  1. ಎಷ್ಟು ಒಳ್ಳೆ ಮಾಹಿತಿ ಒದಗಿಸಿದ್ದಕ್ಕೆ ಧನ್ಯವಾದಗಳು ತಮ್ಮಾ.

    Liked by 1 person

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: