Skip to content

ಕಳೆದುಹೋಗುವುದು ನೇಗಿಲು,,

ಜೂನ್ 27, 2016

ತಣ್ಣನೆಯ ಮೈಯ ಹಾವೊಂದು,
ಬೆಚ್ಚನೆಯ ಗೂಡಿಗೆ ಹುಡುಕುತ್ತಾ ತೆವಳಿದೆ.
ಹಾಡು ಹಾಡುವ ಪುಂಗಿದಾಸ ಅಡ್ಡಗಟ್ಟಿದ್ದಾನೆ.
ತಪ್ಪಿಸಿಕೊಂಡು ಓಡಲು ಕಾಲಿಲ್ಲ,,,,,,
ಬಳಸದೆ ಕಾಲು ಕಳೆದುಕೊಂಡ ಕರ್ಮಕ್ಕೆ
ಹಾವು ಮೂಖವಾಗಿದೆ,

ನೇಗಿಲು ಬಳಸುವುದ ತಡೆ ಹಿಡಿಯಲಾಗಿದೆ,,,,
ಯಾವಾಗ ಮಾಯವಾಗುವೊದೋ ಅದು,,,,
ಹಾವಿನ ಕಾಲಿನಂತೆ,,,

ಪ್ರಿಯ ರಾಜಕಾರಣಿಗಳೇ,,,,
ವಿಷ ಕೊಟ್ಟು ಕೊಲ್ಲದಿರಿ, ನಮ್ಮ ಹೆತ್ತ ರೈತನನ್ನು,,,,
ವಿಧಾನಸೌಧ ಬಿಟ್ಟು,,,, ಇದ್ದು ನೋಡಿ ಹೊಲದ ಮದ್ಯದ ಗುಡಿಸಲಲ್ಲಿ.
ರಾತ್ರಿ ಇಡೀ ಲಗ್ಗೆ ಇಡುವ ಹಂದಿಗಳು,
ಹಗಲಿಡೀ ಉಪಟಳಿಸುವ ಹೆಗ್ಗಣಗಳು,,,,
ನೀವು ಅವಕ್ಕಿಂತಲೂ ಕಡೆ,
ಅವು ಬೇಕೆಂದಷ್ಟು ಮಾತ್ರ ತಿಂದು ಸುಮ್ಮನಾಗುತ್ತವೆ,,,
ನೀವು, ರೈತನ ರಕ್ತವನ್ನೇ ಹೀರುವಿರಿ,,,,

ವಿದೇಶಿ ಕಂಪನಿಗಳ ಸಗಣಿ ಎತ್ತಿ,,,
ಅವರ ಕಾಸನ್ನು ಗುಳುಂ ಮಾಡಿ,
ನಮ್ಮ ಮಾನವತೆಯನ್ನು ಅವರಿಗೆ ಮಾರಿದ ಹೊಲಸು ಹೆಮ್ಮೆ ನಿಮಗೆ,,,
ಹೆತ್ತ ಮಗ ನೇಗಿಲು ಬದಿಗಿಟ್ಟು, ನಗರ ಸೇರಿ
ಅಲ್ಲಿ ಬದುಕುತ್ತಲೇ ಹುತಾತ್ಮನಾದ ನೋವು ರೈತನಿಗೆ,

ಒಂದೊಮ್ಮೆ ದೇಶ ಬರಡಾಗುತ್ತದೆ,,,ರೈತನಿಲ್ಲದೆ
ಆಗ ಹೊಟ್ಟೆಗೆ ಸಾಫ್ಟ್-ವೇರುಗಳನ್ನು ತಿನ್ನಲಾಗುವುದಿಲ್ಲ.

ಕಾಲಮಿಂಚುವ ಮುನ್ನ, ಕಣ್ಣು ಬಿಡಿ ಬೇಗ,,,,

-ಜಿ ಕೆ ನ

Advertisements
ನಿಮ್ಮ ಟಿಪ್ಪಣಿ ಬರೆಯಿರಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: