Skip to content

ಗೋದಿಬಣ್ಣದ ಮನಸೆಳೆವ ವೆಂಕೋಬ್,

ಜೂನ್ 23, 2016

ಹೇಮಂತ್ ಅವರ “ಗೋದಿ ಬಣ್ಣ ಸಾದಾರಣ ಮೈಕಟ್ಟು” ಸಿನಿಮಾ ನೋಡಿದೆ, ಸಿನಿಮಾದ ಹಿಂದಿನ ಶ್ರಮ ಶ್ಲಾಘನೀಯ, ಇತ್ತೀಚಿಗೆ ಬಂದ ಕನ್ನಡದ ಅತ್ಯುತ್ತಮ ಚಿತ್ರಗಳಲ್ಲಿ ಇದೂ ಒಂದು.

ಹೊಟ್ಟೆ ಪಾಡಿಗಾಗಿ ಕೇರಳದ ಮಡಿಲಲ್ಲಿ ಬದುಕುವ ನಾನು, ಸಿನಿಮಾದ ಕಲಿಕೆಯ ಹುಚ್ಚು ಹಿಡಿಸಿಕೊಂಡು, ಸಿನಿಮಾವನ್ನು ಆರಾಧಿಸುತ್ತಾ, ಅನೇಕ ಅದ್ಭುತ ಮಲಯಾಳಂ ಸಿನಿಮಾಗಳನ್ನು ಮಲಯಾಳಿ ಗೆಳೆಯರೊಂದಿಗೆ ನೋಡುತ್ತೇನೆ. ಆಗೆಲ್ಲ ಅವರು ನನಗೆ ಕಿಚಾಯಿಸುವುದುಂಟು, “ಏನಪ್ಪಾ ನಿಮ್ಮ ಕನ್ನಡದಲ್ಲಿ ಇಂತಹ ಸಿನಿಮಾಗಳು ಇವೆಯಾ? ಇಷ್ಟು ಕ್ರಿಯಾಶೀಲ ಚಿತ್ರಕಥೆಗಳಿವೆಯ? ಎಂದು”. ಆಗೆಲ್ಲ ನಾನು ಹಳೆಯ ಪುಟ್ಟಣ್ಣನವರ, ಉಪೇಂದ್ರರ, ಹಾಗೂ ಇನ್ನಿತರರ ಸಿನಿಮಾಗಳ ಉದಾಹರಣೆ ಕೊಟ್ಟು ಮಾತಿನಲ್ಲಿ ಗೆಲ್ಲಲು ಪ್ರಯತ್ನಿಸುತ್ತಿದ್ದೆ, ಇತ್ತೀಚಿಗೆ ಕೊನೆಗೆ ಲೂಸಿಯಾ, ಉಳಿದವರು ಕಂಡಂತೆ, ಇತ್ಯಾದಿ ಚಿತ್ರಗಳು ನನಗೆ ಸಮಾಧಾನ ನೀಡಿದವು, ಮಲಯಾಳಿ ಗೆಳೆಯರೂ ಆ ಸಿನಿಮಾಗಳನ್ನು ಮೆಚ್ಚಿಕೊಂಡರು.

ಇದೀಗ ನಾನು ಮತ್ತೆ ಗೆಲ್ಲುವ ಸರದಿ,,,, ನನ್ನ ಗೆಳೆಯರಿಗೆ “ಗೋದಿ ಬಣ್ಣ ಸಾದಾರಣ ಮೈಕಟ್ಟು” ಎಂಬ ಅದ್ಭುತ ಪ್ರಯತ್ನದ ಬಗ್ಗೆ ಹೇಳಿದೆ, ಅನಂತ್-ನಾಗ್ ನಟನೆಯ ಬಗ್ಗೆ ಟ್ರೈಲರ್ ತೋರಿಸಿದೆ. ಒಂದು ಸಿನಿಮಾ ಗೆದ್ದು ಅದೆಷ್ಟು ಜನರನ್ನು ಗೆಲ್ಲಿಸುತ್ತದೆ ಅಲ್ಲವಾ,,,,

ಈ ಅದ್ಭುತ ಪ್ರಯತ್ನಕ್ಕಾಗಿ, ನಾನು ಹೇಮಂತ್ ಅವರನ್ನು ಮತ್ತು ಅವರಿಗೆ ಸಹಕರಿಸಿದ ನಿರ್ಮಾಪಕರನ್ನು ಹಾಗೂ ಇಡೀ ತಂಡವನ್ನು ಅಭಿನಂದಿಸುತ್ತೇನೆ.maxresdefault

ಗೋದಿ ಬಣ್ಣ ಸಾದಾರಣ ಮೈಕಟ್ಟು ಸಿನಿಮಾದ ಶಕ್ತಿ ಇರುವುದು, ಅದರ ಕಥೆಯಲ್ಲಿ ಹಾಗು ಅನಂತ್ ನಾಗ್ ಅವರ ನಟನೆಯಲ್ಲಿ, ಸಿನಿಮಾವನ್ನು ನೋಡದವರು ದಯವಿಟ್ಟು ಥಿಯೇಟರ್ ಗೆ ಹೋಗಿ ಸಿನಿಮಾ ನೋಡಿ, ಕೊಟ್ಟ ಹಣಕ್ಕೆ ಯಾವುದೇ ಮೋಸವಿಲ್ಲ, ಈ ಸಿನಿಮಾ ವೀಕ್ಷಣೆಗೆ ವಯಸ್ಸಿನ ಹಂಗಿಲ್ಲ, ಲಿಂಗಭೇದವಿಲ್ಲ, ಮನೆ ಮಂದಿ ಒಂದಾಗಿ ಮತ್ತಷ್ಟು ಪ್ರೀತಿಸುವುದನ್ನು ಕಲಿಸುತ್ತದೆ.

ಅಪ್ಪ ಎಂದರೆ ಆಕಾಶ ಎನ್ನುವ ಮಣಿಕಾಂತರ ಮಾತಿನಂತೆ,,,,, ಅಪ್ಪ ಎಂದರೆ ನಮ್ಮ ಕೈಯ ನಕ್ಷತ್ರ, ಅಪ್ಪ ಎಂದರೆ ಅದ್ಭುತ, ಅಪ್ಪ ಎಂದರೆ ವಿಸ್ಮಯ, ಹೀಗೆ ಅಪ್ಪನ ಪ್ರೇಮವನ್ನು ಎಳೆ ಎಳೆಯಾಗಿ ಬಿಡಿಸಿ ನಮ್ಮನ್ನು ಇನ್ನಷ್ಟು ಪ್ರೇಮಮಯವಾಗಿಸುತ್ತದೆ.

ಈ ಸಿನಿಮಾ ಒಂದು ಸಾಹಿತ್ಯದಷ್ಟೇ ಗಟ್ಟಿ ಇದೆ,,,,
ಮನೆಯವರೆಲ್ಲರ ಕೈ ಹಿಡಿದು ಸಿನಿಮಾ ಥಿಯೇಟರಿಗೆ ಕಾಲಿಡಿ,,,,, ಸಿನಿಮಾ ತಂತಾನೆ ನಿಮ್ಮನ್ನು ಅದರೊಳಗಿನ ಒಬ್ಬ ಪಾತ್ರದಾರಿಯನ್ನಾಗಿ ಮಾಡುತ್ತದೆ.

ಥಿಯೇಟರಿನಿಂದಾ ಹೊರಬರುವಾಗ, ನಿಮ್ಮ ಕೆನ್ನೆಯ ಮೇಲೆ ಒಂದು ಚಿಕ್ಕ ಹನಿ ನೀರಿರುತ್ತದೆ, ಅದು ನಿಮ್ಮದೇ ಕಣ್ಣೀರು. ಮೌನವಾಗಿ ಅದನ್ನು ಆಸ್ವಾದಿಸಿ,

ಹೇಮಂತ್, ಇನ್ನಷ್ಟು ಅದ್ಭುತ ಸಿನಿಮಾಗಳನ್ನು ಕೊಡಿ,

-ಜಿ ಕೆ ನ

Advertisements
ನಿಮ್ಮ ಟಿಪ್ಪಣಿ ಬರೆಯಿರಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: