Skip to content

ಅಯ್ಯೋ ನನಗ್ಯಾಕೆ ನೆನಪಾಗುತ್ತಿಲ್ಲ, “ಮರೆತು”ಬಿಟ್ಟೆನೆ ?

ಜೂನ್ 24, 2016

ಇದೇ ಪೆನ್ನಿನ ತುದಿಯಿಂದ
ಗೀಚಿ ಗೀಚಿ ಗೀಚಿ,,,ಚಿ ಚಿ ಚಿ
ಬರೆದು ಕಲಿತ
ಉತ್ತರಗಳ್ಯಾಕೆ ನೆನಪಾಗುತ್ತಿಲ್ಲ,,,

ನಿನ್ನೆ ಮೊನ್ನೆಯೆಲ್ಲ ಕುಳಿತು
ಲೀಲಾಜಾಲವಾಗಿ ಬಾಯಿಪಾಠ ಮಾಡಿ,
ಸರಿಯಾಗಿ ಪರೀಕ್ಷೆಯಲ್ಲಿ ಹಾರಿಹೋದವು,
ಈ ಹಾಳಾದ ಉತ್ತರಗಳು,,,,,,

ಮರೆತುಹೋಗುವುದು ಉತ್ತರ ಮಾತ್ರ,,,,
ಪ್ರಶ್ನೆಗಳು, ಎಂದೂ ಮರೆತು ಹೋಗುವುದಿಲ್ಲ,,,,,

ಸರಿಯಾದ ಸಮಯಕ್ಕೆ ಕೈಕೊಟ್ಟು ಬಿಡುತ್ತವೆ,,,,
ಥೇಟ್, ನಾವು ನಂಬಿದ ಸಂಬಂಧಗಳ ಹಾಗೆ.

ಮರೆವು, ಮೊರೆವ ದೂರವೆಷ್ಟು ?

ಅವ್ವ ತಾನು ಹೊಟ್ಟೆಗೆ ತಿನ್ನದೆ,
ಹಸಿವನ್ನು “ಮರೆತು”
ನಮಗಾಗಿ ಮಡಿಕೆಯಲ್ಲಿ ಮುಚ್ಚಿಟ್ಟ ಮುದ್ದೆಯಂತೆ.
ನಗರದ ಟ್ರಾಫಿಕ್ಕಿನಲ್ಲಿ ಅವ್ವನ ತ್ಯಾಗವನು ನಾನು ಮರೆತಾಗಿದೆ.

ಅಣ್ಣ,,, ತಾನು ಚಿತ್ರ ಬರೆಯಬೇಕೆಂದು ತಂದಿಟ್ಟುಕೊಂಡ
ಹೊಸ ಪೆನ್ಸಿಲ್ಲಿನ ತುದಿಯನ್ನು ಚೂಪು ಮಾಡಿ,
ಅವನ ಚಿತ್ರವನ್ನು “ಮರೆತು”
ನನ್ನ ಬ್ಯಾಗಿಗೆ ತುರುಕಿ,,, ಪರೀಕ್ಷೆಗೆ ಆಲ್ ದ ಬೆಸ್ಟ್ ಹೇಳಿ ಕಳುಹಿದನಲ್ಲ,,,
ಈ ಬಣ್ಣಗಳ ಜಗತ್ತಿನಲ್ಲಿ ನಾನು ಅವನ ಚಿತ್ರವನ್ನು ಮರೆತಾಗಿದೆ,,,

ಹರಿದ ಅಂಗಿಯ ಅಪ್ಪ,,,,
ಅವನು ಬದುಕಿದ್ದಾನೆ ಎನ್ನುವುದನೆಯೇ “ಮರೆತು”,
ರಕ್ತ ಬಸಿದು ದುಡಿದು ತಂದುಕೊಟ್ಟನಲ್ಲ,
ಆ ಹೊಸದೊಂದು ಅಂಗಿ,
ಚಿತ್ರ ವಿಚಿತ್ರ ಪ್ಯಾಷನ್ನುಗಳಲ್ಲಿ, ಮರೆತುಹೋಗಿದೆ ಅಪ್ಪನ ತ್ಯಾಗ,,,

ಹೊಸದೊಂದು ಲಂಗ ಕೊಳ್ಳಲು, ಅಕ್ಕ ಕೂಡಿಟ್ಟ ಹಣವನ್ನು,
ಅವಳ ಹೊಸ ಬಟ್ಟೆಯ ಆಸೆ “ಮರೆತು”
ನನಗೆ ಪ್ರವಾಸಕ್ಕೆ ಕಳುಹಿದಳಲ್ಲ,
ದಿನ ಓಡುವ ದೈತ್ಯ ನಗರದಲಿ ಬದುಕಿರುವ ಹೆಮ್ಮೆಗೆ
ಮರೆತಿದ್ದೇನೆ ನಾನು, ಅವಳ ಆ ತ್ಯಾಗವನ್ನು.

ಇಷ್ಟೆಲ್ಲ ಮರೆತಿರುವಾಗ,,,,

ಉತ್ತರ ಮರೆತಿರುವುದು ಉತ್ಪ್ರೇಕ್ಷೆಯಲ್ಲ,,,,,

ನನಗೀಗ ಪ್ರಶ್ನೆಗಳೇ ಆಹಾರ.

ಅಲ್ಲಾ,,,,, ನಿಮ್ಮನ್ನೆಲ್ಲ ಮರೆತರೂ,,
ನನ್ನ ನೆನೆಪಿಟ್ಟು ಪೊರೆಯುವಿರಲ್ಲಾ,,,,,,
ಅದೆಷ್ಟು ಪ್ರೇಮಮಯ ನೀವು ?

-ಜಿ ಕೆ ನ

Advertisements
2 ಟಿಪ್ಪಣಿಗಳು
  1. ನನ್ನ ಮರೆತರೆ
    ನಿನ್ನ ಕ್ಷಮಿಸಲಾರೆ
    ನಿನ್ನ ಮರೆಯುವ
    ಮನಸಂತು ಖಂಡಿತ
    ನಾ ಮಾಡಲಾರೆ
    ಮರೆಯುವುದ
    ಮರೆತರೇಗೆ?☺

    Liked by 1 person

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: